ಯಲ್ಲಾಲಿಂಗ ಮಹಾರಾಜರ 39ನೇ ಪುಣ್ಯಾರಾಧನೆ ನಾಳೆ

ಗ್ರಾಮೀಣ

ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದ ಸಮಸ್ತ ಸದ್ಭಕ್ತ ಮಂಡಳಿಯಿಂದ ಫೆ.4 ಮತ್ತು 5 ರಂದು ಮುಗಳಖೋಡದ ಲಿಂ.ಯಲ್ಲಾಲಿಂಗ ಮಹಾರಾಜರ 39ನೇ ಪುಣ್ಯಾರಾಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಾರಾಯಣ ಹಡಪದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುಣ್ಯಾರಾಧನೆ ಕಾರ್ಯಕ್ರಮದ ನಿಮಿತ್ಯ ವಿಶೇಷ ಪೂಜೆ, ಆರಾಧನೆ ನಡೆಯಲಿದೆ‌, ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ.

ವಿಶೇಷ ಭಜನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮುಗಳಖೋಡದ ಅಪ್ಪಾಜಿ ಸಂಗೀತ ಬಳಗದ ತಂಡದಿಂದ ಭಜನಾ ಕಾರ್ಯಕ್ರಮ ನಡೆಸಲಿದೆ. ಖ್ಯಾತ ಗಾಯಕ ಅಶೋಕಕುಮಾರ ಮನಗೋಳಿ, ತಬಲಾ ವಾದಕ ಆನಂದ, ಡೋಲಕ್ ವಾದಕ ನೂರುದ್ದಿನ್ ಬೈಲಹೊಂಗಲ, ಪ್ಯಾಡ್ ವಾದಕ ವಲಿ ಬೈಲಹೊಂಗಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಎರಡು ದಿನ ನಡೆಯುವ ವಿಶೇಷ ಭಜನಾ ಕಾರ್ಯಕ್ರಮದಲ್ಲಿ ಲಿಂ.ಯಲ್ಲಾಲಿಂಗ ಮಹಾರಾಜರ ಭಕ್ತರು, ಸಂಗೀತ ಪ್ರಿಯರು, ಭಜನಾ ಹಾಡುಗಾರಿಕೆ ಆಸಕ್ತರು ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *