ಸುದ್ದಿ ಸಂಗ್ರಹ ನವದೆಹಲಿ
ಸೆ.19ರಿಂದ ಮುಂಗಾರು ಮಳೆ ನಿರ್ಗಮನ ಪ್ರಕ್ರಿಯೆ ಶುರುವಾಗಿದ್ದು, ಅಕ್ಟೋಬರ್ 15ಕ್ಕೆ ಅಂತ್ಯವಾಗಲಿದೆ.
ಎಲ್‌ನಿನೋ ಎಫೆಕ್ಟ್‌ನಿಂದಾಗಿ ಈಬಾರಿ ದೇಶದಲ್ಲಿ ಶೇ.51ರಷ್ಟು ಮಳೆ ಕೊರತೆಯಾಗಿದೆ. ಇದು 17 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆ ಕಂಡ ವರ್ಷವಾಗಿದೆ. ಹಾಗಾಗಿ, 1950ರ ಬಳಿಕ 76 ವರ್ಷಗಳಲ್ಲೇ ಅತ್ಯಂತ ಒಣಹವೆ ಕಂಡ ವರ್ಷವಾಗಿದೆ. ವಾಡಿಕೆಯಂತೆ ಕರ್ನಾಟಕದಲ್ಲಿ 814.2 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 570.3 ಮಿ.ಮೀ. ಮಳೆಯಗಿದೆ. ಹಾಗಾಗಿ, ಶೇ.30ರಷ್ಟು ಮಳೆ ಕೊರತೆಯಾಗಿದೆ.
ಇದೆ ರೀತಿ ಕರ್ನಾಟಕ ಸೇರಿ 14 ರಾಜ್ಯಗಳಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ಅದರಲ್ಲೂ ಮೇಘಾಲಯದಲ್ಲಂತೂ ಶೇ.61ರಷ್ಟು ಮಳೆ ಅಭಾವವಾಗಿದೆ. ಲಡಾಖ್ 123%, ದಾದರ್-ನಗರ್ ಹವೇಲಿ, ಡಿಯು-ದಮನ್‌ಗಳಲ್ಲಿ 37% ಮತ್ತು ಒಡಿಶಾದಲ್ಲಿ ಶೇ.30ರಷ್ಟು ಹೆಚ್ಚುವರಿ ಮಳೆಯಾಗಿದೆ. ಹಾಗಾಗಿ, ಇಡಿ ದೇಶದಲ್ಲೆ ಈ ವರ್ಷವನ್ನು ಬರಗಾಲ ಅಂತ ಘೋಷಿಸುವ ಎಲ್ಲಾ ಸಾಧ್ಯತೆಗಳಿವೆ.