ಒಂದು ಮಗು ಇದ್ದರೂ ಸರ್ಕಾರಿ ಶಾಲೆ ಮುಚ್ಚಲ್ಲ: ಮಧು ಬಂಗಾರಪ್ಪ

ಜಿಲ್ಲೆ

ಸುದ್ದಿ ಸಂಗ್ರಹ ಬೆಳಗಾವಿ
ಒಂದೆ ಒಂದು ಸರ್ಕಾರಿ ಶಾಲೆಯನ್ನು ಮುಚ್ಚುವದಿಲ್ಲ ಅಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪುನರುಚ್ಚರಿಸಿದ್ದಾರೆ.

ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಚಿದಾನಂದಗೌಡ, ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಪ್ರಶ್ನೆ ಕೇಳಿದರು. ಕೆಪಿಎಸ್ ಶಾಲೆಗಳ ಅಭಿವೃದ್ಧಿ ಪೇಪರ್ ಮೇಲಿವೆ. ಇವತ್ತಿನ ಶಿಕ್ಷಣ ಸಚಿವರು ಶಿಕ್ಷಣ ವ್ಯವಸ್ಥೆ ಬುಡಮೇಲು ಮಾಡಲು ಮುಂದಾಗಿದ್ದಾರೆ ಅನ್ನಿಸುತ್ತಿದೆ. ಗ್ರಾಮ ಪಂಚಾಯತಿಗೆ ಒಂದು ಶಾಲೆ ಮಾಡಿ ಸರ್ಕಾರ ಶಾಲೆಗಳನ್ನು ಮುಚ್ಚೋ ಹುನ್ನಾರ ಮಾಡ್ತಿದೆ. ಕೆಪಿಎಸ್ ಶಾಲೆಗಳಿಗೆ ಹಳೆ ಕಟ್ಟಡ ಬೇಡ, ಹೊಸ ಕ್ಯಾಂಪ್ ನಿರ್ಮಾಣ ಮಾಡಬೇಕು. ಒಂದು ಗ್ರಾಮಕ್ಕೆ ಒಂದು ಪ್ರಾಥಮಿಕ ಶಾಲೆ ಇರಬೇಕು. ಸರ್ಕಾರಿ ಶಾಲೆ ಮುಚ್ಚಬೇಡಿ. ಕೆಪಿಎಸ್ ಶಾಲೆಯನ್ನು 6 ರಿಂದ 12ನೇ ತರಗತಿಗೆ ಮಾಡಿ. ಪ್ರಾಥಮಿಕ ಶಾಲೆಗಳು ಪ್ರತಿ ಗ್ರಾಮದಲ್ಲಿ ಇರಲಿ ಎಂದು ಚಿದಾನಂದಗೌಡ ಒತ್ತಾಯಿಸಿದ್ದಾರೆ.

ಇದಕ್ಕೆ ಸಚಿವ ಮಧು ಬಂಗಾರಪ್ಪ ಉತ್ತರ ನೀಡಿ, ನಾನು ಯಾವುದೆ ಶಾಲೆ ಮುಚ್ಚುತ್ತೆನೆ ಅಂತಾ ಹೇಳಿಲ್ಲ. ಕೆಪಿಎಸ್ ಶಾಲೆಯಲ್ಲಿ ಸ್ಕೂಲ್ ವ್ಯಾನ್ ಕೊಡ್ತೀವಿ. 6 ರಿಂದ 12ನೇ ತರಗತಿಗೆ ಮಾತ್ರ ಕೆಪಿಎಸ್ ಮಾಡೋಕೆ ಆಗಲ್ಲ. ಉತ್ತಮ ಶಾಲೆ ಇರುವ ಕಡೆ ಕೆಪಿಎಸ್ ಶಾಲೆ ಮಾಡ್ತಾ ಇದ್ದೆವೆ. ನಮ್ಮ ಸಮಾಜ ಹಾಳು ಮಾಡ್ತಿರೋದು ಸೋಶಿಯಲ್ ಮೀಡಿಯಾ. ನಾನು ಕನ್ನಡ ಶಾಲೆ ಮುಚ್ಚುತ್ತೆನೆ ಎಂದು ಹೇಳಿಲ್ಲ. ಒಬ್ಬ ಮಗು ಇದ್ದರೂ ಒಂದು ಟೀಚರ್ ಇರ್ತಾರೆ. ನಮ್ಮ ಸರ್ಕಾರ ಯಾವುದೆ ಶಾಲೆ ಮುಚ್ಚಲ್ಲ. ನಮ್ಮ ರಕ್ತದಲ್ಲಿ ಕನ್ನಡ ಇದೆ. ಮಕ್ಕಳು ಶಾಲೆಗೆ ಬರೋದು ಇದ್ದರೆ ಹೊಸ ಶಾಲೆ ಕೊಡ್ತೀನಿ ಎಂದಿದ್ದಾರೆ.

500 ಕೆಪಿಎಸ್ ಶಾಲೆ ಘೋಷಣೆ ಮಾಡಿದ್ವಿ. ಈಗ 900 ಶಾಲೆ ಮಾಡ್ತಾ ಇದ್ದೆವೆ. ಬಿಜೆಪಿ ಶಾಸಕರೇ ಕಡಿಮೆ ಮಕ್ಕಳು ಇರುವ ಶಾಲೆ ಮರ್ಜ್ ಮಾಡಿ ಅಂದರು. ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಏನ್ ಮಾಡಿದೆ ಅಂತ ನಾನು ಹೇಳಲ್ಲ. ಒಂದೆ ಕಡೆ ಶಿಕ್ಷಣ ಕೊಟ್ಟರೆ ಕ್ವಾಲಿಟಿ ಶಿಕ್ಷಣ ಸಿಗಲಿದೆ. ಯಾವುದೆ ಕಾರಣಕ್ಕೂ ಸರ್ಕಾರಿ ಶಾಲೆ ಮುಚ್ಚಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *