BPL-APL ಕಾರ್ಡ್​ ತಿದ್ದುಪಡಿಗೆ ಮತ್ತೆ ಅವಕಾಶ: ಹೆಸರು ಸೇರಿಸಲು ಈ ದಾಖಲೆಗಳು ಕಡ್ಡಾಯ

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು
ರಾಜ್ಯದಲ್ಲಿ ರೇಷನ್​ ಕಾರ್ಡ್ ಇ-ಕೆವೈಸಿ ಕೆಲಸ ಭರದಿಂದ ಸಾಗಿದೆ. ನ್ಯಾಯಬೆಲೆ ಅಂಗಡಿ ಮುಂದೆ ಜನರು ಕ್ಯೂ ನಿಂತು ಇ-ಕೆವೈಸಿ ಮಾಡಿಸ್ತಿದ್ದಾರೆ. ಇದರ ನಡುವೆಯೇ ಆಹಾರ ಇಲಾಖೆ ಮತ್ತೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿದೆ.

ತಿದ್ದುಪಡಿಗೆ ಏನೆಲ್ಲಾ ಮಾಡಬೇಕು ? ಯಾವೆಲ್ಲಾ ದಾಖಲೆಗಳು ನೀಡಬೇಕು ಎನ್ನುವ ಬಗ್ಗೆ ತಿಳಿದುಕೊಳ್ಳಿ.

ರೇಷನ್ ಕಾರ್ಡ್ ತಿದ್ದುಪಡಿಗೆ ಮಾತ್ರ ಅವಕಾಶ
ರಾಜ್ಯ ಸರ್ಕಾರ ಗೃಹಜ್ಯೋತಿ, ಗೃಹಲಕ್ಷ್ಮಿ ಪರಿಷ್ಕರಣೆ ನಡುವೆಯೇ ರೇಷನ್ ಕಾರ್ಡ್​ ಇ-ಕೆವೈಸಿ ಕೆಲಸ ಮಾಡ್ತಿದೆ. ಇದೀಗ ರೇಷನ್ ಕಾರ್ಡ್‌ಗೆ ಸಂಬಂಧಿಸಿದ ತಿದ್ದುಪಡಿ ಕಾರ್ಯಗಳು ಆರಂಭಗೊಂಡಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕು ಅಂದರೆ ಈಗ ಮಾಡಿಸಬಹುದಾಗಿದೆ. ಸಮಯ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೂ ಇದೆ. ಆದರೆ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮಾತ್ರ ಇನ್ನೂ ಶುರುವಾಗಿಲ್ಲ.

ಏನೆಲ್ಲಾ ತಿದ್ದುಪಡಿ ಮಾಡಿಸಬಹುದು ?

  • ಹೆಸರು ತಿದ್ದುಪಡಿ
  • ಹೆಸರು ಸೇರ್ಪಡೆ
  • ಹೆಸರು ತೆಗೆದುಹಾಕುವಿಕೆ
  • ವಿಳಾಸ ಬದಲಾವಣೆ
  • ಫೋಟೋ ಬದಲಾವಣೆ

ತಿದ್ದುಪಡಿಗೆ ಬೇಕಾಗುವ ದಾಖಲೆಗಳು

  • ಎಲ್ಲಾ ಸದಸ್ಯರ ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಕುಟುಂಬದ ಫೋಟೋ
  • ವಿಳಾಸದ ದಾಖಲೆ (ವಿದ್ಯುತ್ ಬಿಲ್)
  • ಸದಸ್ಯರ ಜಾತಿ ಮತ್ತು ಆದಾಯ ಪತ್ರ
  • ಮಕ್ಕಳು ಹೆಸರು ಸೇರಿಸಲು ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರ

ಇ-ಕೆವೈಸಿ ಬಗ್ಗೆ ಮಹತ್ವದ ಮಾಹಿತಿ
ರಾಜ್ಯದಲ್ಲಿ ರೇಷನ್​ ಕಾರ್ಡ್​ದಾರರು ಇ-ಕೆವೈಸಿ ಮಾಡುವುದರಲ್ಲಿ ಫುಲ್ ಬ್ಯುಸಿ ಆಗಿದ್ದು, ನ್ಯಾಯಬೆಲೆ ಅಂಗಡಿಗಳ ಮುಂದೆ ಜನರು ಕ್ಯೂ ನಿಲ್ತಿದ್ದಾರೆ. ಆದರೆ ಕೆಲವರು ಮನೆಯಲ್ಲೆ ಕುಳಿತು ಆಪ್ ಮೂಲಕ ಇ-ಕೆವೈಸಿ ಮಾಡುತ್ತಿದ್ದಾರೆ. ಅಂತವರಿಗೆ ಆರೋಗ್ಯ ಇಲಾಖೆ ಇದೀಗ ಮಹತ್ವದ ಎಚ್ಚರಿಕೆ ನೀಡಿದೆ.

ಈ ಆಪ್​ನಲ್ಲಿ ಮಾಡುವ ಇ-ಕೆವೈಸಿ ಮಾನ್ಯವಲ್ಲ
ಕೇಂದ್ರ ಸರ್ಕಾರದ ‘ಮೇರಾ ರೇಷನ್‌’ ಮೊಬೈಲ್ ಆಪ್ ಮೂಲಕ ಮನೆಯಲ್ಲೆ ಕುಳಿತು ಮಾಡಲಾದ ಇ-ಕೆವೈಸಿ ರಾಜ್ಯದ ಆಹಾರ ಇಲಾಖೆಯ ಸರ್ವರ್‌ ನಲ್ಲಿ ಅಧಿಕೃತವಾಗಿ ಮಾನ್ಯವಾಗುವುದಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸ್ಪಷ್ಟಪಡಿಸಿದೆ. ಹೀಗಾಗಿ ‘ಮೇರಾ ರೇಷನ್‌’ ಮೊಬೈಲ್ ಆಪ್ ಬಳಸಿ ಕೆವೈಸಿ ಮಾಡುವ ಮುನ್ನ ಕೊಂಚ ಅಲರ್ಟ್ ಆಗಿರಬೇಕಿದೆ.

ಯೂಟ್ಯೂಬ್ ನೋಡಿ ಇ-ಕೆವೈಸಿ ಮಾಡ್ಬೇಡಿ
ನ್ಯಾಯಬೆಲೆ ಅಂಗಡಿಗಳಲ್ಲಿ ಸಾಲುಗಟ್ಟಿ ನಿಲ್ಲೋಕೆ ಕಷ್ಟವಾಗ್ತಿದೆ. ಸರ್ವರ್​ ಸಮಸ್ಯೆ ಹೆಚ್ಚಿದೆ ಅಂತ ಜನರು ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾ ವಿಡಿಯೋಗಳನ್ನು ನೋಡಿ ‘ಮೇರಾ ರೇಷನ್‌’ ಅಥವಾ ‘Mera eKYC’ ಆಪ್‌ ಗಳ ಮೂಲಕ ‘ಫೇಸ್ ಅಥೆಂಟಿಕೇಷನ್’ ಬಳಸಿ ಇ-ಕೆವೈಸಿ ಮಾಡುತ್ತಿದ್ದಾರೆ.

ಇದು ಕೇಂದ್ರ ಸರ್ಕಾರದ್ದಾಗಿದ್ದು, ಕರ್ನಾಟಕ ರಾಜ್ಯ ಆಹಾರ ಇಲಾಖೆಯ ಆಂತರಿಕ ಪೋರ್ಟಲ್‌ಗೆ (ahara.karnataka.gov.in) ಸಂಪರ್ಕ ಹೊಂದಿಲ್ಲ. ಇದರಿಂದಾಗಿ ಚೆಕ್ ಮಾಡಿದ ವೇಳೆ ಇ-ಕೆವೈಸಿ ಇನ್ನೂ ಸಂಪೂರ್ಣವಾಗಿಲ್ಲ ಎಂದೇ ತೋರಿಸುತ್ತಿದೆ. ಈ ರೀತಿ ಇಕೆವೈಸಿ ಮಾಡಿ ಯಾಮಾರಬೇಡಿ.

Leave a Reply

Your email address will not be published. Required fields are marked *