ಮೋಟಾರ್ ಪಂಪ್ ಕಳ್ಳತನ, ಇಬ್ಬರು ಆರೋಪಿಗಳ ಬಂಧನ

ಪಟ್ಟಣದ

ಸುದ್ದಿ ಸಂಗ್ರಹ ಚಿತ್ತಾಪುರ
ಪಾಲಿಶ್ ಮಷಿನ್ ಒಂದರಲ್ಲಿ ಮೋಟಾರ್ ಪಂಪ್ ಕಳ್ಳತನವಾಗಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ…..ಪಟ್ಟಣದ ಆಶ್ರಯ ಬಡಾವಣೆಯ ಮಂಜುನಾಥ ಅಲಿಯಾಸ್ ಆಂಜನೇಯ ಚಂದಪ್ಪ ಹೇಳವರ (30), ಭೀಮಣ್ಣ ರಾಮಪ್ಪ ಹೇಳವರ (38) ಎಂಬುವರೆ ಬಂಧಿತ ಆರೋಪಿಗಳು.

ಪಟ್ಟಣದ ಸೈಯದ್ ನಾಸಿರ್ ಬಶೀರಮಿಯ್ಯ ಎಂಬುವರ ಪಾಲಿಶ್ ಮಶಿನ್‌ನಲ್ಲಿ ಜು.2ರಂದು 3 ಮೋಟಾರ್ ಪಂಪ್ ಕಳ್ಳತನವಾಗಿದ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಶುರು ಮಾಡಿ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು.

ಶಹಾಬಾದ್ ಡಿವೈಎಸ್ಪಿ ಶಂಕರ್ ಗೌಡ ಪಾಟೀಲ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ ಪೊಲೀಸ್ ತಂಡವು ಕಳ್ಳತನವಾಗಿದ್ದ 60 ಸಾವಿರ ರೂ ಮೌಲ್ಯದ 3 ಮೋಟಾರ್ ಪಂಪ್ ಜಪ್ತಿ ಮಾಡಿಕೊಂಡಿದ್ದಾರೆ.

ಸಿಪಿಐ ಎಸ್.ಸಿ ಪಾಟೀಲ್ ಅವರ ಮಾರ್ಗದರ್ಶನದ ತನಿಖಾ ತಂಡದಲ್ಲಿ ಪಿಎಸ್ಐ ಮಂಜುನಾಥ ರೆಡ್ಡಿ, ಎಎಸ್‌ಐ ಬಾಬು, ಸಿಬ್ಬಂದಿ ಬಸವರಾಜ, ಅಜರುದ್ದಿನ್, ಅನೀಲ, ಅಯ್ಯಣ್ಣ, ದತ್ತಾತ್ರೇಯ, ಮಂಜುನಾಥ ಮತ್ತು ಸಿದ್ದರಾಮೇಶ ಇದ್ದರು.

Leave a Reply

Your email address will not be published. Required fields are marked *