ಕಲಬುರಗಿ: ಸಾಲದ ಹಣ ತರೋಣವೆಂದು ನಂಬಿಸಿ ತಂದೆಯನ್ನು ಸ್ಕೂಟರ್‌ನಲ್ಲಿ ಕರೆದೊಯ್ದ ಪುತ್ರ ಮಾರ್ಗ ಮಧ್ಯದಲ್ಲಿ ಟ್ರ್ಯಾಕ್ಟರ್‌ನಿಂದ ಎರಡು ಬಾರಿ ಡಿಕ್ಕಿ ಹೊಡೆಸಿ ಆತನನ್ನು ಕೊಲ್ಲಿಸಿ ವಿಮೆಯ ಹಣದಲಿ, ಸಾಲ ತೀರಿಸಲು ಹವಣಿಸಿದ್ದವನು ಹಾಗೂ ಕೃತ್ಯಕ್ಕೆ ಕೈಜೋಡಿಸಿದ್ದ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.
ಮಾಡಬೂಳ ಪೊಲೀಸ್ ಠಾಣೆಯಲ್ಲಿ ಜುಲೈ 2024ರಲ್ಲಿ ದಾಖಲಾಗಿದ್ದ ಅಪಘಾತ ಪ್ರಕರಣವನ್ನು ಭೇದಿಸಿದ್ದ ಪೊಲೀಸರಿಂದ ಕೊಲೆಯಾದ ಮಾಳಿಂಗರಾವ ಅವರ ಮಗ ಸತೀಶನ ಭೀಭತ್ಸ ಕೃತ್ಯ ಬಯಲಾಗಿದೆ. ಆರೋಪಿಗಳು ರೂಪಿಸಿದ್ದ ಕೊಲೆಯ ಸಂಚು ಅದನ್ನು ಕಾರ್ಯರೂಪಕ್ಕೆ ತಂದಿದ್ದು, ಕೃತ್ಯದ ಬಳಿಕ ತಲೆ ಮರೆಸಿಕೊಳ್ಳಲು ಹೂಡಿದ್ದ ತಂತ್ರಗಳು ಸಿನಿಮಿಯ ಶೈಲಿಯಲ್ಲಿದ್ದವು.
ಸಂಕೀರ್ಣವಾದ ಈ ಪ್ರಕರಣವನ್ನು ಏಳು ತಿಂಗಳು ತನಿಖೆ ನಡೆಸಿ ಭೇದಿಸಿದ ಪೊಲೀಸರು ಆರೋಪಿಗಳಾದ ಸತೀಶ, ಅರುಣಕುಮಾರ, ರಾಕೇಶ ಮತ್ತು ಯುವರಾಜನನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 27,700 ನಗದು ಹಾಗೂ ಟ್ರ್ಯಾಕ್ಟರ್ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡೂರು ಶ್ರೀನಿವಾಸಲು, ಸಾಲದ ಹೊರೆಯಿಂದ ಸತೀಶ ಬಳಲುತ್ತಿದ್ದನು. ಸ್ನೇಹಿತನಾದ ಅರುಣಕುಮಾರ ತಂದೆಯ ಹೆಸರಿಗೆ ವಿಮೆ ಮಾಡಿಸಿ, ನಂತರ ಆತನನ್ನು ಸಾಯಿಸಿದರೆ ಲಕ್ಷಾಂತರ ರೂಪಾಯಿ ಬರುತ್ತದೆ. ಆ ಹಣದಿಂದ ಸಾಲವೆಲ್ಲ ತೀರಿಸಬಹು ಎಂದು ಪುಸಲಾಯಿಸಿ ಆತನ ಮನವೊಲಿಸಿದನು. 2024ರ ಜನವರಿ ಹಾಗೂ ಮಾರ್ಚ್ ತಿಂಗಳಲ್ಲಿ ಎರಡು ವಿಮೆಗಳನ್ನು ತಾನೇ ನಿಂತು ಮಾಡಿಸಿದ್ದ, ಬಳಿಕ ಕೊಲೆಯ ಸಂಚು ಸಹ ಆತನೆ ರೂಪಿಸಿದ್ದ ಎಂದರು.
ಅಪಘಾತದ ಶೈಲಿಯಲ್ಲಿ ಕೊಲೆ ಮಾಡಲು 7 ಲಕ್ಷಕ್ಕೆ ಬೇಡಿಕೆ ಇರಿಸಿದ್ದ ಅರುಣಕುಮಾರ, ಕೊನೆಗೆ 5 ಲಕ್ಷಕ್ಕೆ ಒಪ್ಪಿಕೊಂಡ. ತನ್ನದೆ ಟ್ರ್ಯಾಕ್ಟರ್‌ನಿಂದ ಡಿಕ್ಕಿ ಹೊಡೆಸುವುದಾಗಿ ಹೇಳಿ, ಇಬ್ಬರು ಚಾಲಕರಿಗೆ ತಲಾ 50 ಸಾವಿರ ನಿಗದಿ ಮಾಡಿದ್ದರು.
2024 ರ ಜುಲೈ 8ರ ಸಂಜೆ ಸಾಲ ತರುವುದಿದೆ ಎಂದ ಸತೀಶ ತಂದೆಯನ್ನು ಸ್ಕೂಟರ್‌ನಲ್ಲಿ ಬೆಣ್ಣೂರ(ಬಿ) ಗ್ರಾಮಕ್ಕೆ ಕರದೊಯ್ಯುತ್ತಿದ್ದ ಮಾರ್ಗ ಮಧ್ಯದಲ್ಲಿ ಮೂತ್ರ ವಿಸರ್ಜನೆಗೆಂದು ಆತ ಕೆಳಗೆ ಇಳಿದಾಗ, ರಸ್ತೆಯಲ್ಲಿ ನಿಂತಿದ್ದ ಕಾಳಿಂಗರಾವ ಎದುರಿನಿಂದ ಟ್ರ್ಯಾಕ್ಟರ್‌ನಲ್ಲಿ ಬಂದ ರಾಕೇಶ ಮತ್ತು ಯುವರಾಜ ಡಿಕ್ಕಿ ಹೊಡೆದು ಸಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕೃತ್ಯದ ರೂವಾರಿ ಓದಿದ್ದು 7 ನೇ ಕ್ಲಾಸ್
ಸತೀಶ ಮನವೊಲಿಸಿ ಕೃತ್ಯಕ್ಕೆ ಸಂಚು ರೂಪಿಸಿ , 25 ಲಕ್ಷ ಮೌಲ್ಯದ ವಿಮೆಯನ್ನು ಒಂದೇ ದಿನದಲ್ಲಿ ಮಾಡಿಸಿ , ಕೊಲೆ ನಡೆಯುವ ಸ್ಥಳ , ತನ್ನದೇ ಟ್ರ್ಯಾಕ್ಟರ್‌ನಿಂದ ಡಿಕ್ಕಿ ಹೊಡೆಸಲು , ವಿಮೆಯಿಂದ ಬಂದ ಹಣ ಪಡೆದು ಸತೀಶನ ಆಸ್ತಿಯನ್ನೂ ಮಾರಿಸಿದ್ದ ಅರುಣಕುಮಾರ ಓದಿದ್ದು 7 ನೇ ತರಗತಿ ‘ ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ತಿಳಿಸಿದರು .
ಸುಮಾರು ಮೂರು ವರ್ಷ ದುಬೈನಲ್ಲಿದ್ದು ಬಂದಿದ್ದ ಅರುಣುಕುಮಾರ ಇಡೀ ಕೃತ್ಯದ ಸಂಚು ರೂಪಿಸಿದ್ದ . ಅಪಘಾತವೆಂದು ಬಿಂಬಿಸಿದ್ದ ಸ್ಥಳದಲ್ಲಿ ರಕ್ತದ ಕಲೆಗಳು , ಮೃತ ದೇಹ , ಚಪ್ಪಲಿ ಬೇರೆ ಬೇರೆ ಕಡೆ ಬಿದ್ದಿದ್ದವು . ಸಾಮಾನ್ಯ ಅಪಘಾತಕ್ಕಿಂತ ಭಿನ್ನವಾಗಿ ಕಂಡಿತ್ತು . ಟ್ರ್ಯಾಕ್ಟರ್ ಬರುತ್ತಿದ್ದ ರಸ್ತೆ ಏರು ಮುಖವಾಗಿತ್ತು . ವೇಗವಾಗಿ ಬಂದು ಡಿಕ್ಕಿ ಹೊಡೆಯುವ ಸಾಧ್ಯತೆ ಕಡಿಮೆ ಇತ್ತು . ಹೀಗಾಗಿ , ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕೂಲಂಕಷವಾಗಿ ತನಿಖೆ ಮಾಡಿದ್ದೆವು ‘ ಎಂದರು .
ಟ್ರ್ಯಾಕ್ಟರ್‌ನಿಂದ ಮೊದಲ ಬಾರಿ ಡಿಕ್ಕಿ ಹೊಡೆದಾಗ ಕಾಳಿಂಗರಾವ ಅವರ ಜೀವ ಹೋಗಿರಲಿಲ್ಲ . ಮತ್ತೊಂದು ಬಾರಿ ಬಂದು ಡಿಕ್ಕಿ ಹೊಡೆದು ಸಾಯಿಸಿದ್ದಾರೆ . ಆತನ ಮಗ ಸತೀಶ ರಸ್ತೆಯ ಇನ್ನೊಂದು ತುದಿಯಲ್ಲಿ ನಿಂತಿದ್ದ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ ‘ ಎಂದು ಮಾಹಿತಿ ನೀಡಿದರು .
ನಿವಾಸಲು , ಡಿವೈಎಸ್ಪಿ ಶಂಕರಗೌಡ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು ಮಾಡಿದ್ದ . 2024 ರ ಜುಲೈ 8 ರ ಸಂಜೆ ಸಾಲ ತರುವುದಿದೆ ಎಂದ ಸತೀಶ , ತಂದೆಯನ್ನು ಸ್ಕೂಟರ್‌ನಲ್ಲಿ ಬೆಣ್ಣೂರ ( ಬಿ ) ಗ್ರಾಮಕ್ಕೆ ಕರೆದೊಯ್ಯುತ್ತಿದ್ದ . ಮಾರ್ಗ ಮಧ್ಯದಲ್ಲಿ ಮೂತ್ರ ವಿಸರ್ಜನೆಗೆಂದು ಆತ ಕೆಳಗೆ ಇಳಿದಾಗ , ರಸ್ತೆಯಲ್ಲಿ ನಿಂತಿದ್ದ ಕಾಳಿಂಗರಾವಗೆ ಎದುರಿನಿಂದ ಟ್ರ್ಯಾಕ್ಟರ್‌ನಲ್ಲಿ ಬಂದ ರಾಕೇಶ ಮತ್ತು ಯುವರಾಜ ಡಿಕ್ಕಿ ಹೊಡೆದು ಸಾಯಿಸಿದ್ದಾರೆ ‘ ಎಂದು ಮಾಹಿತಿ ನೀಡಿದರು .
ಎಂಬ ಇತ್ಯಾದಿ ಬಗ್ಗೆ ದೂರುದಾರ ಸತೀಶ ಸರಿಯಾಗಿ ಮಾಹಿತಿ ನೀಡಲಿಲ್ಲ . ಆದರ್ಶ ನಗರದಲ್ಲಿದ್ದ ಹೋಟೆಲ್ , ಮನೆಯನ್ನು ತಿಳಿಸಿದರು .
ತನಿಖಾ ತಂಡಕ್ಕೆ ಪ್ರಶಂಸೆ ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಕಾಳಗಿ ಸಿಪಿಐ ಜಗದೇವಪ್ಪ ಪಾಳಾ , ಪಿಎಸ್‌ಐಗಳಾದ ಚೇತನ , ಶೀಲಾದೇವಿ , ಸಿಬ್ಬಂದಿ ಆನಂದ , ವೀರಶೆಟ್ಟಿ , ಪರಶುರಾಮ , ಪ್ರೇಮಕುಮಾರ , ನವಾಜ್ , ಕಮಲಾಕರ್ , ಮಾಳಗೊಂಡ , ರಮೇಶ , ಪ್ರಶಾಂತ , ಶಾಂತಮಲ್ಲಪ್ಪ , ಗಫರ್ , ಜಾವೇದ್ ಸೇರಿದಂತೆ ಹಲವರನ್ನು ಅಷ್ಟೂರು ಶ್ರೀನಿವಾಸಲು ಅವರು ಪ್ರಶಂಸಿಸಿದರು .
ಮಾರಿ ತೆಲಂಗಾಣದ ಜಹಿರಾಬಾದ್ ಜಿಲ್ಲೆಯ ಗ್ರಾಮವೊಂದರಲ್ಲಿ
ಸತೀಶ್ ವಾಸವಾಗಿದ್ದನು . ಶ್ರೀರಾಮ ಇನ್ಸೂರೆನ್ಸ್‌ನಿಂದ ಕಾಳಿಂಗರಾವ ಪತ್ನಿ ಖಾತೆಗೆ ಬಂದಿದ್ದ 35 ಲಕ್ಷ ವಿಮೆಯ ಹಣದ ಪೈಕಿ , 33 ಲಕ್ಷ ಅರುಣಕುಮಾರಗೆ ಫೋನ್ ಪೇ ಮಾಡಲಾಗಿತ್ತು . ಈ ಎಲ್ಲ ಬೆಳವಣಿಗೆಗಳಿಂದಾಗಿ ಸತೀಶನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ
ಅಪಘಾತ ಪ್ರಕರಣವೆಂದು ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೊಲೆಯ ಶಂಕೆ ವ್ಯಕ್ತವಾಯಿತು . ಡಿಕ್ಕಿ ಹೊಡೆದ ವಾಹನ ಯಾವುದು ? ಯಾರಿಂದ ಹಣ ತರಲು ಹೊರಟಿದ್ದು ?
ಮಾಡಿದ್ದು ಬಹಿರಂಗವಾಯಿತು ‘ ಎಂದು