ಕೈಗಡ ಹಣ ವಾಪಸ್‌ ಕೇಳಿದಕ್ಕೆ ಹಲ್ಲೆ: ಇಬ್ಬರ ವಿರುದ್ಧ ಎಫ್ಐಆರ್

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಚಿತ್ತಾಪುರ
ತಾಲೂಕಿನ ಭಾಗೋಡಿ ಗ್ರಾಮದ ಸೂರ್ಯಕಾಂತ ಜಮಾದಾರ ಅದೆ ಗ್ರಾಮದ ಹುಣಚಪ್ಪ ಮರತೂರ ಅವರಿಗೆ ಕೈಗಡ ರೂಪದಲ್ಲಿ ನೀಡಿದ್ದ 2 ಲಕ್ಷ ಹಣವನ್ನು ವಾಪಸ್‌ ಕೇಳಿದಕ್ಕೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಸೂರ್ಯಕಾಂತ ಲಕ್ಷ್ಮಣ ಜಮಾದಾರ ಅವರು ಆ.26ರಂದು ಹಣ ವಾಪಸ್‌ ನೀಡುವಂತೆ ಹುಣಚಪ್ಪ ಅವರ ಮನೆಗೆ ತೆರಳುತ್ತಿದ್ದರು. ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಹತ್ತಿರ ಹುಣಚಪ್ಪ ಎದುರಾದಾಗ ಹಣ ವಾಪಸ್‌ ನೀಡುವಂತೆ ಕೇಳುತ್ತಿದ್ದಂತೆ ಹುಣಚಪ್ಪ ಹಲ್ಲೆ ಮಾಡಿದ್ದಾರೆ. ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೂರ್ಯಕಾಂತ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಹುಣಚಪ್ಪ ಮಲ್ಲಪ್ಪ ಮರತೂರ, ರಾಜು ಮಲ್ಲಪ್ಪ ಮರತೂರ ವಿರುದ್ಧ ಸೆ.10ರಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *