ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್‌ ನ್ಯೂಸ್‌: ನ.16ರಿಂದ ಹಳದಿ ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇರ್ಪಡೆ

ನಗರದ

ಸುದ್ದಿ ಸಂಗ್ರಹ ಬೆಂಗಳೂರು
ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್‌ ನ್ಯೂಸ್‌ ಸಿಕ್ಕಿದೆ. ನ.16 ರಿಂದ ಹಳದಿ ಮಾರ್ಗದಲ್ಲಿ ಪ್ರಯಾಣಿಕರ ಸೇವೆಗೆ ಹೆಚ್ಚುವರಿ ರೈಲು ಸೇರ್ಪಡೆಯಾಗಿದೆ.

ಬಿಎಂಆರ್‌ಸಿಎಲ್ ನ.16ರಿಂದ ಮೆಟ್ರೋದ ಹಳದಿ ಮಾರ್ಗದಲ್ಲಿ ಪ್ರಯಾಣಿಕರ ಸೇವೆಗೆ ಒಂದು ಹೆಚ್ಚುವರಿ ರೈಲ ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಸಾರ್ವಜನಿಕರಿಗೆ ತಿಳಿಸಲು ಹರ್ಷಿಸುತ್ತದೆ. ಈ ಹೆಚ್ಚುವರಿ ರೈಲಿನ ಸೇರ್ಪಡೆಯೊಂದಿಗೆ ಹಳದಿ ಮಾರ್ಗದಲ್ಲಿ ಪ್ರತಿದಿನ ಒಟ್ಟು 13 ರೈಲುಗಳು ಸಂಚರಿಸಲಿದ್ದು, ರೈಲುಗಳ ಸಂಚಾರದ ಆವರ್ತನವನ್ನು ಹೆಚ್ಚಿಸುವ ಮೂಲಕ ಪ್ರಯಾಣಿಕರ ಕಾಯುವ ಸಮಯವನ್ನು ಕಡಿಮೆ ಮಾಡಲಾಗುವುದು.

ಸೋಮವಾರದಿಂದ ಶುಕ್ರವಾರದವರೆಗೆ
ದಟ್ಟಣೆಯ ಅವಧಿಯಲ್ಲಿ: ಪ್ರಸ್ತುತ ಇರುವ 6 ನಿಮಿಷಗಳ ಅಂತರದ ಬದಲಾಗಿ ಪ್ರತಿ 5.5 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸಲಿವೆ.

ಶನಿವಾರ ಮತ್ತು ರವಿವಾರ
ವಾರಾಂತ್ಯದ ದಿನಗಳಲ್ಲಿ ಎಂದಿನಂತೆ ದಿನವಿಡೀ ಪ್ರತಿ 10 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸಲಿವೆ.

ವಾರದ ಯಾವುದೇ ದಿನಗಳಲ್ಲಿ ಹಳದಿ ಮಾರ್ಗದ ಕೊನೆಯ ನಿಲ್ದಾಣಗಳಾದ ಆರ್.ವಿ ರಸ್ತೆ ಮತ್ತು ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳ ಸಮಯದಲ್ಲಿ ಯಾವುದೆ ಬದಲಾವಣೆ ಇರುವುದಿಲ್ಲ. ಪ್ರಯಾಣಿಕರು ಪರಿಷ್ಕೃತ ರೈಲು ಸಂಚಾರದ ಆವರ್ತನವನ್ನು ಗಮನದಲ್ಲಿಟ್ಟುಕೊಂಡು, ಸುಧಾರಿತ ಮೆಟ್ರೋ ಸೇವೆಗಳ ಸದುಪಯೋಗ ಪಡೆದುಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡುತ್ತದೆ.

Leave a Reply

Your email address will not be published. Required fields are marked *