ಉದ್ಯೋಗಾಕಾಂಕ್ಷಿ ಹೋರಾಟಗಾರರ ಏಕಾಏಕಿ ಬಂಧನಕ್ಕೆ ಎಐಡಿವೈಓ ಖಂಡನೆ

ನಗರದ

ಸುದ್ದಿ ಸಂಗ್ರಹ ಶಹಾಬಾದ
ಧಾರವಾಡ ಉದ್ಯೋಗಾಕಾಂಕ್ಷಿಗಳ ಹೋರಾಟದ ಕರೆ ಹಿನ್ನೆಯಲ್ಲಿ ಬುಧವಾರ ಬೆಳಗ್ಗೆ ಏಕಾಏಕಿ ಬಂಧಿಸಿದ ಉದ್ಯೋಗಾಕಾಂಕ್ಷಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಸಿದ್ದಲಿಂಗ ಬಾಗೆವಾಡಿ, ಸಹ ಸಂಚಾಲಕ ಭವಾನಿಶಂಕರ್ ಎಸ್ ಗೌಡ, ಚನ್ನಬಸವ ಜಾನೇಕಲ್, ಎಐಡಿವೈಓ ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಬಾಳ್, ಎಐಕೆಕೆಎಂಎಸ್ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಜಡಗಣ್ಣನವರ್, ಎಐಡಿವೈಓ ರಾಜ್ಯ ಉಪಾಧ್ಯಕ್ಷ ಜಗನ್ನಾಥ ಎಸ್.ಎಚ್, ಉದ್ಯೋಗಾಕಾಂಕ್ಷಿ ಪಾಲಾಕ್ಷ ಕೆ ಸೇರಿದಂತೆ ಅನೇಕರನ್ನು ಬಂಧಿಸಲಾಗಿದೆ. ಈ ಕೂಡಲೆ ಅವರನ್ನು ಬಿಡುಗಡೆ ಮಾಡಬೇಕು ಎಂದು ಎಐಡಿವೈಓ ಜಿಲ್ಲಾ ಉಪಾಧ್ಯಕ್ಷ ಸಿದ್ಧಚೌದ್ರಿ ಒತ್ತಾಯಿಸಿದರು…..ನಗರದ ಬಸವೇಶ್ವರ ವೃತ್ತದಲ್ಲಿ ಎಐಡಿವೈಓ ಶಹಾಬಾದ ಸ್ಥಳೀಯ ಸಮಿತಿ ವತಿಯಿಂದ ಪ್ರತಿಭಟನೆ ಮಾಡಲಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಉದ್ಯೋಗಾಂಕ್ಷಿಗಳ ಬೇಗುದಿಗೆ ಇಲ್ಲಿಯವರೆಗೂ ಕಿಂಚಿತ್ತೂ ಸ್ಪಂದಿಸದಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರವು ಇಂದು ಬೆಳಗ್ಗೆಯಿಂದಲೆ ಯಾವುದೆ ನೋಟಿಸ್ ನೀಡದೆ, ಧರಣಿಗೆ ಸಜ್ಜಾಗುತ್ತಿದ್ದ ಸಮಯದಲ್ಲೆ ಉದ್ಯೋಗಾಕಾಂಕ್ಷಿಗಳನ್ನು ಏಕಾಏಕಿ ಬಂಧಿಸಿರುವ ಕ್ರಮವನ್ನು ಉದ್ಯೋಗಾಂಕ್ಷಿಗಳ ಹೋರಾಟ ಸಮಿತಿಯು ಉಗ್ರವಾಗಿ ಖಂಡಿಸುತ್ತದೆ. ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ಕನಿಷ್ಠ ಪ್ರತಿಭಟನೆಯ ಹಕ್ಕು ಲಭ್ಯವಿಲ್ಲ, ಇದು ಜನತಂತ್ರ ದಮನ ಮಾಡಿರುವ ಅತ್ಯಂತ ಹೀನಾಯ ನಡೆಯಾಗಿದೆ ಎಂದರು.

ಎಐಡಿವೈಓನ ಉಪಾಧ್ಯಕ್ಷ ತೇಜಸ್ ಇಬ್ರಾಹಿಂಪುರ್ ಮಾತನಾಡಿ, ಹಲವು ತಿಂಗಳುಗಳಿಂದ ಖುದ್ದಾಗಿ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೇಳುತ್ತಲೆ ಇದ್ದರು, ಮುಖ್ಯ ಕಾರ್ಯದರ್ಶಿಗೆ ಉದ್ಯೋಗಾಕಾಂಕ್ಷಿಗಳ ಹಕ್ಕೊತ್ತಾಯಗಳ ಆಗ್ರಹ ಪತ್ರ ತಲುಪಿಸಿದ್ದರು ಸಹ ಕನಿಷ್ಠ ಮಟ್ಟದ ಸ್ಪಂದನೆ ನೀಡದೆ, ಯಾವುದೆ ಬಾಧ್ಯತೆ ತೋರದೆ ಸರ್ಕಾರವು ಉದ್ಯೋಗಾಂಕ್ಷಿಗಳನ್ನು ಬಂಧಿಸಿ ರಾಜ್ಯವನ್ನು ಪೊಲೀಸ್ ರಾಜ್ಯವನ್ನಾಗಿಸಿದೆ. ಇದು ಅತ್ಯಂತ ಯುವಜನ ವಿರೋಧಿ ಕ್ರಮವಷ್ಟೆ ಅಲ್ಲ, ಯುವಜನರ ಬವಣೆಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಇರುವುದು ಅತ್ಯಂತ ಘೋರವಾಗಿದೆ, ಅವರು ನಮಗೆ ಕೇವಲ ಮತಬ್ಯಾಂಕ್ ಅಷ್ಟೆ ಎಂಬ ಕಾಂಗ್ರೆಸ್ ಸರ್ಕಾರದ ನಿಲುವಿಗೆ ಇನ್ನೊಂದು ಸಾಕ್ಷಿ ಒದಗಿಸಿದೆ. ಉದ್ಯೋಗದ ಕನಿಷ್ಠ ಹಕ್ಕು ಕೇಳುವುದೆ ಕಾಂಗ್ರೆಸ್ ಆಡಳಿತದಲ್ಲಿ ಅಪರಾಧ ಎಂದು ಸರ್ಕಾರವು ಬಗೆಯುತ್ತಿದೆ. ಒಳಮಿಸಲಾತಿಯ ಕುಂಟು ನೆಪ ಮುಂದಿಟ್ಟುಕ್ಕೊಂಡು ಹಲವು ತಿಂಗಳುಗಳಿಂದ ನೇಮಕಾತಿ ವಿಳಂಬ ಮಾಡುತ್ತಲೆ ಇರುವ ಕಾಂಗ್ರೆಸ್ ಸರ್ಕಾರವು ಇಂದು ಕಡು ಜನವಿರೋಧಿ ಕ್ರಮ ತೆಗೆದುಕೊಂಡು ಜನತಂತ್ರದ ಹರಣ ಮಾಡಿದೆ. ಸರ್ಕಾರದ ಈ ದಮನಕಾರಿ ಕ್ರಮಕ್ಕೆ ಉದ್ಯೋಗಾಕಾಂಕ್ಷಿಗಳು ಬೆದರುವುದಿಲ್ಲ ಮತ್ತು ಬೇಡಿಕೆ ಈಡೇರಿಸುವವರೆಗೆ ಹೋರಾಟವು ಮುಂದುವರೆಯುತ್ತದೆ ಮತ್ತು ಇನ್ನು ಬಲಿಷ್ಠವಾಗುತ್ತದೆ, ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಧಾರವಾಡ ಅಭಿಪ್ರಾಯ ಪಡುತ್ತದೆ. ನಾವು ಈ ಹೋರಾಟಕ್ಕೆ ಕೈಜೋಡಿಸುತ್ತೆವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಐಡಿವೈಓ ಸ್ಥಳೀಯ ಸಮಿತಿಯ ಸದಸ್ಯರಾದ ರಘು ಪವರ್, ದೇವರಾಜ್ ಮಿಲಕರ್, ಆನಂದ ದಂಡುಗುಕರ್, ರಾಕೇಶ್ ನೀಲಕಂಠ ಹುಲಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *