ಪುರಂದರ ದಾಸರ ಕೀರ್ತನೆಗಳ ಪಾತ್ರ ಮಹತ್ವದ್ದು: ಎಚ್.ಬಿ ಪಾಟೀಲ್

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಕರ್ನಾಟಕದ ದಾಸ ಪರಂಪರೆಯ ಪ್ರಮುಖ ಸಂತರು, ಕವಿಗಳು, ‘ಕರ್ನಾಟಕ ಸಂಗೀತದ ಪಿತಾಮಹ’ ಎಂದು ಖ್ಯಾತರಾದ ಪುರಂದರ ದಾಸರು ವೇದ, ಉಪನಿಷತ್ತುಗಳ ಸಾರಾಂಶ ಕನ್ನಡದಲ್ಲಿ ಕೀರ್ತನೆಗಳನ್ನು ಸರಳ, ಸುಲಭವಾಗಿ ಜನರಿಗೆ ತಲುಪಿಸಿದರು. ಅವರ ಕೀರ್ತನೆಗಳು ಭಕ್ತಿ, ಸಾಮಾಜಿಕ ಮತ್ತು ತತ್ವಶಾಸ್ತ್ರಿಯ ಅಂಶಗಳು ಹೊಂದಿದ್ದು, ಸಾಂಸ್ಕೃತಿಕ, ಆಧ್ಯಾತ್ಮಿಕ ಪರಂಪರೆಯಲ್ಲಿ ಪುರಂದರ ದಾಸರ ಕೀರ್ತನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಅಭಿಮತಪಟ್ಟರು.

ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ಶಿವಾ ವಿದ್ಯಾ ಮಂದಿರ ಮತ್ತು ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಜರುಗಿದ ‘ಪುರಂದರ ದಾಸರ ಪುಣ್ಯಸ್ಮರಣೊತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುರಂದರ ದಾಸರು ‘ಕರ್ನಾಟಕ ಸಂಗೀತ’ಕ್ಕೆ ಮುನ್ನುಡಿ ಬರೆದವರು. ಅವರ ಕೀರ್ತನೆಗಳು ಸಂಗೀತ ಮತ್ತು ಭಕ್ತಿಯನ್ನು ಬೆರೆಸಿವೆ. ಸಾವಿರಾರು ಕೀರ್ತನೆಗಳು ರಚಿಸಿದ್ದು, ಅವುಗಳು ಇಂದಿಗೂ ಜನಪ್ರಿಯವಾಗಿವೆ. ವಚನಕಾರರಂತೆ ಸಾಮಾಜಿಕ ದೋಷಗಳನ್ನು ವಿಡಂಬಿಸಿದ್ದಾರೆ. ಅವರು ಮಾಧ್ವ ತತ್ವಶಾಸ್ತ್ರದ ಆಧಾರದ ಮೇಲೆ ಸಂಪೂರ್ಣ ಶರಣಾಗತಿ ಮತ್ತು ಭಗವಂತನ ಮೇಲಿನ ನಿರ್ಮಲ ಪ್ರೀತಿ ಬೋಧಿಸಿದ್ದಾರೆ. ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಕೀರ್ತನೆಗಳು ರಚಿಸಿದ್ದು ವೈಶಿಷ್ಟ್ಯತೆಯಾಗಿದೆ. ಬಾಲಲೀಲೆ, ವಾತ್ಸಲ್ಯ, ಸಾಮಾಜಿಕ ವಿಮರ್ಶೆ, ತತ್ವಜ್ಞಾನ, ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ಅಸಮಾನತೆಗಳ ಬಗ್ಗೆ ವಿರೋಧ ಸೇರಿದಂತೆ ಮುಂತಾದ ವಿಷಯಗಳನ್ನು ಕೀರ್ತನೆಗಳು ಹೊಂದಿದ್ದು, ಅವುಗಳ ಅಧ್ಯಯನ ಮಾಡಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಕಸಾ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಶಾಲೆಯ ಮುಖಯ ಶಿಕ್ಷಕಿ ಸಾಲಿ ಸಂಗೀತಾ ಸೇರಿದಂತೆ ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *