ಧಾರವಾಡ: ಅಂಬುಲೆನ್ಸ್‌ಗೆ ಎಷ್ಟೋ ಜನ ದಾರಿ ಬಿಟ್ಟುಕೊಡುವುದಿಲ್ಲ. ಇನ್ನು ಸಿಎಂ ಕಾರು ಬರುವಾಗ ಅಂಬುಲೆನ್ಸ್‌ಗೆ ದಾರಿ ಬಿಟ್ಟುಕೊಡುವುದಿಲ್ಲ, ಟ್ರಾಫಿಕ್‌ನಲ್ಲೆ ಅಂಬುಲೆನ್ಸ್ ಸಿಲುಕುತ್ತೆ ಎಂದು ದೂರಿದವರೆ ಹೆಚ್ಚು. ಆದರೆ ಸಿಎಂ ಸಿದ್ದರಾಮಯ್ಯ, ಅಂಬುಲೆನ್ಸ್‌ಗೆ ದಾರಿ ಮಾಡಿಕೊಡುವ ಮೂಲಕ ಅಪವಾದದಿಂದ ಮುಕ್ತರಾಗಿದ್ದಾರೆ.
ಎದೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುವಾಗ ದಾರಿ ಬಿಟ್ಟುಕೊಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ. ಧಾರವಾಡ ಕೃಷಿ ವಿವಿಯ ಕೃಷಿ ಮೇಳ ಉದ್ಘಾಟನೆ ಕಾರ್ಯಕ್ರಮ ಮುಗಿಸಿ ಹುಬ್ಬಳ್ಳಿಗೆ ವಾಪಸ್ ಆಗುತ್ತಿದ್ದ ವೇಳೆ ಧಾರವಾಡ ನಗರದ ಎನ್‌ಟಿಟಿಎಫ್ ಬಳಿ ಸಿಎಂ ಕಾರು ಇದ್ದಾಗ ಹಿಂದಿನಿಂದ ಅಂಬುಲೆನ್ಸ್ ಬಂದಿದೆ.
ಇದು ಸಿಎಂ ಮತ್ತು ಕಾನ್ವೆ ಗಮನಕ್ಕೆ ಬರುತಿದ್ದಂತೆ ಅಂಬುಲೆನ್ಸ್‌ಗೆ ದಾರಿ ಮಾಡಿಕೊಡಲಾಗಿದೆ. ಧಾರವಾಡ ನಗರದ ಬಾಗಲಕೋಟ ಪೆಟ್ರೋಲ್ ಪಂಪ್ ಬಳಿ ನಿಂತು ಅಂಬುಲೆನ್ಸ್ ಹೋಗಲು ಅವಕಾಶ ಮಾಡಿಕೊಡಲಾಯಿತು.