ಸುದ್ದಿ ಸಂಗ್ರಹ

ಬಸವ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಅವಮಾನ: ಬಿಜೆಪಿ ಖಂಡನೆ….ವಾಡಿ: ಪಟ್ಟಣದ ಪುರಸಭೆ ಆಡಳಿತ ಮಂಡಳಿ ಬಸವ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಸಾಂಸ್ಕೃತಿಕ ನಾಯಕ ಬದಲು ಸಂಕೃತಿಕ ನಾಯಕ ಎಂದು ಉಲ್ಲೇಖಿಸಿ ಸಮಾಜ ಸುಧಾರಕ ಬಸವಣ್ಣ ಅವರಿಗೆ ಅವಮಾನಿಸಿದೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, ಅಸಮಧಾನ ವ್ಯಕ್ತಪಡಿಸಿದ್ದಾರೆ……ಸಮಾಜ ಸುಧಾರಕರ ಹೆಸರುಗಳನ್ನು ತಪ್ಪಾಗಿ ಉಲ್ಲೇಖಿಸಿ, ಅವರ ಸಾಮಾಜಿಕ, ಸಾಂಸ್ಕೃತಿಕ ಹೋರಾಟಕ್ಕೆ ಮಾಡುವ ದೊಡ್ಡ ಅಪಮಾನ ಇದಾಗಿದೆ ಎಂದರು…..ಬಸವಣ್ಣನವರು 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆಸಿದ ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ರಾಂತಿಯು ಭಾರತದ ಇತಿಹಾಸದಲ್ಲೆ ಅತ್ಯಂತ ಪ್ರಮುಖ ಸುಧಾರಣಾ ಚಳುವಳಿಯಾಗಿದೆ. ಕಲ್ಯಾಣ ಕ್ರಾಂತಿ ಎಂದು ಕರೆಯಲ್ಪಡುವ ಈ ಚಳುವಳಿಯು ಜಾತಿ, ಲಿಂಗ ಮತ್ತು ಆರ್ಥಿಕ ತಾರತಮ್ಯದ ವಿರುದ್ಧ ಧ್ವನಿ ಎತ್ತಿತ್ತು…..ಅದಕ್ಕಾಗಿ ಕರ್ನಾಟಕ ಸರ್ಕಾರವು ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಅಧಿಕೃತವಾಗಿ ಘೋಷಿಸಿ, ಫೆಬ್ರವರಿ 13, 2024 ರಂದು ವಿಧಾನಸೌಧದಲ್ಲಿ ಅವರ ಭಾವಚಿತ್ರ ಅನಾವರಣಗೊಳಿಸಲಾಗಿದೆ. ಅಧಿಕಾರಿಗಳು ಪ್ರಕಟಣೆ, ಆಹ್ವಾನ ನೀಡುವ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಇದನ್ನು ಅನೇಕ ಸಲ ಗಮನಕ್ಕೆ ತಂದರೂ ಸಹ ಮುಂದುವರೆಸುತ್ತಿರುವುದು ಯಾಕೆ ಎಂಬುದು ಗೊತ್ತಾಗುತ್ತಿಲ್ಲ ಇದರ ವಿರುದ್ಧ ಮೆಲಾಧಿಕಾರಿಗಳಿಗೆ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *