ಚಿತ್ತಾಪುರ: ಕೋಲಿ ಸಮಾಜದ ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಸಂಘಟನೆಗೆ ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ಕೋಲಿ, ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ಭೇಟಿಯಾದ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾಜದ ಜನರಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕವಾಗಿ ಅರಿವು, ಜಾಗ್ರತೆ ಮೂಡಿಸುವ ಕೆಲಸ ಮಾಡಬೇಕು. ಸಮಾಜದ ಮೇಲೆ ನಡೆಯುವ ದಬ್ಬಾಳಿಕೆ, ದೌರ್ಜನ್ಯ, ಅನ್ಯಾಯವನ್ನು ತಡೆಗಟ್ಟಲು ಪ್ರಬಲ ಹೋರಾಟ ರೂಪಿಸಬೇಕು. ಸಮಾಜದ ಜನರಿಗೆ ನ್ಯಾಯ ಕೊಡಿಸಲು ಚಳುವಳಿ ರೂಪಿಸಿ ಧ್ವನಿ ಎತ್ತುವ ಕೆಲಸ ಮಾಡಬೇಕು. ಸಮಾಜದಿಂದ ನಡೆಯುವ ಸಭೆ, ಸಮಾರಂಭ, ಹೋರಾಟಗಳಿಗೆ ಸದಾ ಬೆಂಬಲಕ್ಕೆ ನಿಲ್ಲುತ್ತೆವೆ ಎಂದು ನೂತನ ಅಧ್ಯಕ್ಷರಿಗೆ ಸಲಹೆ ನೀಡಿದರು.
ಸಮಾಜದ ಕುಲಗುರು ಅಂಬಿಗರ ಚೌಡಯ್ಯನವರ ವಚನಗಳು ಪ್ರತಿಯೊಂದು ಮನೆಗೆ, ಮನಕ್ಕೂ ತಲುಪಿಸುವ ಕಾರ್ಯಕ್ರಮಗಳು ಆಯೋಜಿಸಬೇಕು. ಸಂಘಟನೆಯಲ್ಲಿಯೆ ಸಮಾಜದ ಶಕ್ತಿ ಅಡಗಿದೆ. ಸಂಘಟನೆಯಿಂದ ಮಾತ್ರ ಸಮಾಜಕ್ಕೆ ನ್ಯಾಯ ಕೊಡಿಸಬಹದು ಎಂದರು.
ಕೋಲಿ ಸಮಾಜದ ನೂತನ ಅಧ್ಯಕ್ಷ ನಿಂಗಣ್ಣಾ ಹೆಗಲೇರಿ ಹಾಗೂ ನಗರ ಘಟಕದ ಅಧ್ಯಕ್ಷ ಪ್ರಭು ಹಲಕರ್ಟಿ ಅವರನ್ನು ಕರ್ನಾಟಕ ರಾಜ್ಯ ಕೋಲಿ, ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಶನಿವಾರ ಬೆಂಗಳೂರಿನಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣಾ ಹೆಗಲೇರಿ ಮತ್ತು ನಗರ ಘಟಕದ ಅಧ್ಯಕ್ಷ ಪ್ರಭು ಹಲಕರ್ಟಿ ಅವರು ಕರ್ನಾಟಕ ರಾಜ್ಯ ಕೋಲಿ, ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪಾ ಜಮಾದಾರ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ರಾಮಲಿಂಗ ಬಾನರ, ಬಸವರಾಜ ಚಿನ್ನಮಳ್ಳಿ, ಹಣಮಂತ ಸಂಕನೂರು, ಪಿಂಟು ಜಮಾದಾರ, ಲಕ್ಷ್ಮಿಕಾಂತ ಸಾಲಿ, ಭೀಮಣ್ಣ ಹೋತಿನಮಡಿ, ನಾಗಯ್ಯಾ ಗುತ್ತೆದಾರ, ಹಣಮಂತ ಕಟ್ಟಿ, ಕರಣಕುಮಾರ ಅಲ್ಲೂರ್, ಸುರೇಶ ಗುತ್ತೆದಾರ್, ರಾಜೇಶ ಹೋಳಿಕಟ್ಟಿ, ಅಶೋಕ ಬಾನರ, ಮಲ್ಲಿಕಾರ್ಜುನ ಹೊನ್ನಪೂರ, ಶಿವಶರಣ ಹೊನ್ನಪೂರ ಇದ್ದರು.