ಕಲಬುರಗಿ: ಶಾಸಕ ಬಸವರಾಜ ಮತ್ತಿಮೂಡ ಅವರಿಗೆ ರಾತ್ರೋ ರಾತ್ರಿ ರೈತರ ಬಗ್ಗೆ ಜ್ಞಾನೋದಯವಾಯಿತಾ, ಒಮ್ಮೆಲೆ ರೈತರ ಬಗ್ಗೆ ಕಾಳಜಿವಹಿಸಿ , ಗ್ರಾಮೀಣ ಭಾಗದ ಕೃಷಿ ಅಧಿಕಾರಿಗಳ ಸಭೆ ನಡಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ, ಇನ್ನು ಸಮೀಕ್ಷೆಯೆ ಪೂರ್ಣಗೊಂಡಿಲ್ಲ ಸಭೆ ಕರೆದಿರುವದು ಯಾವ ಪುರುಷಾರ್ಥಕ್ಕೆ ಎಂದು ಚಿತ್ತಾಪುರ ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದುಗೌಡ ಜಿ ಅಫಜಲಪುರಕರ್ ಪ್ರಶ್ನಿಸಿದ್ದಾರೆ.
ರೈತರ ಬಗ್ಗೆ ಇಷ್ಟೊಂದು ಕಾಳಜಿ ಬರಲು ಕಾರಣವೇನು ? ಇದೆ ಕಾಳಿಜಿ, ಬೆಳೆ ಕಟಾವಿಗೆ ಬಂದು ರಾಶಿ ಮಾಡುವ ಸಂದರ್ಭದಲ್ಲಿ ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗಿ ರೈತರಿಗೆ ಕೈಗೆ ಬಂದ ಬೆಳೆ ನೆಟಿ ರೋಗಕ್ಕೆ ತುತ್ತಾಯಿತು. ಆವಾಗ ರೈತರು ದಿಕ್ಕುತೋಚದಂತಾಗಿ ಬಿದಿಗಿಳಿದು ಹೋರಾಟಕ್ಕೆ ನಿಂತರು, ಆಗ ಎಲ್ಲಿ ಹೋಗಿತ್ತು ನಿಮ್ಮ ರೈತರ ಬಗ್ಗೆ ಕಾಳಜಿ ?, ರಾಜ್ಯದಲ್ಲಿ — ಕೇಂದ್ರದಲ್ಲಿ ನಿಮ್ಮದೆ ಸರಕಾರವಿತ್ತು ಆವಾಗ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ತೊರಲಿಲ್ಲ, ಆವಾಗ ರೈತರ ಬೆಂಬಲಕ್ಕೆ ನಿಂತ ಏಕೈಕ ನಾಯಕ ಪ್ರಿಯಾಂಕ್ ಖರ್ಗೆ ಕೊನೆಯವರೆಗೂ ರೈತರ ಪರ ಹೋರಾಡಿ ರೈತರಿಗೆ ಸರಕಾರದಿಂದ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾದರು ಎಂದು ಹೇಳಿದರು.
ಈಗ ಎಲ್ಲಿಂದ ಬಂತು ನಿಮಗೆ ರೈತರ ಬಗ್ಗೆ ಕಾಳಜಿ ? ಕಮಲಾಪೂರದ ಹೊಬಳಿಯ ರೈತ, ಕಷ್ಟ ಪಟ್ಟು ಈರುಳ್ಳಿ ಬೆಳೆ ಬೆಳೆದ ರೈತನಿಗೆ ತಮ್ಮಿಂದ ಈರುಳ್ಳಿ ಘಟಕ ಕೊಡಿಸಲಾಗದ ಶಾಸಕರು ತಾವು, ಇದೆಯಾ ರೈತರ ಬಗ್ಗೆ ಇರುವ ಕಾಳಜಿ ? ಈಗಲಾದರೂ ಎಚ್ಚೆತ್ತುಕೊಂಡು ರೈತರ ಬಗ್ಗೆ ಕಾಳಜಿ ವಹಿಸಿ ಎಂದು ಕಿವಿಮಾತು ಹೇಳಿದರು.