ಬೆಂಗಳೂರು: ಇತ್ತೀಚೆಗೆ ಮೊಬೈಲ್ ಹ್ಯಾಕರ್‌ಗಳ ಕಾಟ ಹೆಚ್ಚಾಗಿದೆ. ಈ ಬಿಸಿ ಈಗ ಸ್ಯಾಂಡಲ್‌ವುಡ್‌ನ ಬುದ್ಧಿವಂತನಿಗೂ ತಟ್ಟಿದೆ. ಉಪೇಂದ್ರ ಹಾಗೂ ಪ್ರಿಯಾಂಕಾ ದಂಪತಿ ಬೆಳ್ಳಂಬೆಳಗ್ಗೆ ವೀಡಿಯೋ ಮೂಲಕ ತಮ್ಮ ಮೊಬೈಲ್ ಹ್ಯಾಕ್ ಆಗಿರುವ ವಿಚಾರ ಬಹಿರಂಗಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನಮ್ಮಿಬ್ಬರ ಫೋನ್ ಹ್ಯಾಕ್ ಆಗಿದೆ. ಯಾರಾದರೂ ನಮ್ಮ ಹೆಸರಲ್ಲಿ ಹಣ ಕೇಳಿದರೆ ಕೊಡಬೇಡಿ, ಅದಕ್ಕೂ ಮುನ್ನ ಅನೌನ್ಸ್ ಮಾಡ್ತಿದ್ದೆವೆ. ಮುಂದೆ ಪೊಲೀಸರಿಗೆ ದೂರು ಕೊಡುತ್ತೆವೆ ಎಂದಿದ್ದಾರೆ ದಂಪತಿ.
ಫೋನ್ ಹ್ಯಾಕ್ ಆಗಿದ್ದು ಹೇಗೆ ?
ಆನ್‌ಲೈನ್‌ನಲ್ಲಿ ವಸ್ತುವೊಂದನ್ನು ಪ್ರಿಯಾಂಕಾ ಆರ್ಡರ್ ಮಾಡಿದ್ದರಂತೆ, ಬಳಿಕ ಹ್ಯಾಕರ್ ಒಬ್ಬ ಫೋನ್ ಮಾಡಿ ಹ್ಯಾಶ್ ಒತ್ತಿ, ಆ ನಂಬರ್, ಈ ನಂಬರ್ ಒತ್ತಿ ಎಂದು ಹೇಳಿ ಕನ್‌ಫ್ಯೂಸ್ ಮಾಡಿದ್ದಾರೆ. ಬಳಿಕ ಉಪ್ಪಿ ಮೊಬೈಲ್‌ನಿಂದಲೂ ಕಾಲ್ ಮಾಡಿದಾಗ ಅವರ ಫೋನ್ ಕೂಡ ಹ್ಯಾಕ್ ಆಗಿದೆ. ಹೀಗಾಗಿ ದೂರು ಕೊಡುವ ಮುನ್ನ ವೀಡಿಯೋ ಮೂಲಕ ಎಲ್ಲರಿಗೂ ವಿಷಯ ತಲುಪಿಸಿದ್ದಾರೆ ಉಪೇಂದ್ರ ದಂಪತಿ.