ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ವಿಶ್ವ ನಾಯಕ, ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಅವರ 76ನೇ ಜನ್ಮದಿನವನ್ನು ಅತ್ಯಂತ ಹರ್ಷೋಲ್ಲಾಸದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜಿರೋಳ್ಳಿ ಮಾತನಾಡಿ, ಮೋದಿಯವರ ಜನ್ಮದಿನದ ಪ್ರಯುಕ್ತ ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ದೇಶಾದ್ಯಂತ ಸಾರ್ವಜನಿಕರಿಗೆ ಸಿಹಿ ಮತ್ತು ಲಾಡುಗಳನ್ನು ಹಂಚಿ ಸಂಭ್ರಮಿಸಿದ್ದಾರೆ. ಇಂದಿನಿಂದ ಅಕ್ಟೋಬರ್ 17ರ ವರೆಗೆ ಒಂದು ತಿಂಗಳ ಕಾಲ ‘ಸೇವಾ ಸಂಕಲ್ಪ ಅಭಿಯಾನ’ ಹಮ್ಮಿಕೊಳ್ಳಲಾಗಿದೆ, ಇದರ ಭಾಗವಾಗಿ ರಕ್ತದಾನ ಶಿಬಿರಗಳು, ಉಚಿತ ಆರೋಗ್ಯ ತಪಾಸಣೆ ಮತ್ತು ಸ್ವಚ್ಛತಾ ಕಾರ್ಯಕ್ರಮಗಳು ದೇಶಾದ್ಯಂತ ಜರುಗಲಿವೆ ಎಂದರು.
ಕಾರ್ಯಕ್ರಮದಲ್ಲಿ ನೆರೆದಿದ್ದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಜಿ ಅವರ ಭಾವಚಿತ್ರಕ್ಕೆ ಸಿಹಿ ತಿನಿಸುವುದರ ಮೂಲಕ ಜನ್ಮದಿನಕ್ಕೆ ಶುಭ ಕೊರಿದರು. ತದನಂತರ ನೆರೆದಿದ್ದ ಸಾರ್ವಜನಿಕರಿಗೆ ಹಾಗೂ ಕಾರ್ಯಕರ್ತರಿಗೆ ಪರಸ್ಪರ ಸಿಹಿ ಹಂಚಿದರು. ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ದೇಶದ ಹೆಮ್ಮೆಯ ನಾಯಕನಿಗೆ ದೇವರು ದೀರ್ಘ ಆಯಸ್ಸು, ಆರೋಗ್ಯ ಮತ್ತು ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸಿದರು.
ಕಚೇರಿಯಲ್ಲಿ ಕಾರ್ಯಕರ್ತರು ಜಯಘೋಷಿಸಿದರು. ಪ್ರಧಾನಿಯವರ ಜನಪರ ಯೋಜನೆಗಳು ಮತ್ತು ದೇಶ ಸೇವೆ ನಮಗೆಲ್ಲರಿಗೂ ಸದಾ ಪ್ರೇರಣೆಯಾಗಿದೆ ಎಂದು ಮುಖಂಡರು ಮೋದಿಜಿ ಗುಣಗಾನ ಮಾಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ,
ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಬಸವರಾಜ ಪಂಚಾಳ, ಅಶೋಕ ಹರನಾಳ, ಅರ್ಜುನ ಕಾಳೆಕರ, ಹರಿ ಗಲಾಂಡೆ, ಅಶೋಕ ಪವಾರ, ರಿಚರ್ಡ್ ಮಾರೆಡ್ಡಿ, ಪ್ರಕಾಶ ಪುಜಾರಿ, ಮಲ್ಲಿಕಾರ್ಜುನ ಸಾತಖೇಡ, ಆನಂದ ಇಂಗಳಗಿ, ಗುಂಡುಗೌಡ ಚಾಮನೂರ, ದೇವೇಂದ್ರ ಬಡಿಗೇರ, ಗೋಪಾಲರಾವ ಸುತ್ರಾವೆ, ಚಂದ್ರಶೇಖರ ಬೆಣ್ಣೂರ, ಯಂಕಮ್ಮ ಗೌಡಗಾಂವ, ನಿರ್ಮಲಾ ಇಂಡಿ, ಮೋನಪ್ಪ ಪಂಚಾಳ, ಶ್ರೀಧರ ಪಂಚಾಳ ಸೇರಿದಂತೆ ಅನೇಕರು ಇದ್ದರು.