ವಾಡಿ: ಸಂಭ್ರಮದ ಕಲ್ಯಾಣ ಕರ್ನಾಟಕ ಉತ್ಸವ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನು ಮುಖಂಡರು ಸಂಭ್ರಮದಿಂದ ಆಚರಿಸಿದರು.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಹೈದರಾಬಾದ್ ವಿಮೋಚನಾ ಹೋರಾಟದಲ್ಲಿ 1948 ಮೇ 9ರಂದು ಬೀದರ್ ಜಿಲ್ಲೆಯ ಗೋರ್ಟಾ ಗ್ರಾಮದಲ್ಲಿ ನಡೆದ ಸ್ವಾತಂತ್ರ್ಯ ಸೇನಾನಿಗಳ ಹತ್ಯಾಕಾಂಡ ನೆನಸಿದರೆ ಇಂದಿಗೂ ಮೈ ಜುಮ್ ಎನ್ನುತ್ತದೆ ಎಂದರು.

ಗೋರ್ಟಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡದಿಂದ ಸಹನೆ ಕಳೆದುಕೊಂಡ‌‌ ಸೇನಾನಿಗಳು ಪ್ರತಿಕಾರವಾಗಿ ಹಲವು ರಜಾಕಾರರನ್ನು ಕೊಂದು ಹಾಕಿದರು. ಇದರಿಂದ ಮತಾಂಧನಾಗಿದ್ದ ರಜ್ವಿಗೆ ರೊಚ್ಚಿಗೆದ್ದು, ರಕ್ತದೋಕುಳಿಯೇ ಹರಿಸಿಬಿಟ್ಟ, ಎಲ್ಲಡೆ ಕೊಲೆ, ಸುಲಿಗೆ, ಅತ್ಯಾಚಾರಗಳು‌ ಹೆಚ್ಚಾದವು. ಆಗ ಹೋರಾಟಗಾರರು ಅಂದಿನ ಗೃಹಮಂತ್ರಿ, ಭಾರತ ಏಕೀಕರಣದ ರೂವಾರಿ ಉಕ್ಕಿನ ಮನುಷ್ಯ ಸರದಾರ ವಲ್ಲಭಭಾಯಿ ಪಟೇಲ್ ಅವರನ್ನು ಭೇಟಿಯಾದರು. ಪಟೇಲ್ ಅವರು ಖಾಸಿಂ ರಜ್ವಿಯ ಮಟ್ಟ ಹಾಕೋಕೆ ಪ್ಲ್ಯಾನ್ ಹಾಕಿದರು. ಇವರನ್ನು ಸದೆಬಡೆಯಲು ಮಿಲಿಟರಿ ಪಡೆ ಕಾರ್ಯಾಚರಣೆಗಿಳಿಸಲು ಚಿಂತಿಸಿದ್ದರು ಎಂದರು.

ಭಾರತ ಸರ್ಕಾರ ಮತ್ತು ನಿಜಾಮನ ಮಧ್ಯೆ ನಡೆದಿದ್ದ ಗಡಿ ಒಪ್ಪಂದ ‘ಸ್ಟ್ಯಾಂಡ್ ಸ್ಟಿಲ್ ಆಗ್ರಿಮೆಂಟ್’ ಪ್ರಕಾರ ಭಾರತೀಯ ಸೇನೆಯು ಹೈದರಾಬಾದ್‌ ಸರಕಾರವನ್ನು ಮುಟ್ಟುವಂತಿರಲಿಲ್ಲ. ಇದು ಕಾರ್ಯಚರಣೆಗೆ ಅಡ್ಡಿಯಾಗಿ ಮಿಲಿಟರಿ ಪಡೆಯನ್ನು ಕಾರ್ಯಚರಣೆಗೆ ಇಳಿಸಲು ಆಗಲಿಲ್ಲ. ಆಗ ಸರ್ದಾರ್ ವಲ್ಲಭಭಾಯಿ ಪಟೇಲ್‌ ಹಾಗೂ ಅಂಬೇಡ್ಕರ್ ಸೇರಿ ‘ಆಪರೇಷನ್‌ ಪೊಲೋ’ ಹೆಸರಿನಲ್ಲಿ ಪೊಲೀಸ್ ಕಾರ್ಯಚರಣೆ ನಡೆಸಿ, ಹೈದರಾಬಾದ್ ನಿಜಾಮನ ಹುಟ್ಟಡಗಿಸಿದರು. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಚತರುತೆ ಹಾಗೂ ಉಕ್ಕಿನ ಮನುಷ್ಯ ಪಟೇಲ್ ಅವರ ಗಟ್ಟಿತನದಿಂದ ಹೈದರಾಬಾದ್‌ ಕರ್ನಾಟಕ ವಿಮೋಚನೆಗೊಂಡಿದೆ ಎಂದು ಇತಿಹಾಸದ ಪುಟಗಳು ಸಾರುತ್ತಿವೆ ಎಂದರು.

ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ, ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜಿರೋಳ್ಳಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ,
ಮುಖಂಡರಾದ ಅಶೋಕ ಹರನಾಳ, ಅರ್ಜುನ ಕಾಳೆಕರ, ಹರಿ ಗಲಾಂಡೆ, ಅಶೋಕ ಪವಾರ, ರಿಚರ್ಡ್ ಮಾರೆಡ್ಡಿ, ಪ್ರಕಾಶ ಪುಜಾರಿ, ಮಲ್ಲಿಕಾರ್ಜುನ ಸಾತಖೇಡ, ಆನಂದ ಇಂಗಳಗಿ, ಗುಂಡುಗೌಡ ಚಾಮನೂರ, ದೇವೇಂದ್ರ ಬಡಿಗೇರ, ಗೋಪಾಲ ರಾವ ಸುತ್ರಾವೆ, ಚಂದ್ರಶೇಖರ ಬೆಣ್ಣೂರ, ಯಂಕಮ್ಮ ಗೌಡಗಾಂವ, ನಿರ್ಮಲಾ ಇಂಡಿ, ಮೋನಪ್ಪ ಪಂಚಾಳ, ಶ್ರೀಧರ ಪಂಚಾಳ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *