ಸುದ್ದಿ ಸಂಗ್ರಹ ಕಲಬುರಗಿ
ಸೇಡಂನ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಕಾಪರ್ ವೈರ್ ಕಳ್ಳತನದ ಆರೋಪಿಯನ್ನು ಶುಕ್ರವಾರ ಬಂಧಿಸಿರುವ ಪೊಲೀಸರು, 56 ಕೆ.ಜಿ ಕಾಪರ್ ವೈರ್ ಮತ್ತು ಒಂದು ಲಾರಿ ವಶಪಡಿಸಿಕೊಂಡಿದ್ದಾರೆ.
ಅಕ್ಕಲಕೋಟ ತಾಲೂಕಿನ ಸಾಫಳೆ ಗ್ರಾಮದ ಆಕಾಶ ದೇವಿಂದ್ರ ಬಂಡಿಚೋಡೆ ಬಂಧಿತ ಆರೋಪಿ. ಸಿಮೆಂಟ್ ಕಂಪನಿಯ ಸೆಕ್ಯೂರಿಟಿ ಹೆಡ್ ಓಂಕಾರ ಗೊಂದಳಿ ಕಂಪನಿಯಲ್ಲಿನ ಅಂದಾಜು 100 ಕೆ.ಜಿ ಕಾಪರ್ ಕೇಬಲ್ ವೈರ್ ಕಳ್ಳತನ ಆಗಿದೆ ಎಂದು ಸೇಡಂ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ಪತ್ತೆಗಾಗಿ ಡಿಎಸ್ಪಿ ಸಂಗಮನಾಥ ಹಿರೇಮಠ, ಸಿಪಿಐ ಮಹಾದೇವ ಡಿ ಅವರ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಉಪೇಂದ್ರಕುಮಾರ, ಶರಣಪ್ಪ ಜಾಕನಳ್ಳಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.