ಭೋಪಾಲ್: ತಾಜ್ ಮಹಲ್ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು. ಇದರ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಪ್ರವಾಸಿಗರು ಆಗ್ರಾಕ್ಕೆ ಭೇಟಿ ನೀಡುತ್ತಾರೆ. ಆದರೆ ಮಧ್ಯಪ್ರದೇಶದ ದಂಪತಿ ತಮ್ಮ ಮನೆಯನ್ನು ಈ ಐತಿಹಾಸಿಕ ಸ್ಮಾರಕದ ಪ್ರತಿಕೃತಿಯಂತೆ ವಿನ್ಯಾಸಗೊಳಿಸಿದ್ದಾರೆ.
ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರು ಈ ಮನೆಯನ್ನು ನೋಡಿ ಫುಲ್ ಫಿದಾ ಆಗಿದ್ದಾರೆ.
ಆನಂದ್ ಪ್ರಕಾಶ್ ಚೌಕ್ಸೆ ಮತ್ತು ಇತನ ಪತ್ನಿ ಒಡೆತನದ ನಾಲ್ಕು ಬೆಡ್ ರೂಂಗಳಿರುವ ಮನೆ ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿದೆ. ಈ ಮನೆಯನ್ನು ಮಕ್ರಾನಾ ಅಮೃತಶಿಲೆಯನ್ನು ಬಳಸಿ ತಯಾರಿಸಲಾಗಿದೆಯಂತೆ. ಇದು ಮೂಲ ಸ್ಮಾರಕದ ಮೂರನೇ ಒಂದು ಭಾಗದಷ್ಟು ಗಾತ್ರದಲ್ಲಿದೆ ಎಂದು ದಂಪತಿ ಹೇಳಿದ್ದಾರೆ.
ಅದು ಅಲ್ಲದೇ ಈ ಮನೆ ಅಮೃತಶಿಲೆಯ ಗುಮ್ಮಟಗಳು ಮತ್ತು ಸೊಗಸಾದ ಕಮಾನುಗಳನ್ನು ಹೊಂದಿದೆ. ಈ ಮನೆಯನ್ನು ಪ್ರೀತಿಯ ಸಾಕ್ಷಿಯಾಗಿ ನಿರ್ಮಿಸಲಾಗಿದೆ ಎಂದು ಆನಂದ್ ಪ್ರಕಾಶ್ ಚೌಕ್ಸೆ ಹೇಳಿದ್ದಾನೆ.
ನೆಟ್ಟಿಗರು ಕೂಡ ಈ ಅದ್ಭುತ ವಾಸ್ತುಶಿಲ್ಪವನ್ನು ಹೋಲುವ ಮನೆಯನ್ನು ಫುಲ್ ಫಿದಾ ಆಗಿದ್ದಾರೆ. ಅನೇಕರು ಈ ಮನೆಯ ಸೌಂದರ್ಯವನ್ನು ಹೊಗಳಿ ಕಾಮೆಂಟ್ ಮಾಡಿದ್ದಾರೆ. ತುಂಬಾ ಸುಂದರವಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಜೋಡಿಯನ್ನು ಮತ್ತು ಈ ಮನೆಯನ್ನು ಪ್ರೀತಿಸುತ್ತೆನೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ದಂಪತಿಯನ್ನು ಹೊಗಳಿದ್ದಾರೆ. ಅವರ ಮನೆಗಿಂತ ಅವರ ವಿನಮ್ರ ನಡವಳಿಕೆ ಹೆಚ್ಚು ಇಷ್ಟವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ತಾಜ್ ಮಹಲ್ ಭಾರತದ ಉತ್ತರ ಪ್ರದೇಶದ ಆಗ್ರಾದಲ್ಲಿದೆ. ಇದನ್ನು 1631 ರಲ್ಲಿ ಐದನೇ ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಪ್ರೀತಿಯ ಪತ್ನಿ ಮುಮ್ತಾಜ್‌ಳ ನೆನಪಿಗಾಗಿ ಈ ಮಹಲ್ ಅನ್ನು ನಿರ್ಮಿಸಿದ್ದಾನೆ. ಇದು ಈಗ ಜಗತ್ಪ್ರಸಿದ್ಧವಾಗಿದೆ.