79ನೇ ಕಲ್ಯಾಣ ಕರ್ನಾಟಕ ಉತ್ಸವ: ಸೆ.16, 17ರಂದು ಸಂಗೀತ, ನೃತ್ಯದ ರಸದೌತಣ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಕಲ್ಯಾಣ ಕರ್ನಾಟಕ ಉತ್ಸವ-2026ರ ಅಂಗವಾಗಿ ಸೆಪ್ಟೆಂಬರ್ 16 ಮತ್ತು 17ರಂದು ಕಲಬುರಗಿ ನಗರದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ, ಸಂಗೀತ, ನೃತ್ಯ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕಲ್ಯಾಣ ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿ, ಪರಂಪರೆ ಮತ್ತು ಸ್ಥಳೀಯ ಪ್ರತಿಭೆಗಳನ್ನು ಜನರೊಂದಿಗೆ ಸಂಭ್ರಮಿಸುವ ಉದ್ದೇಶದಿಂದ ಕಲಬುರಗಿ ನಗರದ ವಿವಿಧ ವೇದಿಕೆಗಳಲ್ಲಿ ಎರಡು ದಿನಗಳ ಕಾಲ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

79ನೇ ಕಲ್ಯಾಣ ಕರ್ನಾಟಕ ಉತ್ಸವ ನಮ್ಮ ಭಾಗದ ಇತಿಹಾಸ, ಕಲೆ, ಸಂಸ್ಕೃತಿ, ಪರಂಪರೆ ಮತ್ತು ಪ್ರತಿಭೆಯನ್ನು ಒಟ್ಟಾಗಿ ಸಂಭ್ರಮಿಸುವ ಜನರ ಉತ್ಸವಾಗಿರಲಿದೆ. ಕಲಬುರಗಿ ನಗರದ ಹಾಗೂ ಜಿಲ್ಲೆಯ ಜನರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.

ಸೆಪ್ಟೆಂಬರ್ 16ರ ಕಾರ್ಯಕ್ರಮಗಳು
ಕಲಬುರಗಿ‌ ನಗರದ ಪಬ್ಲಿಕ್ ಗಾರ್ಡನ್‌ನಲ್ಲಿ ಸಂಜೆ 6.30ರಿಂದ ಸ್ಥಳೀಯ ಪ್ರತಿಭೆಗಳಿಂದ ಕಲಾ ಪ್ರದರ್ಶನ, ನಂತರ ಶಾಸ್ತ್ರೀಯ ನೃತ್ಯ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರಿಂದ‌ ‘ಸ್ಟ್ರೀಟ್ ಫೆಸ್ಟಿವಲ್’ ಗೆ ಚಾಲನೆ ನೀಡಲಾಗುತ್ತದೆ. ರಾತ್ರಿ 8.30 ರಿಂದ 10 ಗಂಟೆವರೆಗೆ ಸವಾರಿ‌ ಬ್ಯಾಂಡ್ ತಂಡ ಕಲಾ‌ ರಸಿಕರಿಗೆ ಸಂಗೀತ ಉಣಬಡಿಸಲಿದೆ.

ಅಪ್ಪನ ಕೆರೆಯಲ್ಲಿ ಸಂಜೆ 7 ರಿಂದ 8.30‌ರ ವರೆಗೆ ಭೈರವ್ ಮತ್ತು ತಂಡದಿಂದ ಇಂಡೋ-ಫ್ಯೂಷನ್ ವಾದ್ಯ ಪ್ರದರ್ಶನ ನಡೆಯಲಿದೆ. 8.30ಕ್ಕೆ ಮುಖ್ಯಮಂತ್ರಿಗಳಿಂದ ಕೆರೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ರಾತ್ರಿ 9 ರಿಂದ 9.30ರ ವರೆಗೆ 3ಡಿ‌‌ ಲೈಟ್ ಶೋ ಮತ್ತು ಡ್ರೋನ್‌ ಶೋ ಸಹ ನಡೆಯಲಿದೆ.

ಸೆಪ್ಟೆಂಬರ್‌ 17ರಂದು ಪೊಲೀಸ್ ಪರೇಡ್ ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಗೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ನಿಮಿತ್ಯ ಮುಖ್ಯಮಂತ್ರಿಗಳಿಂದ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ತಂಡದಿಂದ ಪರೇಡ್ ಮೈದಾನದಲ್ಲಿ ಅಂದು ಬೆಳಿಗ್ಗೆ 8ರಿಂದ 11 ಗಂಟೆ ವರೆಗೆ ಸಮೂಹ ನೃತ್ಯ ಮತ್ತು ಖ್ಯಾತ ಕಲಾವಿದ ವಿಲಾಸ್‌ ನಾಯಕ್ ಅವರಿಂದ ಲೈವ್ ಪೇಂಟಿಂಗ್ ಕಾರ್ಯಕ್ರಮ ನಡೆಯಲಿದೆ.

ಡಾ.ಎಸ್.ಎಂ ಪಂಡಿತ್ ರಂಗಮಂದಿರದಲ್ಲಿ ಸಂಜೆ 6.30ರಿಂದ 8 ಗಂಟೆವರೆಗೆ ಗಣೇಶ‌ ವಂದನೆ,‌ ವಿವೇಕ ಮುರಳಿಧರನ್ ಅವರಿಂದ ಸ್ಟ್ಯಾಂಡಪ್‌ ಕಾಮಿಡಿ,‌ ಸ್ಟೆಪ್ ಎನ್ ಸ್ಟೈಲ್ ತಂಡದಿಂದ ಸಮಕಾಲೀನ‌ ನೃತ್ಯ, ಎಸ್.ಸೋನು ವೇಣುಗೋಪಾಲ ಅವರಿಂದ ಸ್ಟ್ಯಾಂಡಪ್‌ ಕಾಮಿಡಿ ಮತ್ತು ರಾತ್ರಿ 8ರಿಂದ 10 ವರೆಗೆ ಬೆಂಗಳೂರು ಮೂಲದ ಅಕೌಸ್ಟಿಕ್ ಸಾಗಾ ತಂಡವು ಬಹುಭಾಷಾ ಬ್ಯಾಂಡ್ ಪ್ರಸ್ತುತಪಡಿಸಲಿದೆ.

ಪಬ್ಲಿಕ್ ಗಾರ್ಡನ್‌ನಲ್ಲಿ ಸಂಜೆ 6.30ರಿಂದ 8 ಗಂಟೆ ವರೆಗೆ ನೃತ್ಯ ಕಾರ್ಯಕ್ರಮ, ಸುಗಮ‌ ಸಂಗೀತ, ನೃತ್ಯ ಕಾರ್ಯಕ್ರಮ, ಸೃಷ್ಠಿ ಅವರಿಂದ ಸ್ಟ್ಯಾಂಡಪ್‌ ಕಾಮಿಡಿ ನಡೆಯಲಿದೆ. ರಾತ್ರಿ 8ರಿಂದ 10 ಗಂಟೆಯವರೆಗೆ ಝೀ ಕನ್ನಡ ಸರೆಗಮಪ ತಂಡದಿಂದ ಸಂಗೀತ ಪ್ರದರ್ಶನ ನಡೆಯಲಿದೆ.

ಅಪ್ಪನ ಕೆರೆಯ ಆವರಣದಲ್ಲಿ ಸಂಜೆ 7 ಗಂಟೆಯಿಂದ ರಾತ್ರಿ 9.30ರ ವರೆಗೆ ಪ್ರತಿ 30 ನಿಮಿಷಕ್ಕೊಮ್ಮೆ ಧ್ವನಿ ಬೆಳಕು ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *