ವಾಡಿ: ಬಿಜೆಪಿ ಕಛೇರಿಯಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ

ಪಟ್ಟಣ

ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ 76ನೇ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಮುಖಂಡರು ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆಚರಿಸಿದರು.

ಬಿಜೆಪಿ ಮುಖಂಡ ರಾಜು ಮುಕ್ಕಣ್ಣ ಮಾತನಾಡಿ,
ಭಾರತ ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಿ ನಮ್ಮೆಲ್ಲರಿಗೂ ಮಾನವೀಯ ಬದುಕನ್ನು ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರು ನೀಡಿದ್ದಾರೆ ಎಂದರು.

ಇಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸಲಾಗಿದೆ. ಭಾರತದ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಸಂವಿಧಾನ ದಿನದ ಘೋಷಣೆ ಮಾಡಿದ ದಿನವೂ ಒಂದು ರೀತಿಯಲ್ಲಿ ಐತಿಹಾಸಿಕವಾಗಿತ್ತು. 2015, ಡಾ. ಅಂಬೇಡ್ಕರ್‍ ಅವರ 125ನೇ ಜನ್ಮ ವರ್ಷಾಚರಣೆಯಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಂಬೈನಲ್ಲಿ ಅಂಬೇಡ್ಕರ್ ಅವರ ಸಮಾನತಾ ಪ್ರತಿಮೆಯ ಸ್ಮಾರಕಕ್ಕೆ ಶಿಲಾನ್ಯಾಸ ಮಾಡುತ್ತಿದ್ದ ಸಮಾರಂಭದಲ್ಲಿ ಇದನ್ನು ಘೋಷಿಸಿದರು ಎಂದರು.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಸಂವಿಧಾನದ ಪೀಠಿಕೆ ಓದಿದರು.

ಈ ಸಂಧರ್ಭದಲ್ಲಿ ಮುಖಂಡರಾದ ಶರಣಗೌಡ ಚಾಮನೂರ, ಗಿರಿಮಲ್ಲಪ್ಪ ಕಟ್ಟಿಮನಿ, ಯಮನಪ್ಪ ನವನಳ್ಳಿ, ಹರಿ ಗಲಾಂಡೆ, ಅಂಬದಾಸ ಜಾಧವ, ರಾಮು ರಾಠೋಡ, ಅಶೋಕ ಪವಾರ, ಆನಂದ ಇಂಗಳಗಿ, ಮಲ್ಲಿಕಾರ್ಜುನ ಸಾತಖೇಡ, ದಾನಪ್ಪ ಕಲ್ಲಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *