ಸುದ್ದಿ ಸಂಗ್ರಹ

ಭಾಗವತ್‌ಗೆ ಸಾವರ್ಕರ್ ಕೃತಿ ಕೊಟ್ಟು ಭಾರತ ಮಾತೆ ಜೈಕರಿಸಿದ ಬಿಜೆಪಿಗರು

ಸುದ್ದಿ ಸಂಗ್ರಹ ವಾಡಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ದ ರಾಷ್ಟ್ರೀಯ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಸ್ಥಳೀಯ ಬಿಜೆಪಿ ಮುಖಂಡರು,ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರ್
ಕೃತಿ ನೀಡಿ ಸತ್ಕರಿಸಿದರು.

ಕರ್ನಾಟಕದಲ್ಲಿ ವಿವಿಧ ಕಾರ್ಯಕ್ರಮ ಮುಗಿಸಿಕೊಂಡು ಗುರುವಾರ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದ ವೇಳೆ ವಾಡಿ ರೈಲು ನಿಲ್ದಾಣದಲ್ಲಿ ಇಳಿದು ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸುತ್ತಿದ್ದರು. ವಾಡಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಅವರು ಚಕ್ರವರ್ತಿ ಸೂಲಿಬೆಲೆ ರಚಿಸಿದ ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರ್ ಕೃತಿ ನೀಡಿ
ಗೌರವಿಸಿದರು.

ಈ ಸಂದರ್ಭದಲ್ಲಿ ಮಾಜಿ ಪುರಸಭೆ ಸದಸ್ಯರಾದ ಹರಿ ಗಲಾಂಡೆ,ಕಿಶನ್ ಜಾಧವ,ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ಮಲ್ಲಿಕಾರ್ಜುನ ಸಾತಖೇಡ,ಚಂದ್ರಶೇಖರ ಹಾವೇರಿ, ಹೀರಾ ನಾಯಕ,ಸತೀಶ್ ಸಾವಳಗಿ, ಅಯ್ಯಣ್ಣ ದಂಡೋತಿ,ಮಹೇಂದ್ರ ಕುಮಾರ ಪುಜಾರಿ,
ಮಲ್ಲಿಕಾರ್ಜುನ ಮೊರೆ,ಭರತ ರಾಠೋಡ,ಆನಂದ ಇಂಗಳಗಿ,
ಶಿವಕುಮಾರ ಕರದಳ್ಳಿ,ಬನಶಂಕರ ಮಟ್ಟೂರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *