ಸುದ್ದಿ ಸಂಗ್ರಹ ಶಹಾಬಾದ್
ಕಾರ್ಮಿಕ ವಿರೋಧಿ ಕರಾಳ ಕಾರ್ಮಿಕ ಸಹಿತೆ ಲೇಬರ್ ಕೋಡ್ ದುಡಿಯುವ ವರ್ಗದ ಮರಣ ಶಾಸನವಾಗಿವೆ ಕೂಡಲೆ ಕೇಂದ್ರ ಸರ್ಕಾರ ಇದನ್ನು ವಾಪಸ್ಸು ಪಡೆಯಬೇಕೆಂದು ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಎಂ.ಜಿ ಆಗ್ರಹಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಗುರುವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ನಡೆದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಉದ್ದೇಶಿಸಿ ಮಾತನಾಡಿದ ಅವರು, ಕೃಷಿ ಕೂಲಿ ಕಾರ್ಮಿಕರು ಮತ್ತು ಕಾರ್ಮಿಕರ ಕಾಯ್ದೆಗಳಾದ ವಿದ್ಯುತ್ ಕಾಯ್ದೆ ತಿದ್ದುಪಡಿ, ಬೀಜ ಕಾಯ್ದೆ, ಭೂಸ್ವಾಧೀನ ಕಾಯ್ದೆ ಮತ್ತು ವಿ.ಬಿ ಜಿರಾಮ್, ಜಿ ವಿಮಾ ಕಾಯ್ದೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಮುಷ್ಕರ ಉದ್ದೇಶಿಸಿ ನಾಗಪ್ಪ ರಾಯಚೂರಕರ್, ಗಣಪತರಾವ ಕೆ ಮಾನೆ, ಶೇಖಮ್ಮ ಕುರಿ, ಸಾಬಮ್ಮ ಎಂ ಕಾಳಗಿ, ಮಲ್ಲಣ್ಣ ಮಸ್ಕಿ, ಗುಂಡಮ್ಮ ಮಡಿವಾಳ, ಈರಯ್ಯ ಸ್ವಾಮಿ, ಕೃಷ್ಣಪ್ಪ ಕರಣಿಕ ಸೇರಿದಂತೆ ಅನೇಕರು ಮಾತನಾಡಿದರು.
ನೆಹರು ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಸಿ ತಹಸೀಲ್ದಾರ್ ನೀಲಪ್ರಭಾ ಬಬಲಾದ ಅವರ ಮುಖಾಂತರ ಪ್ರಧಾನಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಎಐಯುಟಿಯುಸಿ, ಸಿಡಬ್ಲ್ಯೂಎಫ್’ಐ, ಕೆಪಿಆರಎಸ್ ಮುಖಂಡರಾದ ಮೈತ್ರಾಬಾಯಿ, ಪ್ರಕಾಶ ಕುಸಾಳೆ, ರಾಯಪ್ಪ ಹುರಮುಂಜಿ, ರಾಮು ಜಾಧವ್, ಜಯಶ್ರೀ ತರನಳ್ಳಿ, ಸುಜಾತ ಕಡಿಹಳ್ಳಿ, ಮಲ್ಲಿಕಾರ್ಜುನ ಹಳ್ಳಿ, ಮಹಾದೇವ ತರನಹಳ್ಳಿ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು, ಬಿಸಿಯೂಟ ಕಾರ್ಮಿಕರು ಮತ್ತು ಮುಖಂಡರು ಮುಷ್ಕರದಲ್ಲಿ ಭಾಗವಹಿಸಿದ್ದರು.