ಸುದ್ದಿ ಸಂಗ್ರಹ ಶಹಾಬಾದ
ತಾಲೂಕಿನ ತೊನಸನಳ್ಳಿ(ಎಸ್) ಗ್ರಾಮದ ಶ್ರೀಗುರು ಸಂಗಮೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರ 19ನೇ ಪೀಠಾಧಿಕಾರ ವರ್ಧಂತಿ ಮಹೋತ್ಸವ ಹಾಗೂ ಗುರು ಸಂಗಮೇಶ್ವರರ ಭವ್ಯ ರಥೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಏ.30ರಂದು ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಅಂದು ಬೆಳಗ್ಗೆ ಕತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಧರ್ಮಸಭೆ ನಡೆಯಲಿದೆ, ಸಭೆಯನ್ನು ಸಚಿವ ಪ್ರಿಯಂಕ್ ಖರ್ಗೆ ಉದ್ಘಾಟಿಸಲಿದ್ದು, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಮಾಜಿ ಸಚಿವ ರಾಜಶೇಖರ ಪಾಟೀಲ, ಪ್ರಮುಖರಾದ ಮಾಲೀಕಯ್ಯ ಗುತ್ತೇದಾರ, ಡಾ.ಅಜಯಸಿಂಗ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಳ್ಳುವರು.
ಸಂಜೆ 6 ಗಂಟೆಗೆ ಭವ್ಯ ಪಲ್ಲಕ್ಕಿ ಮೆರವಣಿಗೆ, 6.30ಕ್ಕೆ ರಥೋತ್ಸವ ನಡೆಯಲಿದೆ. ರಾತ್ರಿ 9 ಗಂಟೆಗೆ ಪುರಾಣ ಮಂಗಲ, ನ್ಯಾಯವಾದಿ ಶಿವಾನಂದ ಸ್ವಾಮಿ ಮಠ, ರೈತ ಮುಖಂಡ ಗುರುಲಿಂಗಯ್ಯ ಸ್ವಾಮಿ ಹಿರೇಮಠ, ಉದ್ಯಮಿ ನರೇಂದ್ರ ವರ್ಮಾ ಅವರಿಗ ಸಂಗಮೇಶ್ವರ ಶ್ರೀ ಪ್ರಶಸ್ತಿ ಪ್ರಧಾನ ನಡೆಯಲಿದೆ.
ರಾತ್ರಿ ಶ್ರೀಸಂಗಮೇಶ್ವರ ಮೆಲೋಡಿಸ್ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದ್ದಾರೆ.