ಪಶು ವೈದ್ಯರ ನೇಮಕಾತಿ ಹಗರಣ: ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ ಪಡೆದ ಸಿಐಡಿ

ಜಿಲ್ಲೆ

ಸುದ್ದಿ ಸಂಗ್ರಹ ಬೀದರ್
ಪಶು ವೈದ್ಯರ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಲ್ಕಿ ಮೂಲದ ಆರೋಪಿಯೊಬ್ಬನನ್ನು ಸಿಐಡಿ ಅಧಿಕಾರಿಗಳು‌ ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

ಅಭ್ಯರ್ಥಿಗಳು ಹಾಗೂ ಗ್ಯಾನೇಂದ್ರ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದ ಬಿಜೆಪಿ ಕಾರ್ಯಕರ್ತ ಬಸವರಾಜ್ ಕನ್ನಾಳೆಯನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದೆಹಲಿಯಲ್ಲಿ ಸಿಐಡಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು, ಬೆಳಗ್ಗೆ ಬೆಂಗಳೂರಿಗೆ ಕರೆ ತಂದು ಅರೆಸ್ಟ್ ಮಾಡಲಿದ್ದಾರೆ.

12ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಗ್ಯಾನೇಂದ್ರ ಜೊತೆಗೆ ಬಸವರಾಜ್ ಸಂಪರ್ಕ ಮಾಡಿಕೊಟ್ಟಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ. ಗ್ಯಾನೇಂದ್ರಕುಮಾರ್ ಗಂಗ್ವಾರ ಬಂಧನ ಬೆನ್ನಲ್ಲೆ ಬಸವರಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭಾಲ್ಕಿ ಪಟ್ಟಣದ ಲೆಕ್ಷರ್ ಕಾಲೋನಿಯ ಆರೋಪಿ ನಿವಾಸ ಮತ್ತು ದೋಣಗಾಪೂರ್ ಗ್ರಾಮದ ನಿವಾಸದಲ್ಲಿ ಪೊಲೀಸರಿಂದ ತಪಾಸಣೆ ಮಾಡಲಾಗಿದೆ. ಮೇಲಾಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಎರಡು ನಿವಾಸಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *