ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ಧರ್ಮಸ್ಥಳ ಯೋಜನೆಯಿಂದ ಉಚಿತ ತರಬೇತಿ ಪಡೆದು ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು, ಸ್ವ ಉದ್ಯೋಗ, ಸಹಕಾರ, ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ, ಔದ್ಯೋಗಿಕರಣ ಮತ್ತು ಸಾಮಾಜಿಕ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಮುಂದುವರೆದಿದ್ದಾರೆ ಯಾವುದೆ ಜಾತಿ ಮತ ಬೇಧವಿಲ್ಲದೆ ಏಕತೆಯಿಂದ ಬಿಂಬಿಸುತ್ತದೆ, ಮಹಿಳೆಯರು ಆರ್ಥಿಕ, ಸಾಮಾಜಿಕ ಸ್ವಾವಲಂಬನೆ ಯೋಜನೆಯ ಉದ್ದೇಶವಾಗಿದೆ ಎಂದು ಯುಎಮ್‌ಇ ಶಾಲೆಯ ಮುಖ್ಯಗುರು ಶೇಖ ಸಾಹೇರಾ ಹೇಳಿದರು.

ನಗದದ ಹಳೆ ಶಹಾಬಾದ ವಲಯದ ಮಿಲತ ನಗರ ಕಾರ್ಯಕ್ಷೇತ್ರದ ‘ಓಬವ್ವ’ ಜ್ಞಾನವಿಕಾಸ ಕೇಂದ್ರದಲ್ಲಿ ಸೃಜನಶೀಲ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕ ಸದೃಢತೆ ಹೊಂದಿದರೆ ಸ್ವಾವಲಂಬನೆಗೆ ದಾರಿಯಾಗುತ್ತದೆ ಎಂದರು.

ಪ್ರಾದೇಶಿಕ ವಿಭಾಗದ ಜ್ಞಾನ ವಿಕಾಸ ಯೋಜನಾಧಿಕಾರಿ ಜ್ಯೋತಿ ಜೋಳದ ಮಾತನಾಡಿ, ತರಬೇತಿ ಪಡೆದ ಮಹಿಳೆಯರು ಆಯಾ ಕ್ಷೇತ್ರದಲ್ಲಿ ಇನ್ನಷ್ಟು ಜ್ಞಾನ ಪಡೆದು ಸ್ವಂತ ಉದ್ಯೋಗ ಸೃಷ್ಟಿಸಿ ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕಬೇಕು, ತಾವು ತಯಾರಿಸಿದ
ವಸ್ತುಗಳನ್ನು ಮಾರಾಟ ಮಾಡುವ ಜ್ಞಾನ ಪಡೆದು ಉದ್ಯಮ ಕ್ಷೇತ್ರದಲ್ಲಿ ಬೆಳೆಯಬೇಕು ಎಂದರು.

ವೇದಿಕೆ ಮೇಲೆ ಜನಜಾಗೃತಿ ವೇದಿಕೆ ಸದಸ್ಯ ವಾಸುದೇವ ಚವ್ಹಾಣ್, ಒಕ್ಕೂಟದ ಅಧ್ಯಕ್ಷೆ ಸುನೀತಾ ಮತ್ತು ಸೃಜನಶೀಲ ಶಿಕ್ಷಕಿ ಜಗದೇವಿ ಭೂಮಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಅರ್ಚನಾ ಮತ್ತು ವಲಯ ಮೇಲ್ವಿಚಾರಕ ಸದಾಶಿವ ಇದ್ದರು.

ಕಾರ್ಯಕ್ರಮವನ್ನು ಪೂಜಾ, ಮೀನಾಕ್ಷಿ ಸ್ವಾಗತಿಸಿದರು, ಸೇವಾ ಪ್ರತಿನಿಧಿ ಗುರುಬಾಯಿ ಸ್ವಾಗತಿಸಿದರು, ಭುವನೇಶ್ವರಿ ನಿರೂಪಿಸಿದರು.

Leave a Reply

Your email address will not be published. Required fields are marked *