ಕಲಬುರಗಿ ತಾಲೂಕಿನ ಅವರಾದ (ಬಿ) ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನ ಆಚರಣೆ ಮಾಡಲಾಯಿತು. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಭೋಜನ ಗೌಡ, ರಾಜೇಶ ನಾಗೂರೆ, ಪ್ರದೀಪ್ ಕುಮಾರ, ದಯಾನಂದ ರನ್ನು ಸನ್ಮಾನಿಸಲಾಯಿತು. ದಾದಾಸಾಹೇಬ, ಶಿವಶರಣಪ್ಪ ವಚ್ಚಾ, ಸಂತೋಷ ಚಿಕ್ಕಬಸ್ತಿ, ಗೋಪಾಲ ಚವ್ಹಾಣ, ಎಚ್. ಎಸ್.ಹಿರೇಮಠ, ಅನಿಲ್ ಕಿವಡೆ, ರೇವಣಸಿದ್ದಪ್ಪ ಮುಕ್ರಂಬಿ, ಮಲ್ಲಪ್ಪ ನಾಯ್ಕಡಿ, ಸಂಜೀವ ಕುಮಾರ, ರುದ್ರಪ್ಪ ಇದ್ದರು.
ಕಲ್ಯಾಣ ಕರ್ನಾಟಕದ ಯುವಜನತೆ ಎಲ್ಲಾ ಕ್ಷೇತ್ರದಲ್ಲೂ ಸಾಧಿಸಬೇಕು…..ಸುದ್ದಿ ಸಂಗ್ರಹ ಕಲಬುರಗಿ
ಕಲ್ಯಾಣ ಕರ್ನಾಟಕದ ಜನರು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಿ, ದೊಡ್ಡ ಸಾಧನೆಗಳನ್ನು ಮಾಡಬೇಕು ಎಂದು ಪ್ರಭಾರಿ ಪ್ರಾಂಶುಪಾಲ ಸಂತೋಷ ಚಿಕ್ಕಬಸ್ತಿ ಹೇಳಿದರು…..ತಾಲೂಕಿನ ಅವರಾದ್ (ಬಿ) ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಜನರು ತಮ್ಮ ಎಲ್ಲೆಯನು ಮೀರಿ ಎಲ್ಲ ಭಾಗದಲ್ಲಿಯೂ ಸಾಧನೆ ಮಾಡಬೇಕು ಮತ್ತು ಋಣಾತ್ಮಕ ಅಂಶವನ್ನು ತೆಗೆದುಹಾಕಿ ಧನಾತ್ಮಕ ಆಲೋಚನೆ ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸ ಮಾಡಿ ಈ ಭಾಗದ ಕೀರ್ತಿ ಹೆಚ್ಚಿಸಬೇಕು ಎಂದರು……ಹಿರಿಯ ಶಿಕ್ಷಕ ದಾದಾಸಾಹೇಬ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಜನರು ಎಲ್ಲಾ ರಂಗದಲ್ಲೂ ಮುಂದೆ ಬರಬೇಕು, 371(ಜೆ)ನ ಉಪಯೋಗ ಈ ಭಾಗದ ಜನರು ಪಡೆದುಕೊಳ್ಳಬೇಕು ಎಂದರು.…ಶಿಕ್ಷಕ ಶಿವಶರಣಪ್ಪ ವಚ್ಚಾ ಅವರು ಕಲ್ಯಾಣ ಕರ್ನಾಟಕ ವಿಮೋಚನೆ ದಿನಾಚರಣೆಯ ಮಹತ್ವವನ್ನು ಸವಿಸ್ತಾರವಾಗಿ ವಿವರಿಸಿದರು ಮತ್ತು ರಜಕಾರ ಹಾವಳಿಯನ್ನು ವಿವರಿಸಿ, ಕಾಟೊ, ಲುಟೊ, ಬಾಟೋ ತತ್ವವನ್ನು ಅನುಸರಿಸಿದ ಗೋರ್ಟದ ದುರಂತವನ್ನು ತಿಳಿಸಿದರು……ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಾದ ಭೋಜನಗೌಡ, ರಾಜೇಶ ನಾಗೂರೆ, ಪ್ರದೀಪಕುಮಾರ ಮತ್ತು ದಯಾನಂದ ಅವರನ್ನು ಸನ್ಮಾನಿಸಲಾಯಿತು.….ಈ ಸಂದರ್ಭದಲ್ಲಿ ಪ್ರೌಢ ಶಾಲೆಯ ಮುಖ್ಯ ಗುರು ಗೋಪಾಲ ಚವ್ಹಾಣ, ಹಿರಿಯ ಪ್ರಾಥಮಿಕ ಶಾಲೆಯ ಮು.ಗು ಎಚ್.ಎಸ್ ಹಿರೇಮಠ, ಎಸ್’ಡಿಎಂಸಿ ಅಧ್ಯಕ್ಷ ಅನಿಲ್ ಕಿವಡೆ, ರೇವಣಸಿದ್ದಪ್ಪ ಮುಕ್ರಂಬಿ, ಮಲ್ಲಪ್ಪ ನಾಯ್ಕಡಿ, ಸಂಜೀವಕುಮಾರ, ರುದ್ರಪ್ಪ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಪ್ರೌಢ ಶಾಲೆ- ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಗ್ರಾಮದ ಗಣ್ಯ ವಕ್ತಿಗಳು ಇದ್ದರು. ….ಮಲ್ಲಪ್ಪ ನಾಯ್ಕೋಡಿ ಸ್ವಾಗತಿಸಿದರು, ಶಿಕ್ಷಕ ಸಂಜೀವಕುಮಾರ ಪಾಟೀಲ್ ನಿರೂಪಿಸಿದರು ಮತ್ತು ಶಿಕ್ಷಕ ರುದ್ರಪ್ಪ ವಂದಿಸಿದರು.