ಚಿತ್ತಾಪುರ: ಅತಿವೃಷ್ಟಿಯಿಂದ ಮುಂಗಾರು ಬೆಳೆಗಳು ಹಾನಿಯಾಗಿವೆ. ಹೀಗಾಗಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು ಮತ್ತು ಹೆಸರು, ಉದ್ದು ಬೆಳೆಗೆ ಸರ್ಕಾರದಿಂದ ಯೋಗ್ಯ ಬೆಲೆಯಲ್ಲಿ ಖರೀದಿಸಬೇಕು ಎಂದು ಕರವೇ ನಾರಾಯಣಗೌಡ ಬಣದ ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆಗ್ರಹಿಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ಮಾತನಾಡಿ, ಎರಡು ತಿಂಗಳುಗಳಿಂದ ಸುರಿದ ಭಾರಿ ಮಳೆಯಿಂದ ಮುಂಗಾರು ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದರಿಂದ ರೈತರು ಬಹಳ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅತಿವೃಷ್ಟಿಯಿಂದ ತಾಲೂಕಿನ ಬೆಳೆಗಳು ಹಾನಿಯಾಗಿದ್ದು. ಸಮೀಕ್ಷೆ ಮಾಡಿ ಎಲ್ಲಾ ರೈತರಿಗೆ ಸರಕಾರ ಎಕರೆಗೆ 25 ಸಾವಿರ ರೂ ಪರಿಹಾರ ನೀಡಬೇಕು ಮತ್ತು ಮುಂಗಾರು ಬೆಳೆ ಹೆಸರು, ಉದ್ದಿಗೆ ಸರ್ಕಾರದಿಂದ ಕೇಂದ್ರಗಳು ರಚಿಸಿ ಯೋಗ್ಯ ಬೆಲೆಯಲ್ಲಿ ಖರೀದಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿಗಳಾದ ಗಣೇಶ ರಾಠೋಡ, ಶಿವರಾಮ ಚವ್ಹಾಣ, ವಿನೋದ ಚವ್ಹಾಣ, ಶರಣು ಹಾಸಬಾ, ಶೇರ್ ಅಲಿ, ಇಮ್ರಾನ್ ಸೇಟ್, ಶಿವುಕುಮಾರ ಗುತ್ತೇದಾರ, ರಾಜೇಶ್ ಗುತ್ತೇದಾರ, ಭೀಮರಾಯ ಕುಂಬಾರ, ಮೈನೋದ್ದಿನ್ ದಂಡೋತಿ, ಅಬ್ಬಾಸ್ ದಂಡೋತಿ, ಆಸೀಫ್ ಇವಣಿ, ಖದೀರ್ ಭಂಕಲಗಿ,
ಅಯ್ಯುಬ್ ನಾಲವಾರ, ಖೇಮು ಹಣಮು, ಮಾಜೀದ್ ಅಡ್ಡವಾಲೆ, ಸಾಬಯ್ಯ ಗುತ್ತೇದಾರ, ಮೈನೋದ್ದಿನ್ ತಾಜನ್, ಆಕಾಶ್ ವಾಡಿ ಸೇರಿದಂತೆ ಅನೇಕರು ಇದ್ದರು.