ಮಕ್ಕಳು ಜೀವನದಲ್ಲಿ ಉತ್ತಮ ಮೌಲ್ಯ ಅಳವಡಿಸಿಕೊಳ್ಳಬೇಕು

ನಗರದ

ಸುದ್ದಿ ಸಂಗ್ರಹ ಶಹಾಬಾದ
ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಂಸ್ಕಾರದಂತಹ ಉತ್ತಮ ಮೌಲ್ಯ ರೂಢಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ಸಂತ ಥಾಮಸ್ ಚರ್ಚನ ಪಾದರ ಜೆರಾಲ್ಡ್ ಸಾಗರ ಹೇಳಿದರು.

ನಗರದ ಮೌಂಟ್ ಕಾರ್ಮೆಲ್ ಕಾನ್ವೆಂಟ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೌಲ್ಯಗಳಿಲ್ಲದ ಜೀವನ ವ್ಯರ್ಥ ಆದ್ದರಿಂದ ಪ್ರತಿಯೊಬ್ಬರು ಕೆಲವೊಂದು ಮೌಲ್ಯಗಳನ್ನಾದರು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ. ಮೌಲ್ಯಗಳು ಜೀವನದ ಆಧಾರಸ್ತಂಭಗಳು. ಮಾನವೀಯ ಮೌಲ್ಯಗಳು ಇಂದಿನ ದಿನದಲ್ಲಿ ಬಹಳ ಅವಶ್ಯಕವಾಗಿದ್ದು, ಅವುಗಳನ್ನು ಅಳವಡಿಸಿಕೊಂಡು ಬೇರೆಯವರಿಗೆ ಆದರ್ಶವಾಗಿರಬೇಕು ಎಂದರು.

ಶಾಲೆಯ ಮುಖ್ಯಸ್ಥರಾದ ಸಿಸ್ಟರ್ ಲೋವಿಟಾ ಶಾಲೆಯ ವಾರ್ಷಿಕ ವರದಿ ವಾಚಿಸಿದರು.

ಸಿಆರ್‌ಪಿ ಸತ್ಯನಾರಾಯಣ ವಿಶ್ವಕರ್ಮ, ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಮುಖ್ಯಸ್ಥೆ ಜಯಶ್ರೀ ಅಕ್ಕ, ಮುಖ್ಯಗುರು ಸಿಸ್ಟರ್ ಲೋವಿಟಾ ವೇದಿಕೆಯಲ್ಲಿದರು.

Leave a Reply

Your email address will not be published. Required fields are marked *