‌ಡಾ.ವಿಷ್ಣುವರ್ಧನ್ ಸಮಾಧಿ ಕೆಡವಿದವರ ಪ್ಲ್ಯಾನ್‌ ಉಲ್ಟಾ ಮಾಡಿ ಶಾಕ್‌ ಕೊಟ್ಟ ಸರ್ಕಾರ, ಆದೇಶ ಪತ್ರದಲ್ಲಿ ಏನಿದೆ ?

ಸುದ್ದಿ ಸಂಗ್ರಹ ವಿಶೇಷ

ಬೆಂಗಳೂರು: ಅಭಿಮಾನ್‌ ಸ್ಟುಡಿಯೋ ಹಾಗೂ ವಿಷ್ಣುವರ್ಧನ್‌ ಸಮಾಧಿ ಇದ್ದ ಜಾಗವನ್ನು ಸರ್ಕಾರ ಈಗ ಅರಣ್ಯ ಪ್ರದೇಶ ಎಂದು ಆದೇಶ ಹೊರಡಿಸಿದೆ.

ಸರ್ಕಾರ ಹೊರಡಿಸಿದ ಆದೇಶ ಪತ್ರದಲ್ಲಿ ಏನಿದೆ ?
ಬೆಂಗಳೂರು ದಕ್ಷಿಣ ತಾಲುಕು, ಕೆಂಗೇರಿ ಹೋಬಳಿ, ಮೈಲಸಂದ ಗ್ರಾಮದ ಸರ್ವೆ ನಂ.26ರಲ್ಲಿ ಅಭಿಮಾನ್ ಸ್ಟುಡಿಯೋಗೆ ನೀಡಿರುವ ಅರಣ್ಯ ಪ್ರದೇಶ ಆದೇಶವನ್ನು ರದ್ದು ಪಡಿಸಿ, ಹಿಂಪಡೆಯುವ ಬಗ್ಗೆ ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮದ ಸರ್ವೆ ನಂ.22 (78.3-18ಗು), ಸರ್ವೆ ನಂ.2 (b2ಎ-20ಗು)ರ ಪ್ರದೇಶವನ್ನು ಶುರಹಳ್ಳಿ ಕಾಯಿ, ಅರಣ್ಯ ಪ್ರದೇಶವೆಂದು ಉಲ್ಲೇಖ(1)ರ ಪತ್ರದಲ್ಲಿ ಘೋಷಣೆ ಮಾಡಿಲಾಗಿರುತ್ತದೆ.

ಮೈಲಸಂದ್ರ ಗ್ರಾಮದ ಸರ್ವೆ ನಂ.26ರಲ್ಲಿ 20 ಎಕರೆ ಪ್ರದೇಶವನ್ನು ಶ್ರೀ.ಟಿ.ಎನ್ ಬಾಲಕೃಷ್ಣ ಅವರಿಗೆ ಅಭಿಮಾನ್ ಚಿತ್ರ ಸ್ಟುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದ ಮೇಲೆ ನೀಡಲಾಗಿರುತ್ತದೆ. ಅದಾಗ್ಯೂ ಮೈಲಸಂದ್ರ ಗ್ರಾಮದ ಸರ್ವೆ ನಂ.26ರಲ್ಲಿ 20 ಎಕರೆ ಪ್ರದೇಶವನ್ನು ಅಭಿಮಾನ್ ಚಿತ್ರ ಸ್ಟುಡಿಯೋ ನಿರ್ಮಿಸುವ ಸಲುವಾಗಿ ಕಂದಾಯ ಇಲಾಖೆಗೆ ಒಪ್ಪಿಸುವ ಬಗ್ಗೆ ಆದೇಶಿಸಲಾಗಿರುತ್ತದೆ.

21.03.1970ರಲ್ಲಿ ಸರ್ಕಾರಿ ಆದೇಶದಲ್ಲಿ ಅಭಿಮಾನ್ ಚಿತ್ರ ಸ್ಟುಡಿಯೋ ಅಭಿವೃದ್ಧಿ ಹೊರತಾಗಿ ಬೇರೆ ಯಾವುದೆ ಉದ್ದೇಶಕ್ಕೆ ಬಳಸದಿರಲು ಸರ್ಕಾರದ ಪೂರ್ವಾನುಮತಿ ವಿನ: ಮಾರಾಟ / ಪರಭಾರೆ ಮಾಡದಿರಲು ಷರತ್ತು ವಿಧಿಸಿ ಆದೇಶ ನೀಡಲಾಗಿರುತ್ತದೆ. ಷರತ್ತುಗಳ ಉಲ್ಲಂಘನೆ ಆದಲ್ಲಿ ಮಂಜೂರಾತಿಯನ್ನು ರದ್ದುಪಡಿಸಿ ಭೂಮಿಯನ್ನು ಸರ್ಕಾರಕ್ಕೆ ಹಿಂಪಡೆಯಲಾಗುವುದೆಂಬುದಾಗಿ ಅದೇಶದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿರುತ್ತದೆ.

ಟಿ.ಎನ್ ಬಾಲಕೃಷ್ಣ ಅವರು ಪರಿವರ್ತನ ಶುಲ್ಕ ವಿನಾಯಿತಿ 21.09.1970 ಸರ್ಕಾರಿ ಆದೇಶದ ಷರತ್ತಿನನ್ವಯ ವಿನಾಯಿತಿ ನೀಡಿ 5 ವರ್ಷದ ಒಳಗೆ ಅಭಿಮಾನ್ ಚಿತ್ರ ಸುಡಿಯೋ ಪೂರ್ಣಗೊಳಿಸುವಂತೆ ಹಾಗೂ ಸದರಿ ಉದ್ದೇಶ ಹೊರತಾಗಿ ಯಾವುದೆ ಉದ್ದೇಶಕ್ಕೆ ಬಳಸುವುದು ನಿಯಮದ ಉಲ್ಲಂಘನೆ ಎನ್ನಲಾಗಿದೆ. ಇದು ರಾಜ್ಯ ಅರಣ್ಯ’ ಪುದೇಶ ಎಂದು ಘೋಷಣೆಯಾಗಿರುತ್ತದೆ. ಆದರೆ ಒಂದು ಬಾರಿ ಒಂದು ಪ್ರದೇಶವನ್ನು ಅರಣ್ಯವನ್ನಾಗಿ ಕಾನೂನುಗಳಡಿ ಅಧಿಸೂಚನೆ ಹೊರಡಿಸಿದ ನಂತರ ಅದನ್ನು ಅರಣ್ಯವಲ್ಲವೆಂದು ಯಾವುದೆ ಸರ್ಕಾರಿ ಅಧಿಸೂಚನೆ ಹೊರಡಿಸಿರುವುದಿಲ್ಲ, ಪ್ರಸ್ತುತ ಸದರಿ ಪ್ರದೇಶ Legal Status ಎಂದಿಗೂ ಅರಣ್ಯ, ಎಂದೇ ಇರುತ್ತದೆ.

ಷರತ್ತಿನ ಉಲ್ಲಂಘನೆಯಾಗುತ್ತದೆ ಹಾಗೂ ಅಂತಹ ಸಂದರ್ಭದಲ್ಲಿ ಮಂಜೂರಾತಿಯು ರದ್ದಾಗಿ ಸದರಿ ಸ್ಥಳವನ್ನು ಹಿಂಪಡೆದಾಗ ಯಾವುದೆ ಪರಿಹಾರ ನೀಡಲಾಗುವುದಿಲ್ಲ ಎಂಬುದಾಗಿ ಸ್ಪಷ್ಟವಾಗಿ ಆದೇಶಸಲ್ಪಟ್ಟಿರುತ್ತದೆ.

ಮುಂದುವರೆದು, ದಿನಾಂಕ: 21.09.1970ರ ಆದೇಶದಲ್ಲಿ ಯಾವ ಉದ್ದೇಶಕ್ಕಾಗಿ ಸದರಿ ಕಾಯ್ದಿಟ್ಟ ಅರಣ್ಯ ಪುದೇಶವು ಮಂಜೂರಾತಿ ಆಗಿರುತ್ತದೆ, ಅದೆ ಉದ್ದೇಶಕ್ಕಾಗಿ ಹೊರತಾಗಿ ಬೇರೆ ಯಾವುದೆ ಉದ್ದೇಶಕ್ಕೆ ಬಳಸುವುದು ಷರತ್ತಿನ ಉಲ್ಲಂಘನೆಯಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದರು ಸಹ ಉಲ್ಲೇಖ(2)ರ ಪತ್ರದಲ್ಲಿ ವಿಶೇಷ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ರವರು ಕೆಲವು ಷರತ್ತುಗಳನ್ವಯ ಟಿ.ಎನ್ ಬಾಲಕೃಷ್ಣ ಇವರ ಮಕ್ಕಳಾದ ಶ್ರೀನಿವಾಸ್‌ ಮತ್ತು ಬಿ ಗಣೇಶ್ ಇವರುಗಳಿಗೆ ಮಂಜೂರಾದ 20 ಎಕರೆ ಪೈಕಿ 10 ಎಕರೆ ಜಮೀನನ್ನು ಮಾರಾಟ ಮಾಡಲು ಅನುಮತಿಯನ್ನು ನೀಡಿರುತ್ತಾರೆ. ಇದು ಆದೇಶದ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ.

ಉಲ್ಲೇಖ(2)ರ ಪತ್ರದಲ್ಲಿ ವಿಶೇಷ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಇವರು ಶ್ರೀ.ಟಿ.ಎನ್ ಬಾಲಕೃಷ್ಣ ಇವರ ಮಕ್ಕಳಿಗೆ ಮಂಜೂರಾದ 20 ಎಕರೆ ಪೈಕಿ 10 ಎಕರೆ ಜಮೀನನ್ನು ಮಾರಾಟ ಮಾಡಿ ಬಂದ ಹಣದಿಂದ ಸ್ಟುಡಿಯೋವನ್ನು ಅಧುನಿಕ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಬೇಕೆಂದು ಮತ್ತು ಕೆಲವು ಷರತ್ತುಗೊಳಪಟ್ಟು ಅನುಮತಿ ನೀಡಿದ್ದರು. ಅವರು 12 ಎಕರೆ ಮಾರಾಟ ಮಾಡಿರುತ್ತಾರೆ, ಅಭಿಮಾನ್ ಸ್ಟುಡಿಯೋದ ಯಾವುದೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವುದಿಲ್ಲ, ಯಥಾಸ್ಮತಿಯಲ್ಲಿ ಇರುತ್ತದೆ.

ಟಿ‌.ಎನ್ ಬಾಲಕೃಷ್ಣ ಇವರಿಗೆ ಮಂಜೂರಾದ ಮೈಲಸಂದ್ರ ಗ್ರಾಮದ ಸರ್ವೆ ನಂ.26ರಲ್ಲಿ 20 ಎಕರೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಯಾವುದೆ ಅಭಿವೃದ್ಧಿ, ಕಾರ್ಯ ನಡೆಸದೆ ದಿನಾಂಕ: 16.07.2003ರ ಅದೇಶದಲ್ಲಿ ವಿಧಿಸಿರುವ ಷರತ್ತುಗಳು ಉಲಂಘಿಸಿರುವ ಕಾರಣ ಇವರಿಗೆ ತಮ್ಮ ಕಛೇರಿಯಿಂದ ನೋಟೀಸ್ ಜಾರಿ ಮಾಡಲಾಗಿರುತ್ತದೆ.

ಗಣೇಶ್ ಹಾಗು ಅವರ ಸೋದರನ ಮಗನಾದ ಬಿಎಸ್ ಕಾರ್ತಿಕ್ ಅವರು ರಾಘವೇಂದ್ರ ಬಿ.ಕೆ ರವರೊಂದಿಗೆ ಎಕರೆ ಒಂದಕ್ಕೆ ರೂ.14,37,15,000/- (ಪ್ರತಿ Sq.Ft.ಗೆ ರೂ.3500/- ರಂತೆ ದಿನಾಂಕ: 16.08.2021ರಲ್ಲಿ ನೊಂದಾಯಿತ ಮಾರಾಟ ಒಪ್ಪಂದ ಮಾಡಿಕೊಂಡಿದ್ದಾರೆ. 16.08.2021 ರಂತೆ ಉಳಿದ 10 ಎಕರೆ ತುರಹಳ್ಳಿ, ಕಾಯ್ದಿಟ್ಟ ಅರಣ್ಯ ಪುದೇಶವನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದು, ಅದರಂತೆ ಮೂರನೇ ವ್ಯಾಕ್ತಿಯ ಮಾಲೀಕತ್ವವನ್ನು ಸೃಷ್ಟಿಸುತ್ತಿರುವುದು ಸ್ಪಷ್ಟವಾಗಿದ್ದು,

ಈ ಹಿಂದೆ 1970ರಲ್ಲಿ ಟಿ.ಎನ್ ಬಾಲಕೃಷ್ಣ ಅವರಿಗೆ ಸದರಿ ಭೂಮಿಯನ್ನು ಮಂಜೂರು ಮಾಡುವಾಗ ವಿಧಿಸಿದ ಷರತ್ತುಗಳನ್ನು ಉಲ್ಲಂಘಿಸಿದ್ದು, ಈ ಉಲ್ಲಂಘನೆಯಿಂದ ಸದರಿ ಮಂಜೂರಾತಿ ಆದೇಶವನ್ನು ರದ್ದುಗೊಳಿಸಿ, ಸದರಿ ಭೂಮಿಯನ್ನು ಸರ್ಕಾರ ಹಿಂದಕ್ಕೆ ಪಡೆದು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕಾಗಿದೆ.

ಟಿ.ಎನ್ ಬಾಲಕೃಷ್ಣ ಅವರಿಗೆ ಅಭಿಮಾನ್ ಚಿತ್ರ ಸ್ಟುಡಿಯೋ ಸ್ಥಾಪಿಸುವ ಕುರಿತು ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮದ ಸರ್ವೆ ನಂ.26ರಲ್ಲಿ ಕೆಲವು ಷರತ್ತುಗೊಳಪಟ್ಟು 20 ಎಕರೆ ಅರಣ್ಯ ಪ್ರದೇಶವು ನೀಡಲಾಗಿರುತ್ತದೆ. ಆದರೆ ಸದರಿ ಷರತ್ತುಗಳನ್ನು ಉಲ್ಲಂಘನೆ ಮಾಡಲಾಗಿರುವುದರಿಂದ ಸದರಿ ಮಂಜೂರಾತಿ ಆದೇಶ ರದ್ದುಪಡಿಸಬೇಕಾಗಿ ತಮ್ಮಲ್ಲಿ ಪತ್ರಗಳ ಮುಖಾಂತರ ಕೋರಲಾಗಿದೆ. ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮದ ಸರ್ವೆ ನಂ.26ರ ಪ್ರದೇಶವು ಉಲ್ಲೇಖ(1)ರ ಸರ್ಕಾರಿ ಅದೇಶದಂತೆ, ಮುಂದುವರೆದು, ಮಾನ್ಯ ಸರ್ವೋಚ್ಚ ನ್ಯಾಯಾಲಯವು 15.05 2025ರಲ್ಲಿ, ಈ ಕೆಳಕಂಡಂತೆ ಆದೇಶಿಸಲಾಗಿರುತ್ತದೆ.

ಆದುದರಿಂದ ಮೇಲೆ ಪ್ರಸ್ತಾಪಿಸಿರುವ ಕಾರಣಗಳು ಮತ್ತು ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಲ್ಲಿನ ನಿರ್ದೇಶನಗಳನ್ವಯ ದಿವಂಗತ ಶ್ರೀ.ಟಿ.ಎನ್ ಬಾಲಕೃಷ್ಣ ರವರಿಗೆ ಅಭಿಮಾನ್ ಚಿತ್ರ ಸ್ಟುಡಿಯೋ ಸ್ಥಾಪಿಸುವ ಕುರಿತು ಮಂಜೂರಾದ ಆದೇಶ ರದ್ದು ಪಡಿಸಿ ಅರಣ್ಯ ಇಲಾಖೆಯ ಹೆಸರಿಗೆ ಇಂಡಿಕರಣ ಮಾಡಬೇಕಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕಾಗಿ ಮತ್ತು ಸದರಿ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಬೇಕಾಗಿ ತಮ್ಮಲ್ಲಿ ಮತ್ತೊಮ್ಮೆ ಕೋರಲಾಗಿದೆ.

ಗೆ
ಜಗದೀಶ ಜಿ
ಜಿಲ್ಲಾಧಿಕಾರಿಗಳು
ಬೆಂಗಳೂರು ನಗರ ಜಿಲ್ಲೆ ಕೆ.ಜಿ ರಸ್ತೆ, ಬೆಂಗಳೂರು

Leave a Reply

Your email address will not be published. Required fields are marked *