ಸುದ್ದಿ ಸಂಗ್ರಹ ಕಲಬುರಗಿ
ಪ್ರಸ್ತುತ ದಿನಗಳಲ್ಲಿಯೂ ಕೂಡಾ ಕಂಡು ಬರುತ್ತಿರುವ ಜಾತಿಯತೆ, ಮೂಡನಂಬಿಕೆ, ಕಂದಾಚಾರ, ಅಂಧಶೃದ್ಧೆಯಂತಹ ಮುಂತಾದ ಸಾಮಾಜಿಕ ಸಮಸ್ಯೆಗಳ ನಿರ್ಮೂಲನೆಗೆ ಬಸವಣ್ಣನವರ ಜೊತೆಗೂಡಿ 950 ವರ್ಷಗಳ ಹಿಂದೆ ಹೋರಾಡಿದ, ಸಾಮಾಜಿಕ ಸಮಾನತೆಯ ನಿರ್ಮಾಣಕ್ಕೆ ಶ್ರಮಿಸಿದ ಶರಣ ಅಲ್ಲಮಪ್ರಭು ದೇವರು ವಿಶ್ವದ ಪ್ರಥಮ ಮೊದಲ ಸಂಸತ್ತಿನ ಅಧ್ಯಕ್ಷರಾಗಿ ಅನನ್ಯವಾದ ಕೊಡುಗೆ ನೀಡಿದ್ದಾರೆ, ಎಲ್ಲರ ಮನೆಯಲ್ಲಿ ಅವರ ಭಾವಚಿತ್ರ ಇಡುವುದು ಮತ್ತು ಅವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಶರಣ ಚಿಂತಕ ಡಾ.ರಾಜಶೇಖರ ಪಾಟೀಲ ಹೆಬಳಿ ಅಭಿಪ್ರಾಯಪಟ್ಟರು.
ನಗರದ ಡಬರಾಬಾದ ಕ್ರಾಸ್ ಸಮೀಪದ ಪ್ರಭುದೇವ ನಗರದಲ್ಲಿನ ಶ್ರೀ ನೀಲಕಂಠೇಶ್ವರ ಶಾಲೆಯ ಎದುರುಗಡೆ ರಭುದೇವ ನಗರ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಜರುಗಿದ ‘ಶರಣ ಅಲ್ಲಮಪ್ರಭುದೇವರ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ ಮಾತನಾಡಿ, ‘ವಿಶ್ವದ ಪ್ರಥಮ ಸಂಸತ್ತು’ ಎಂದು ಕರೆಯಲ್ಪಡುವ ‘ಅನುಭವ ಮಂಟಪ’ದ ಅಧ್ಯಕ್ಷರಾಗಿ ಸಕಲ ಜಾತಿ, ಧರ್ಮ, ಜನಾಂಗದವರಿಗೆ ಸಮಾನವಾದ ಅವಕಾಶ ಒದಗಿಸಿಕೊಟ್ಟು, ಸಮ-ಸಮಾಜ ನಿರ್ಮಾಣಕ್ಕೆ ಸಾಕಷ್ಟು ಪ್ರಯತ್ನಿಸಿದರು. ವಚನಕಾರರ ಜೀವನ ಸಿದ್ಧಾಂತದ ಸಾರವನ್ನು ತಮ್ಮ ಇರುವಿನಲ್ಲಿರಿಸಿಕೊಂಡು ಶರಣ ಮಾರ್ಗಕ್ಕೆ ಗುರುವಾದರು. ಅಪಾರ ಜ್ಞಾನಿಗಳಾದ ಅವರು, ತಮ್ಮ ಅನುಭದಿಂದ ಸಾಮಾಜಿಕ ಕಳಕಳಿಯುಳ್ಳ ಅನೇಕ ವಚನಗಳನ್ನು ರಚಿಸಿದ್ದಾರೆ. ‘ಗುಹೇಶ್ವರಾ’ ಎಂಬ ಅಂಕಿತನಾಮದೊಂದಿಗೆ ರೂಪುಗೊಂಡ ವಚನಗಳು, ಸಮಾಜಕ್ಕೆ ದಾರಿದೀಪವಾಗಿವೆ. ಬಸವಾದಿ ಶರಣರ ವಚನಗಳನ್ನು ಎಲ್ಲರು ಅಧ್ಯಯನ ಮಾಡಿ, ಅವುಗಳ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಡಾವಣೆಯ ಅಧ್ಯಕ್ಷ ಪ್ರಭು ಪಾಣೇಗಾಂವ, ಶರಣ ಚಿಂತಕ ಷಣ್ಮುಖಯ್ಯ ಹಿರೇಮಠ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಬಡಾವಣೆಯ ಪಂಡಿತರಾವ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಮಲ್ಲಿಕಾರ್ಜುನ ಮೇತ್ರೆ, ದತ್ತು ರೇವೂರ, ನಾಗೇಂದ್ರಪ್ಪ ಬಿರಾದಾರ, ಸಾತಲಿಂಗಪ್ಪ ಖಸಗಿ, ಮಹಾಂತೇಶ ನೈಕೊಡಿ, ದತ್ತು ರೇವೂರ, ಶರಣಪ್ಪ ಭೀಮಳ್ಳಿ, ನಾಗರಾಜ ಶೀಲವಂತ, ಚನ್ನಬಸಪ್ಪ ಕುಂಬಾರ, ಶಿವಲಿಂಗಪ್ಪ ಸಂಗೋಳಗಿ, ಶಿವರಾಜ ಮುಲಗೆ, ನಿತೀಶ್ ಬುದ್ಧಿವಂತ, ಸಂತೋಷ, ನಾಗರಾಜ ನಾಗೂರೆ, ಶಿವಕುಮಾರ, ಪ್ರಮೋದ ಅಲ್ಲಾಪುರ, ಆದರ್ಶ, ಪ್ರತೀಕ, ಪ್ರೀತಮ, ವಿನಾಯಕ, ಕಾರ್ತಿಕ, ಸಿದ್ದರಾಮ, ದೀಪ್ತಿ, ಸೇರಿದಂತೆ ಅನೇಕರು ಇದ್ದರು.