ಹೊಸ ವರ್ಷಕ್ಕೆ ಸಾರಿಗೆ ನೌಕರರಿಗೆ ಶಾಕ್

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು
ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಶಾಕ್ ನೀಡಿದೆ.

2026ರ ಜ1 ರಿಂದ ಮುಂದಿನ 6 ತಿಂಗಳವರೆಗೆ ಮುಷ್ಕರ ಮಾಡದಂತೆ ಸರ್ಕಾರ ಸಾರಿಗೆ ನೌಕರರಿಗೆ ಅಧಿಸೂಚನೆ ಹೊರಡಿಸಿದೆ. ಯಾವುದೆ ಸಂದರ್ಭದಲ್ಲೂ ಕೂಡ ಮುಷ್ಕರ ಮಾಡದಂತೆ ಸೂಚನೆ ನೀಡಿದೆ.

ಇದಕ್ಕೂ ಮುನ್ನ ನೀಡಿದ್ದ ಅಧಿಸೂಚನೆ 2025ರ ಡಿ.31ಕ್ಕೆ ಕೊನೆಯಾದ ಹಿನ್ನೆಲೆ ಈಗ ಮುಷ್ಕರ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಸರ್ಕಾರದ ಆದೇಶ ಉಲ್ಲಂಘಿಸಿದಲ್ಲಿ ಎಸ್ಮಾ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದು, ಆದೇಶದ ಪ್ರತಿಯನ್ನು ಸಂಸ್ಥೆಯ ಎಲ್ಲಾ ಘಟಕಗಳು ಹಾಗೂ ನೌಕರರ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *