ಸಂತಾನಹರಣ ಶಸ್ತ್ರಚಿಕಿತ್ಸೆ ನಂತರವೂ ಮಗುವಿಗೆ ಜನ್ಮ ನೀಡಿದ ಮಹಿಳೆ: ವೈದ್ಯನಿಗೆ ದಂಡ

ಆರೋಗ್ಯ ರಾಜ್ಯ

ಚಿತ್ರದುರ್ಗ: ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು 5 ವರ್ಷದ ನಂತರ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾರೆ. ಅವರಿಗೆ ಸರಿಯಾಗಿ ಆಪರೇಷನ್ ಮಾಡದ ವೈದ್ಯನಿಗೆ ಜಿಲ್ಲಾ ಗ್ರಾಹಕರ ಆಯೋಗ 55 ಸಾವಿರ ರೂ. ದಂಡ ವಿಧಿಸಿದೆ.

28 ಏಪ್ರಿಲ್ 2014ರಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ 2 ಮಕ್ಕಳ ತಾಯಿ ಲಕ್ಷ್ಮಮ್ಮ ಎನ್ನುವವರಿಗೆ ವೈದ್ಯ ಡಾ. ಕೆ ಶಿವಕುಮಾರ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದರು. ಶಸ್ತ್ರಚಿಕಿತ್ಸೆ ಮಾಡಿದ ಮೇಲೆ ಕೂಡ ಲಕ್ಷ್ಮಮ್ಮ ಗರ್ಭಿಣಿಯಾಗಿ 26 ಜನೆವರಿ 2020 ರಂದು ಮಗುವಿಗೆ ಜನ್ಮ ನೀಡಿದ್ದರು.

ವೈದ್ಯರು ಶಸ್ತ್ರಚಿಕಿತ್ಸೆ ಸರಿಯಾಗಿ ಮಾಡಿಲ್ಲ, ಹೀಗಾಗಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡುವಂತಾಯಿತು, ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು 17 ಫೆಬ್ರವರಿ 2021ರಂದು ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.

ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷೆ ಎನ್ ಕುಮಾರಿ ಮೀನಾ, ವೈದ್ಯರ ಸೇವಾ ನಿರ್ಲಕ್ಷದಿಂದ ಶಸ್ತ್ರಚಿಕಿತ್ಸೆ ವಿಫಲವಾಗಿದೆ.

ಇದೆ ಡಿಸೆಂಬರ್ 5 ರಂದು ವಿಚಾರಣೆಯಲ್ಲಿ ಮಹಿಳೆ ಅನುಭವಿಸಿದ ಹಿಂಸೆಗೆ 30 ಸಾವಿರ ರೂ, ದೂರಿನ ಖರ್ಚು 25 ಸಾವಿರ ರೂ. ಸೇರಿ ಒಟ್ಟು 55 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು.

Leave a Reply

Your email address will not be published. Required fields are marked *