ಹಬ್ಬದ ಋತುವಿನಲ್ಲಿ 2.5 ಲಕ್ಷ ಉದ್ಯೋಗ ಸೃಷ್ಟಿ: ಫ್ಲಿಪ್‌ಕಾರ್ಟ್

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಬೆಂಗಳೂರು
ಪ‍್ರಸಕ್ತ ಹಬ್ಬದ ಋತುವಿನಲ್ಲಿ 2.5 ಲಕ್ಷಕ್ಕೂ ಅಧಿಕ ನೇರ ಮತ್ತು ಪರೋಕ್ಷ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದಾಗಿ ಇ–ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್ ತಿಳಿಸಿದೆ.

ಈ ಪೈಕಿ ಅಂದಾಜು 75 ಸಾವಿರ ಉದ್ಯೋಗಗಳನ್ನು (ಶೇ.30ರಷ್ಟು) ಮೊದಲ ಬಾರಿಗೆ ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವವರಿಗೆ ಮೀಸಲಿರಿಸಲಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಉದ್ಯೋಗಾವಕಾಶಗಳಲ್ಲಿ ಶೇ.60ರಷ್ಟು ಅವಕಾಶಗಳು ಕೊನೆಯ ಹಂತದ ವಿತರಣಾ ವಿಭಾಗದಲ್ಲಿವೆ. ಕಂಪನಿಯ ಪೂರೈಕೆ ವಿಭಾಗದ ಹುದ್ದೆಗಳಲ್ಲಿ ಮಹಿಳೆಯರು ಶೇ.20ರಷ್ಟಿದ್ದು, ಗೋದಾಮು ಮತ್ತು ವಿತರಣಾ ಕಾರ್ಯಾಚರಣೆಗಳಲ್ಲಿ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಭಾಗವಹಿಸುವಿಕೆ ಹೆಚ್ಚಾಗಿದೆ ಎಂದು ಹೇಳಿದೆ.

Leave a Reply

Your email address will not be published. Required fields are marked *