ದೇಶಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲರ ಕೊಡುಗೆ ಅಪಾರ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತದ ಮೊದಲ ಉಪಪ್ರಧಾನಿ ಮತ್ತು ಗೃಹಸಚಿವರಾಗಿ, ಸ್ವಾತಂತ್ರ‍್ಯದ ನಂತರ 562ಕ್ಕೂ ಹೆಚ್ಚು ರಾಜಸಂಸ್ಥಾನಗಳನ್ನು ಭಾರತದೊಂದಿಗೆ ವಿಲೀನಗೊಳಿಸಿ ರಾಷ್ಟ್ರದ ಏಕೀಕರಣಕ್ಕೆ ಕಾರಣರಾದರು. ಇದರಿಂದಾಗಿ ಅವರಿಗೆ ‘ಭಾರತದ ಉಕ್ಕಿನ ಮನುಷ್ಯ’ ಎಂಬ ಬಿರುದು ದೊರೆಯಿತು. ದೇಶಕ್ಕೆ ಅವರ ಕೊಡುಗೆ ಅಪಾರ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.

ನಗರದ ಆಳಂದ ಚೆಕ್ ಪೋಸ್ಟ್ ಸಮೀಪದ ಬಸವೇಶ್ವರ ಕಾನ್ವೆಂಟ್ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಜರುಗಿದ “ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 75ನೇ ಸ್ಮರಣೋತ್ಸವ” ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸಂಸ್ಥೆಯ ಕಾರ್ಯದರ್ಶಿ ಸೋಮಶೇಖರ್ ಬಿ.ಮೂಲಗೆ ಮಾತನಾಡಿ, ಪಟೇಲ್ ಅವರು ಗಾಂಧಿಜಿಯವರೊಂದಿಗೆ ಸ್ವಾತಂತ್ರ‍್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಾರ್ಡೋಲಿ ಸತ್ಯಾಗ್ರಹದಂತಹ ರೈತ ಚಳವಳಿಗಳನ್ನು ಮುನ್ನಡೆಸಿದರು ಮತ್ತು ಭಾರತವನ್ನು ಸಂಯೋಜಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಮುಖ್ಯ ಶಿಕ್ಷಕಿ ಸೌಂದರ್ಯ ಮಾಳಗೆ, ಸಹ ಶಿಕ್ಷಕಿಯರಾದ ರೂಪಾ ಅವರಾದ, ಪಾರ್ವತಿ ತೆಲ್ಲುರ, ಗಂಗಮ್ಮ ತಾವರಖೇಡ್, ಲಕ್ಷ್ಮಿ ಹಿರೇಮಠ, ಸಿದ್ದಮ್ಮ, ಸೇವಕಿ ಮಹಾನಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *