ಕಲಬುರಗಿ: ಆಧ್ಯಾತ್ಮದ ಬಗ್ಗೆ ಆಳವಾದ ಅಧ್ಯಯನ ಚಿಂತನೆ ನಡೆಸಿರುವ ಶ್ರೇಷ್ಠ ಅನುಭವಿ ಶ್ರೀಗಳು ಅತ್ಯಂತ ಸರಳ ಸಜ್ಜನಿಕೆಯ ಸಹಕಾರ ಮೂರ್ತಿಯ ಸಿದ್ದೇಶ್ವರ ಶ್ರೀಗಳು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹೇಳಿದರು.
ನಗರದ ಬಡೆಪೂರ ಕಾಲೋನಿಯ ಎಸ್‌ಬಿಐ ಗ್ರಾಹಕ ಸೇವಾ ಕೇಂದ್ರದಲ್ಲಿ ಸಿದ್ದೇಶ್ವರ ಶ್ರೀಗಳ ದ್ವಿತೀಯ ಪುಣ್ಯಸ್ಮರಣೆ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನದು, ತನ್ನದೆಂಬ ಮಮಕಾರ ತೊರಿದ ವಿಜಾಪೂರದ ಸಿದ್ದೇಶ್ವರ ಶ್ರೀಗಳು ಸಂತರಷ್ಟೇ ಅಲ್ಲದೇ ಜ್ಞಾನೋಪಸಾಕರು ಹೀಗಾಗಿ ಇವರಿಗೆ ಅನೇಕ ವಿಶ್ವ ವಿದ್ಯಾಲಯಗಳು ಅಲ್ಲದೇ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಲು ಮುಂದಾದರೂ ನಾನು ಸರಳ ಸ್ವಭಾವದ ವ್ಯಕ್ತಿ ಎಂಬ ಏಕೈಕ ಉದ್ದೇಶದಿಂದ ಅದನ್ನು ಗೌರವಪೂರ್ವಕವಾಗಿ ನಿರಾಕರಿಸಿದ ಏಕೈಕ ಸಂತರು ಇವರು ಎಂದರು.
ವಕೀಲ ವೆಂಕಟಜೀವನ ಯಾಕಾಪುರ ಮಾತನಾಡಿ, ಜೇಬಿಲ್ಲದ ಅಂಗಿಯ ರಾಷ್ಟ್ರೀಯ ಸಂತ, ಎರಡನೇ ವಿವೇಕಾನಂದ ಹೀಗೆ ಹತ್ತು ಹಲವು ನಾಮಗಳಿಂದ ಜಗತ್ಪ್ರಸಿದ್ಧಿ ಪಡೆದ ಶ್ರೀಗಳು ಇವರು ಎಂದು ಶ್ರೀಗಳನ್ನು ನೆನೆದರು.
ಬಡೆಪೂರ ಕಾಲೋನಿಯ ಎಸ್‌ಬಿಐ ವ್ಯವಸ್ಥಾಪಕ ಶ್ರೀಕಾಂತ ಅವರು ಸಿದ್ದೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.
ಬಡೆಪೂರ ಕಾಲೋನಿಯ ಎಸ್‌ಬಿಐ ಗ್ರಾಹಕ ಸೇವಾ ಕೇಂದ್ರದ ವ್ಯವಸ್ಥಾಪಕ ಅಮರೇಶ ಮಂದೋಲೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೊನ್ನಪ್ಪ ಸಿನ್ನೂರ, ಸಾಹೇಬಗೌಡ ನರೋಣಿ, ಕೈಲಾಸ ರೆಡ್ಡಿ, ಪ್ರಕಾಶ ಹೂಗಾರ, ಶಿವಾನಂದ, ರಾಮಲಿಂಗಪ್ಪಾ ಸೇರಿದಂತೆ ಅನೇಕರು ಇದ್ದರು.