ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಗಿರಥ ಮಹರ್ಷಿ ಜಯಂತಿ ಆಚರಿಸಲಾಯಿತು.
ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಭಗಿರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಛಲದಿಂದ ದೇವ ಗಂಗೆಯನ್ನು ಧರೆಗಿಳಿಸಿ ಸಕಲ ಜೀವಿಗಳ ದಾಹ ತಿರಿಸಿದ ಸಂತ ಭಗಿರಥ ಎಂದರು.
ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ತಂದು ತನ್ನ ಹಿರಿಯರಿಗೆ ಜಲತರ್ಪಣ ಮಾಡಿದ ಭಗೀರಥರ ಸಾಧನೆ ಅಸಾಮಾನ್ಯವಾಗಿದೆ. ಇದು ಪರಿಶ್ರಮ ಮತ್ತು ಕಠಿಣ ನಿರ್ಣಯಗಳ ಮೂಲಕ ಜಯ ಸಾಧಿಸಬಹುದು ಎಂಬುದಕ್ಕೆ ಮುನ್ನುಡಿಯಾಗಿದೆ. ಅವರ ಮಾರ್ಗದಲ್ಲಿ ನಾವು ನಡೆದು ಆತ್ಮದ, ರಾಷ್ಟ್ರದ ಉನ್ನತಿ ಮೆರೆಯಬೇಕಾಗಿದೆ. ನಮ್ಮ ದೇಶದ ಸಂಸ್ಕೃತಿ ಇಡಿ ಪ್ರಪಂಚದಲ್ಲಿಯೇ ವಿಶಿಷ್ಟತೆ ಹೊಂದಿದ್ದೆ. ಅನೇಕ ದಾರ್ಶನಿಕರು, ಸಾಧು ಸಂತರು, ಸತ್ಪುರುಷರು ಈ ಪ್ರಪಂಚಕ್ಕೆ ನೀಡಿ, ಸಕಲ ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ. ಅಂತಹ ಸತ್ಪುರುಷರಲ್ಲಿ ಭಗೀರಥ ಮಹರ್ಷಿ ಒಬ್ಬರು ಎಂದರು.
ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ, ಸರ್ವರಿಗೂ ಒಳಿತನ್ನು ಬಯಸುವ ಹಿಂದೂ ಧರ್ಮದ ಶ್ರೇಷ್ಠತೆ ಸಾರಿದ ಭಗಿರಥ ಮಹರ್ಷಿಗಳಂತ ಸತ್ಪುರುಷರ ತತ್ವಾಧರ್ಶಗಳನ್ನು ಅರಿತು ನಾವು ಭವ್ಯ ಭಾರತಕ್ಕಾಗಿ ಬದಕಬೇಕಾಗಿದೆ ಎಂದರು.
ನಮ್ಮ ಹಿಂದೂ ಸಮಾಜದಲ್ಲಿ ಎಷ್ಟು ಮಹಾನ ಪುರುಷರಾಗಿ ಹೋದರೋ, ಎಷ್ಟು ಜನ ತಪಸ್ವಿಗಳು, ಋಷಿಮುನಿಗಳು, ಮಹರ್ಷಿಗಳಾಗಿ ಹೋದರೋ, ಅವರೆಲ್ಲರೂ ಪರಸ್ಪರ ಆಧ್ಯಾತ್ಮಿಕತೆಯಿಂದ ಜೋಡಿಸಲ್ಪಟಿದ್ದಾರೆ. ಅವರು ಎಲ್ಲರಿಗೂ ತಮ್ಮ ಅನುಭವದ ಜ್ಞಾನ ನೀಡಿ ಮನುಕುಲ ಉದ್ದರಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ, ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಅರ್ಜುನ ಕಾಳೆಕರ, ಅಶೋಕ ಪವಾರ, ಹರಿ ಗಲಾಂಡೆ, ಕಿಶನ್ ಜಾಧವ, ಮಲ್ಲಿಕಾರ್ಜುನ ಸಾತಖೇಡ, ಪ್ರಮೋದ್ ಚೊಪಡೆ, ಆನಂದ ಇಂಗಳಗಿ, ಕುಮಾರ ದಾಸ್, ದತ್ತಾತ್ರೇಯ ಗೌಡಗಾಂವ, ಅನಿಲ ಕುಮಾರ ನೀರಡಗಿ, ಯಂಕಮ್ಮ ಗೌಡಗಾಂವ, ಕಲಾವತಿ ನೀರಡಗಿ ಸೇರಿದಂತೆ ಅನೇಕರು ಇದ್ದರು.