ಕಲಬುರಗಿ: ವಿದ್ಯಾನಗರದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಕಂಪನಿಯೋ ಹಾಗೂ ವಿದ್ಯಾನಗರ ವೆಲ್‌ಫೆರ್ ಸೊಸೈಟಿಯ ಸಹಯೋಗದಲ್ಲಿ ಜ. 28 ರಂದು ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ತಿಳಿಸಿದ್ದಾರೆ.
ಜ.28 ರಂದು ಬೆಳಗ್ಗೆ 10 ಗಂಟೆಗೆ ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರ ಜರುಗಲಿದೆ.
ಕಾರ್ಯಕ್ರಮವನ್ನು ನಿವೃತ್ತ ಕೃಷಿ ಅಧಿಕಾರಿ ಬಸವರಾಜ ಎನ್ ಪುಣ್ಯಶೆಟ್ಟಿ ಉದ್ಘಾಟಿಸಲಿದ್ದಾರೆ.
ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಉಮೇಶ ಶೆಟ್ಟಿ, ಗುರುಲಿಂಗಯ್ಯ ಮಠಪತಿ, ಕಂಪನಿಯೋ ಕಂಪನಿಯ ಅನುಭವ ತಜ್ಞ ಕೌಶಿಕ ಹಾಗೂ ನಾಗೇಂದ್ರ ಉಪಸ್ಥಿತರಿರುವರು.
ಜ.28 ರಂದು ಫೆ.9 ರವರೆಗೆ ಪ್ರತಿನಿತ್ಯ ಬೆಳಗ್ಗೆ 9 ರಿಂದ ಸಾಯಂಕಾಲ 5 ಗಂಟೆಯವರೆಗೆ ಶಿಬಿರ ಜರುಗುವದು.
ಕಂಪನಿಯೋ ಅನುಭವ ತಜ್ಞ ಕೌಶಿಕ ಹಾಗೂ ನಾಗೇಂದ್ರ ಇವರು ಶಿಬಿರ ನಡೆಸಲಿದ್ದಾರೆ.
ರಕ್ತದ ಪರಿಚಲನೆ ಮತ್ತು ನರಗಳ ಯಾವುದೆ ಸರಳ ಹಾಗೂ ದೀರ್ಘಕಾಲಿನ ಸಮಸ್ಯೆಗಳನ್ನು ಔಷಧ ರಹಿತವಾಗಿ ಅಡ್ಡ ಪರಿಣಾಮವಿಲ್ಲದೆ ವೈದ್ಯಕೀಯ ಪ್ರಮಾಣಿತವಾಗಿರುವ ಈ ಥೆರಪಿಯಿಂದ ನಿವಾರಿಸಬಹುದಾಗಿದೆ.
30 ನಿಮಿಷ ಈ ಥೆರೆಪಿಯಿಂದ ನಮ್ಮ ದೆಹದಲ್ಲಿ ೫ ಕಿ.ಮೀ ವಾಕಿಂಗ್ ಮಾಡಿದಷ್ಟು ರಕ್ತ ಸಂಚಾರ ಮಾಡಲು ಸಹಕಾರಿಯಾಗುತ್ತದೆ. ಅಲ್ಲದೆ ಅಧಿಕ ರಕ್ತದೊತ್ತಡ, ಮಧುಮೇಹ, ಸಂಧಿವಾತ, ವೆರಿಕೋಸ್, ಸ್ನಾಯು ಸೆಳೆತ,ಪರ‍್ಶ್ಚವಾಯು, ಬೆನ್ನು ನೋವು, ಬೊಜ್ಜು ನಿವಾರಣೆ ಈ ರೀತಿ ಅನೇಕ ಸಮಸ್ಯೆಗಳಿಗೆ ಫೂಟ್ ಪಲ್ಸ್ ಥೆರಪಿಯಿಂದ ಗುಣಮುಖವಾಗಲು ಸಹಕಾರಿಯಾಗುತ್ತದೆ. ಹಾಗಾಗಿ ಉಚಿತವಾಗಿ ನಡೆಯುತ್ತಿರವ ಈ ಶಿಬಿರದಲ್ಲಿ ಭಾಗವಹಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ.