ಸುದ್ದಿ ಸಂಗ್ರಹ ಶಹಾಬಾದ
ಹೆಣ್ಣು ಮಕ್ಕಳನ್ನು ಉಳಿಸಿ, ಓದಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆ ಸಾರ್ಥಕವಾಗಿದೆ ಎಂದು ಹೈ.ಕ ಶಿಕ್ಷಣ ಸಂಸ್ಥೆಯ ಸಂಯೋಜಕ ಹಾಗೂ ಆಡಳಿತ ಮಂಡಳಿಯ ಸದಸ್ಯ ಅನಿಲಕುಮಾರ ಎಸ್ ಮರಗೋಳ ಹೇಳಿದರು.
ನಗರದ ಹೈ.ಕ.ಶಿ ಸಂಸ್ಥೆಯ ಎಸ್.ಎಸ್ ಮರಗೋಳ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಾವುದೇ ದುಶ್ಚಟಕ್ಕೊಳಗಾಗದೆ ತಮ್ಮ ಗುರಿಯತ್ತ ಸಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಕೆ.ಬಿ ಬಿಲ್ಲವ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಗುರಿ ಮುಟ್ಟಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪೊಲೀಸ ಅಧಿಕಾರಿ ಎಸ್.ಆರ್ ನಾಯಕ್, ಹೈ.ಕ ಶಿಕ್ಷಣ ಸಂಸ್ಥೆಯ ಸಂಯೋಜಕ ಹಾಗೂ ಆಡಳಿತ ಮಂಡಳಿಯ ಸದಸ್ಯ ನಾಗಣ್ಣ ಗಂಟಿ, ಪ್ರಮುಖರಾದ ಸುಭಾಷ್ ಇಂಗಿನಶೆಟ್ಟಿ, ಮಲ್ಲಿಕಾರ್ಜುನ ಇಂಗಳೇಶ್ವರ, ರಾಮಣ್ಣ ಇಬ್ರಾಹಿಂಪೂರ, ಡಾ. ಚಂದ್ರಕಾಂತ, ವೇದಿಕೆ ಮೇಲೆ ಉಪಸ್ಥಿತರಿದ್ದರು.
ರಾಮಣ್ಣ ಇಬ್ರಾಹಿಂಪುರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಗಮೇಶ್ ಡೆಂಗಿ, ಕುಮಾರಿ ಮಮತಾ ರಾಜಪುರ್, ಸಿದ್ದರಾಮಪ್ಪ ಭಮ್ಮಶಟ್ಟಿ, ಶರಣಕುಮಾರ ಸಂಗಾಣಿ, ರೇಖಾ ಪಾಟೀಲ ಸೇರಿದಂತೆ ಪದವಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
ಕಾರ್ಯಕ್ರಮವನ್ನು ಪ್ರವೀಣಕುಮಾರ ಲಿಂಗಶೆಟ್ಟಿ ಪ್ರಾರ್ಥಿಸಿದರು, ಶರಣಮ್ಮ ಕೊಳ್ಳಿ, ಶೃತಿ ಪಾಟೀಲ ನಿರೂಪಿಸಿದರು, ಪಾರ್ವತಿ.ಬಿ ಸ್ವಾಗತಿಸಿದರು ಮತ್ತು ನಾಗರತ್ನ ಇಂಗಿನಶೆಟ್ಟಿ ವಂದಿಸಿದರು.