ವಾಡಿ: ಪಟ್ಟಣದ ರೈಲ್ವೆ ನಿಲ್ದಾಣದ ತ್ವರಿತ ಕಾಮಗಾರಿ ಅಭಿವೃದ್ಧಿಗೆ ಬಿಜೆಪಿ ಮುಖಂಡರು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.
ಕಲಬುರಗಿ ನಗರಕ್ಕೆ ಆಗಮಿಸಿದ ಕೇಂದ್ರ ರೈಲ್ವೆ ಸಚಿವರನ್ನು ಮಾಜಿ ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ ಅವರೊಂದಿಗೆ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ, ವಾಡಿ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ವೀರಣ್ಣ ಯಾರಿ ಮತ್ತು ಮುಖಂಡ ಸುಭಾಷ್ ವರ್ಮಾ ಅವರು ಕಲಬುರಗಿ ನಗರದ ಪ್ರವಾಸಿ ಮಂದಿರದಲ್ಲಿ ವಾಡಿ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಚರ್ಚಿಸಿ ಕೈಗೊಳ್ಳುಬೇಕಾದ ಕಾಮಗಾರಿಗಳ ಪಟ್ಟಿ ಸಲ್ಲಿಸಿ, ವಾಡಿ ಪಟ್ಟಣವು ತನ್ನದೆಯಾದ ಇತಿಹಾಸ ಹೊಂದಿದೆ, ಪುರಾತನ ರೈಲ್ವೆ ನಿಲ್ದಾಣದಲ್ಲಿ ಇದು ಒಂದಾಗಿದೆ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಲ್ಲಿ ಭೇಟಿ ಕೊಟ್ಟಿದ್ದಾರೆ ಎಂದು ವಿವರಿಸಿದರು.
ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು
ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ನಲ್ಲಿ ಈ ರೈಲ್ವೆ ನಿಲ್ದಾಣದ ಕಾಮಗಾರಿ ಕೈಗೆತ್ತಿಕೊಂಡಿದ್ದು ತುಂಬಾ ಖುಷಿಯಾಗಿದೆ ಅದಕ್ಕೆ ತಮ್ಮ ಸಹಕಾರ ವಿರುವುದರಿಂದ ಇದು ಸಾಧ್ಯವಾಗಿದೆ. ಆದರೆ ಈ ನಿಲ್ದಾಣ ಅನೇಕ ಸಮಸ್ಯೆಗಳ ತಾಣವಾಗಿದೆ, ಕಾಮಗಾರಿ ವಿಳಂಬದ ಜೊತೆಗೆ ಕಳಪೆಯಾಗುತ್ತಿರುವುದು ಬೇಸರ ಮೂಡಿಸಿದೆ ಇದರ ಬಗ್ಗೆ ತಾವು ಹೆಚ್ಚಿನ ಗಮನಹರಿಸಿ, ಸಮಸ್ಯೆಗಳ ಪಟ್ಟಿ ನೀಡುತ್ತಿದ್ದು, ಅವುಗಳನ್ನು ಪರಿಹರಿಸಿ ಎಂದು ಕೇಳಿಕೊಂಡರು.
1) ವಾಡಿ ನಿಲ್ದಾಣವನ್ನು ಗುಂತಕಲ್ ಅಥವಾ ಸಿಕಿಂದ್ರಾಬಾದ್ ವಿಭಾಗಕ್ಕೆ ಅಳವಡಿಸಿ, ಸುಮಾರು ವರ್ಷಗಳಿಂದ ಸೊಲ್ಲಾಪುರ ವಿಭಾಗದಿಂದ್ದಲೂ ನಿಲ್ದಾಣದ ಅಭಿವೃದ್ಧಿ ಕುಂಠಿತಗೊಂಡಿದೆ.
2) ಪ್ಲೈ ಓವರ್ ಮತ್ತು ಬ್ರಿಡ್ಜ್ ಕಳಪೆ ಕಾಮಗಾರಿ ವಿರುದ್ಧ ಕ್ರಮಕೈಗೊಂಡು, ಗುಣಮಟ್ಟದೊಂದಿಗೆ ಆದಷ್ಟು ಬೇಗ ಪೂರ್ಣಗೊಳಿಸಿ.
3) ವಾಡಿ ಪಟ್ಟಣದ ಸುತ್ತಾ ರೈಲ್ವೆ ಗೇಟ್ ಆವರಿಸಿಕೊಂಡಿರುವುದರಿಂದ, ಜನರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು, ಎಸಿಸಿ ರೈಲ್ವೆ ಹಳಿ, ಲಕ್ಮಿಪುರವಾಡಿ ಹಳಿ ಹಾಗೂ ನಿಜಾಮ ಗೇಟ್ ಹಳಿಗಳಿಗೆ ಒಳಸೇತುವೆ ಅಥವಾ ಮೇಲ್ ಸೇತುವೆ ನಿರ್ಮಿಸಿ.
4) ಹನುಮಾನ ನಗರ, ವಿಜಯನಗರ, ಸೋಮ್ಲಾ ತಾಂಡಾ ಹಾಗೂ ಇಂದಿರಾ ನಗರಕ್ಕೆ ಹೊಗಬೇಕಾದರೆ ರೈಲ್ವೆ ಹಳಿ ದಾಟಿ ಹೋಗಬೇಕು, ಸುಮಾರು ಏಳು ಎಂಟು ಸಾವಿರ ಬಡ ಕುಟುಂಬ ವಾಸಿಸುವ ಬಡಾವಣೆಗಳಿವೆ.
ಇಲ್ಲಿನ ಜನರಿಗೆ ಸುರಕ್ಷಿತವಾಗಿ ಒಳಸೇತುವೆ ನಿರ್ಮಾಣ ಅತಿ ಅವಶ್ಯಕವಾಗಿದೆ.
5) ಕೊಲ್ಲಾಪುರ ರೈಲನ್ನು ವಾಡಿಯಿಂದ ಪ್ರಾರಂಭಿಸಿ, ತಲುಪುವಂತೆ ಮಾಡಿ, ಕಾಚಿಗುಡಾ ಪ್ಯಾಸೆಂಜರ್ ರೈಲು ಕಲಬುರಗಿಯಿಂದ ಪ್ರಾರಂಭಿಸಿ, ತಲುಪುವಂತೆ ಹಾಗೂ ವಂದೇ ಭಾರತ ರೈಲನ್ನು ವಾಡಿ ನಿಲ್ದಾಣದಲ್ಲಿ ನಿಲ್ಲಿಸು ಸೂಚಿಸಿ ಇದ್ದರಿಂದ ಬಹಳಷ್ಟು ಜನತೆಗೆ ತುಂಬಾ ಅನುಕೂಲ ಆಗುತ್ತದೆ.
6) ರೈಲ್ವೆ ನಿಲ್ದಾಣದ ಕೊಳಚೆ ನೀರು ವಾರ್ಡ್ ಸಂಖ್ಯೆ 20ರಲ್ಲಿ ಹರಿದು ಹೊಗುತ್ತಿರುವುದರಿಂದ, ಮಳೆಗಾಲದಲ್ಲಿ ಜನರು ಸಂಕಟಕ್ಕೆ ಸಿಲುಕುತ್ತಿದ್ದು ಇದನ್ನು ಪರಿಹರಿಸಿ.
7) ನಿಲ್ದಾಣದಲ್ಲಿ ಶೌಚಾಲಯ ಮತ್ತು ವೇಟಿಂಗ್ ಹಾಲನ್ನು ಸಮರ್ಪಕವಿಲ್ಲದೆ ಇರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
8) ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸೆಗೆ ವೈದ್ಯರೊಂದಿಗೆ
ಔಷಧ ಅಂಗಡಿ, ಸ್ವದೇಶಿ ಮಳಿಗೆ ಪ್ರಾರಂಭಕ್ಕೆ ಒತ್ತು ನೀಡಿ.
ಗುಟುಕಾ, ಧೂಮಪಾನ ಹಾಗೂ ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ.
9) ಜನರ ಮತ್ತು ಜಾನುವಾರುಗಳ ಸುರಕ್ಷಿತೆಗಾಗಿ ನಿಲ್ದಾಣದ 3 ಕಿ.ಮಿ ಸುತ್ತಲೂ ಬೇಲಿ ಹಾಕಿಸುವುದು.
10) ನಿಲ್ದಾಣದಲ್ಲಿ ಎಕ್ಸಲೇಟರ್ ಅಳವಡಿಸಿ, ತುರ್ತು ಸಂದರ್ಭದಲ್ಲಿ ಅಂಬುಲೇನ್ಸ್ ಸಂಚಾರಿಸುವಂತೆ ಮಾಡುವುದು.
11) ಹಳಿಗಳ ಮಧ್ಯ ಇರುವ ಸಾರ್ವಜನಿಕ ರುಧ್ರಭೂಮಿಗೆ ರಸ್ತೆ ಸಂಪರ್ಕ ಕಲ್ಪಿಸುವುದು
ಈ ಎಲ್ಲಾ ಸಮಸ್ಯೆಗಳೂ ಆದಷ್ಟೂ ಬೇಗ ಪರಿಹರಿಸಿ ಎಂದು ಹೇಳಿದರು.