ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಂಜಾರ ಸಮಾಜ ಮತ್ತು ನವರಾತ್ರಿ ಉತ್ಸವ ಸಮಿತಿಯಿಂದ ಗೌರವ ಸನ್ಮಾನ

ರಾಜ್ಯ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಂಜಾರ ಸಮಾಜ ಮತ್ತು ನವರಾತ್ರಿ ಉತ್ಸವ ಸಮಿತಿಯ ಮುಖಂಡರಿಂದ ಸನ್ಮಾನಿಸಿ ಗೌರವಿಸಲಾಯಿತು.

ಬೆಂಗಳೂರಿನ ಸರ್ಕಾರಿ ವಸತಿ ಗೃಹದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಶನಿವಾರ ಭೇಟಿ ಮಾಡಿ ಚಿತ್ತಾಪುರ ಸ್ಟೇಷನ್ ತಾಂಡಾದ 25ನೇ ವರ್ಷದ ನವರಾತ್ರಿ ಉತ್ಸವದ ಬೆಳ್ಳಿ ಮಹೋತ್ಸವ ಕಾರ್ಯಕ್ರಮಕ್ಕೆ ಸಹಕರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಸಚಿವರು ಮಾತನಾಡಿ, ಕೆಲಸದ ಒತ್ತಡದಿಂದ ಕಾರ್ಯಕ್ರಮಕ್ಕೆ ಬರಲು ಆಗಲಿಲ್ಲ, ಹೀಗಾಗಿ ಯಾರು ಅನ್ಯತಾ ಭಾವಿಸಬೇಡಿ, ಸರ್ವ ಕಾಲದಲ್ಲೂ ನಾನು ಬಂಜಾರ ಸಮಾಜದ ಪರವಾಗಿದ್ದೆನೆ ಎಂದರು.‌

ಈ ಸಂದರ್ಭದಲ್ಲಿ ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಗೌರವಾಧ್ಯಕ್ಷ ಗೋಪಾಲ ರಾಠೋಡ, ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ವಿನೋದ ಪವಾರ, ಪ್ರಧಾನ ಕಾರ್ಯದರ್ಶಿ ಚಂದರ್ ಚವ್ಹಾಣ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ, ಹಿರಿಯ ಮುಖಂಡ ಚಂದು ಜಾಧವ, ರವಿ ಜಾಧವ, ದೇವಿದಾಸ್ ಚವ್ಹಾಣ, ಪ್ರವೀಣ್ ಪವಾರ, ರಾಕೇಶ್ ಪವಾರ ಸೇರಿದಂತೆ ಅನೇಕರು ಇದ್ದರು

Leave a Reply

Your email address will not be published. Required fields are marked *