
ಸುದ್ದಿ ಸಂಗ್ರಹ ಕಲಬುರಗಿ
ಜಾನಪದ ಸಂಸ್ಕೃತಿ, ಪರಂಪರೆ ದೇಶದ ಮೂಲವಾಗಿದೆ. ಇದನ್ನು ಮರೆತರೆ ನಮಗೆ ಉಳಿಗಾಲವಿಲ್ಲ. ಜಾನಪದ ಕನ್ನಡದ ತಾಯಿ ಬೇರಾಗಿದೆ. ಜಾನಪದದಲ್ಲಿದೆ ಬದುಕಿನ ಸಾರ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್ ನಿರಗುಡಿ ಹೇಳಿದರು.
ನಗರದ ಶೆಟ್ಟಿ ಕಾಂಪ್ಲೆಕ್ಸ್ ಎದುರುಗಡೆಯ ಶಾರದಾ ವಿವೇಕ ಮಹಿಳಾ ಪದವಿ ಕಾಲೇಜ್’ನಲ್ಲಿಂದು ಏರ್ಪಡಿಸಿದ್ದ ‘ಕನ್ನಡ ಜಾನಪದ ಪರಿಷತ್ತಿನ 11ನೇ ಸಂಸ್ಥಾಪನಾ ದಿನಾಚರಣೆ’ ಉದ್ಘಾಟಿಸಿ, ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯೆ ಡಾ.ಭಾಗಿರತಿ ಎಚ್. ಗುಡ್ಡೇವಾಡಿ ಮಾತನಾಡಿ, ಆಹಾರ, ಆಚಾರ, ವಿಚಾರ ಸೇರಿದಂತೆ ಜಾನಪದದಲ್ಲಿ ಎಲ್ಲವು ಅಡಗಿದೆ. ಜನಪದವೇ ಕನ್ನಡಕ್ಕೆ ಆಧಾರವಾಗಿದೆ ಎಂದರು.
ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಜನಪದ ಸಾಹಿತ್ಯ, ಸಂಸ್ಕೃತಿ ಉಳಿಸಿ, ಬೆಳೆಸಲು ನಮ್ಮ ಪರಿಷತ್ತು ಕಳೆದ 11 ವರ್ಷಗಳಿಂದ ನಿರಂತರವಾಗಿ ಹತ್ತು-ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಎಚ್.ಬಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಾನಪದ ಕಲಾವಿದರಾದ ಎಂ.ಎನ್ ಸುಗಂಧಿ, ಶಿವಮೂರ್ತಿ, ವಿಜಯಲಕ್ಷ್ಮಿ, ಸಿದ್ದಣ್ಣ ಗುಡ್ಡಾ, ಎಚ್.ಎಸ್ ಬರ್ಗಾಲಿ, ಶಿವಶಂಕರ ಬಿ ಅವರಿಗೆ ಸತ್ಕರಿಸಲಾಯಿತು. ನಂತರ ಇದೆ ಕಲಾವಿದರಿಂದ ಕಲಾ ಪ್ರದರ್ಶನ ಜರುಗಿತು.
ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಪ್ರೊ. ಹಣಮಂತರಾಯ ಗುಡ್ಡೇವಾಡಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್. ಬಿರಾದಾರ ಮತ್ತು ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.