ಸುದ್ದಿ ಸಂಗ್ರಹ ಶಹಾಬಾದ
ಡಾ.ಬಿ.ಆರ್ ಅಂಬೇಡ್ಕರ್ ಅವರು ರೂಪಿಸಿದ ಭಾರತದ ಸಂವಿಧಾನ ದೇಶದ ಅಲ್ಪಸಂಖ್ಯಾತರಿಗೆ ಕೇವಲ ಒಂದು ಕಾನೂನಿನ ಪುಸ್ತಕವಲ್ಲ, ಅದು ಅವರ ಹಕ್ಕುಗಳ ಭದ್ರಕೋಟೆಯಾಗಿ ಮತ್ತು ರಕ್ಷಣಾ ಕವಚವಾಗಿ ನಿಂತಿದೆ ಎಂದು ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರುಕ್ ಮಣ್ಣೂರ ಹೇಳಿದರು.
ನಗರದ ವಾರ್ಡ ನಂ.27 ಬಡಾವಣೆಯ ಜಯಂತ್ಯೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ರವರ 135ನೇ ಜಯಂತಿಯ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ 25ರಿಂದ 28ನೇ ವಿಧಿಯ ಪ್ರಕಾರ ಪ್ರತಿಯೊಬ್ಬ ನಾಗರಿಕನಿಗೂ ತನಗೆ ಇಷ್ಟವಾದ ಧರ್ಮವನ್ನು ಪಾಲಿಸುವ, ಪ್ರಚುರಪಡಿಸುವ ಮತ್ತು ಆಚರಿಸುವ, ವಿಶಿಷ್ಟ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವ ಸಂಪೂರ್ಣ ಹಕ್ಕನ್ನು ನೀಡಿದೆ ಎಂದರು.
ದಸಂಸ ರಾಜ್ಯ ಸಂ.ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, ದೇಶ ಸೂಸುತ್ರವಾಗಿ ನಡೆಯಲು ಸಂವಿದಾನ ರಚಿಸಿದರು, ಮೂರ್ತಿ ಮೆರವಣಿಗೆಗಿಂತ-ವಿಚಾರಗಳ ಮೆರವಣಿಗೆ ಆಗಬೇಕಾಗಿದೆ, ಭಾರತದ ಸಂವಿಧಾನ ಬರೆಯಲು ದಿಕ್ಕೆ ಇರಲಿಲ್ಲ, ಅಂಬೇಡ್ಕರ್ ಅವರು ಎಲ್ಲಾ ಜಾತಿ, ಧರ್ಮಗಳ ಹಿತಕ್ಕಾಗಿ ಸಂವಿಧಾನ ಬರೆದಿದ್ದಾರೆ, ವಿಶೇಷವಾಗಿ ಶಿಕ್ಷಣಕ್ಕೆ ಒತ್ತು ನೀಡಿದರು, ಮತದಾನದ ಹಕ್ಕು, ಮಹಿಳಾ ಮೀಸಲಾತಿ ಮಂಡಿಸಿ, ರಾಜೀನಾಮೆ ನೀಡಿದರು, ಅಂಬೇಡ್ಕರ್ ರವರ ತ್ಯಾಗ, ಬಲಿದಾನದಿಂದ ಬಂದ ಮಹಿಳಾ ಸ್ವಾತಂತ್ರ್ಯ ಇಂದು ಬಲಿಷ್ಠವಾಗಿದೆ, ಮೌಡ್ಯತೆಯನ್ನು ಬಿಡಬೇಕು, ಶಿಕ್ಷಣದಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ವೀರನಾಥ ಕನಕ ಮಾತನಾಡಿದರು.
ವೇದಿಕೆ ಮೇಲೆ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ, ನಗರ ಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶರಣು ಪಗಲಾಪುರ, ದಲಿತ ಯುವ ನಾಯಕ ರಘುನಾಥ ಕಂಬಾನೂರ, ಜಯಂತಿ ಗೌರವಾಧ್ಯಕ್ಷ ವಸಂತ ಕಾಂಬಳೆ, ಯುವ ಮುಖಂಡರಾದ ಮಹ್ಮದ್ ಇಮ್ರಾನ್, ಮಲ್ಲಿಕಾರ್ಜುನ ಕಟ್ಟಿ, ಜಹೀರ ಅಹ್ಮದ್ ಪಟವೇಗಾರ, ನಗರ ಸಭೆ ಸಿಬ್ಬಂದಿ ಸಾಬಣ್ಣ ಸುಂಗುಲಕರ ಇದ್ದರು.
ಸಮಾರಂಭದಲ್ಲಿ ಅಮೃತ ಕಾಳನೂರ, ಸುಜಾತ ಕೋರಬಾ, ಮಲ್ಲಿಕಾರ್ಜುನ ಹಳ್ಳಿ, ರಮಾಕಾಂತ ಹುಡಗಿ, ನಾಗೇಂದ್ರ ಸರಡಗಿ, ಪ್ರವೀಣ ರಾಮಕೋಟೆ, ಶೈಲಾಶ ಕಾಳನೂರ, ಬಿ.ಕಾಂಬಳೆ, ಬಾಬುರಾವ ಭೀಮನಳ್ಳಿ ಸೇರಿದಂತೆ ಅನೇಕ ಜನರು ಭಾಗವಹಿಸಿದ್ದರು.
ಪುನೀತ ಹಳ್ಳಿ ಸ್ವಾಗತಿಸಿದರು, ಬಸವರಾಜ ಮಯೂರ್ ನಿರೂಪಿದರು, ಮೋಹನ ಹಳ್ಳಿ ವಂದಿಸಿದರು.