ಅದೃಷ್ಟ ಯಾರಿಗೆ, ಯಾವಾಗ, ಯಾವ ರೂಪದಲ್ಲಿ ಒಲಿದು ಬರುತ್ತದೆ ಎಂಬುದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವದನ್ನು ನೋಡಿ ನಮಗ್ಯಾಕೆ ಇಂತಹ ಅದೃಷ್ಟ ಬರಬಾರದು ಎಂದು ಅಂದುಕೊಂಡಿರುತ್ತೆವೆ. ಆದರೆ ಅದೆಲ್ಲ ಕಾಲದ ಮಹಿಮೆಯಷ್ಟೆ.
ಇಂತಹ ಮಹಿಮೆ ಈಗ ಸಿಂಗಾಪೂರ್ನಲ್ಲಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದೆ. ಈ ಸ್ಟೋರಿ ಓದಿದರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೆ ಇರಲಾರರು.
ಭಾರತೀಯ ಮೂಲದ ವ್ಯಕ್ತಿ ತನ್ನ ಹೆಂಡತಿಯ ಮಾತು ಕೇಳಿದ್ದಕ್ಕೆ ಈಗ 8 ಕೋಟಿ ರೂ. ಮೌಲ್ಯದ ಲಕ್ಕಿ ಡ್ರಾ ಗೆದ್ದಿದ್ದಾರೆ. ಅದು ಹೇಗೆ ಸಾಧ್ಯ ಅಂತಿರಾ ? ಈ ಸುದ್ದಿ ಪೂರ್ತಿಯಾಗಿ ಓದಿ.
ಪತ್ನಿಗಾಗಿ ಚಿನ್ನದ ಸರ ಖರೀದಿಸಿದ ನಂತರ ಲಕ್ಕಿ ಡ್ರಾದಲ್ಲಿ 1 ಮಿಲಿಯನ್ ಡಾಲರ್ ಬಹುಮಾನ ಗೆದಿದ್ದಾರೆ. ಮೂರು ತಿಂಗಳ ಹಿಂದೆ ಪತ್ನಿಗಾಗಿ ಖರೀದಿಸಿದ ಚಿನ್ನದ ಸರ ಈಗ ಅದೃಷ್ಟ ತಂದುಕೊಟ್ಟಿದೆ. ಒಂದೇ ರಾತ್ರಿಯಲ್ಲಿ ಈ ವ್ಯಕ್ತಿ ಕೋಟ್ಯಧೀಶ್ವರನಾಗಿದ್ದಾನೆ.
ವಿವರಣೆಗೆ ಬರುವುದಾದರೆ, ಬಾಲಸುಬ್ರಮಣ್ಯಂ ಚಿದಂಬರಂ ಎಂಬುವವರು 21 ವರ್ಷಗಳಿಂದ ಸಿಂಗಾಪುರದಲ್ಲಿ ನೆಲೆಸಿದ್ದಾರೆ. ಆಭರಣ ಕಂಪನಿಯ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಲಕ್ಕಿ ಡ್ರಾ ನಡೆಸಲಾಯಿತು. ಆ ಆಭರಣ ಮಳಿಗೆಯಲ್ಲಿ 250 ಡಾಲರ್ಗಿಂತ ಹೆಚ್ಚು ಮೌಲ್ಯದ ಆಭರಣ ಖರೀದಿಸಿದವರು ಲಕ್ಕಿ ಡ್ರಾಗೆ ಅರ್ಹರಾಗಿರುತ್ತಾರೆ.
ತನ್ನ ಪತ್ನಿ ಚಿನ್ನದ ಸರ ಕೊಡಿಸುವಂತೆ ಕೇಳಿದ್ದಕ್ಕೆ ಚಿದಂಬರಂ ಅವರು ಆಭರಣದ ಮಳಿಗೆಗೆ ಹೋಗಿ ಹೆಂಡತಿಗಾಗಿ 6 ಸಾವಿರ ಡಾಲರ್ ಮೌಲ್ಯದ ಚಿನ್ನವನ್ನು ಖರೀದಿಸಿ, ಮನೆಗೆ ಬಂದಿದ್ದರು. ಇದಾದ ಮೂರು ತಿಂಗಳ ಬಳಿಕ ಲಕ್ಕಿ ಡ್ರಾನಲ್ಲಿ 8 ಕೋಟಿ ರೂ. ಬಂಪರ್ ಬಹುಮಾನ ಸಿಕ್ಕಿದೆ. ಇದನ್ನು ಕೇಳಿ ಚಿದಂಬರಂ ಕುಟುಂಬ ಕುಣಿದು ಕುಪ್ಪಳಿಸಿದೆ.
ಇಷ್ಟು ದೊಡ್ಡ ಲಕ್ಕಿ ಡ್ರಾ ಗೆದ್ದಿದ್ದಕ್ಕೆ ಕಣ್ಣೀರು ಹಾಕುತ್ತಾ ಚಿದಂಬರಂ ಸಂತಸ ವ್ಯಕ್ತಪಡಿಸಿದ್ದಾರೆ. ತಂದೆ ತೀರಿಕೊಂಡ ದಿನವೇ ಈ ಸುದ್ದಿ ಕೇಳಿ ಒಂದು ಕಡೆ ಖುಷಿಯಾಯಿತು ಎಂದರು.
ತಮ್ಮ ತಾಯಿಯೊಂದಿಗೆ ಒಳ್ಳೆಯ ಸುದ್ದಿ ಹಂಚಿಕೊಳ್ಳಲು ಮತ್ತು ಗೆದ್ದ ಹಣದ ಒಂದು ಭಾಗ ಸಮುದಾಯಕ್ಕೆ ದಾನ ಮಾಡಲು ಯೋಜಿಸಿರುವುದಾಗಿ ಚಿದಂಬರಂ ತಿಳಿಸಿದ್ದಾರೆ.