ತಪ್ಪು ತಿದ್ದಿ ಭವಿಷ್ಯಕ್ಕೆ ಬುನಾದಿ ಹಾಕುವ ಶಿಕ್ಷಕರು ಸರ್ವಶ್ರೇಷ್ಠರು: ವೀರಣ್ಣ ಯಾರಿ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ವಾಡಿ
ಬಾಲ್ಯಾವಸ್ಥೆಯ ನಮ್ಮ ತಪ್ಪನ್ನು ತಿದ್ದಿ ತೀಡಿ ನಮ್ಮ ಭವಿಷ್ಯದ ಜೊತೆಗೆ ದೇಶದ ಪ್ರಗತಿಗಾಗಿ ಭದ್ರ ಬುನಾದಿ ಹಾಕುವ ಶಿಕ್ಷಕರನ್ನು ಸಮಾಜದಲ್ಲಿ ಪೂಜನೀಯ ಭಾವನೆಯಿಂದ ಕಾಣುತ್ತೆವೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಧಾಕೃಷ್ಣನ್ ಅವರು ರಾಷ್ಟ್ರಪತಿಯಾಗಿದ್ದ ಸಂಧರ್ಭದಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಲು ವಿದ್ಯಾರ್ಥಿಗಳು ಮುಂದಾದಾಗ, ನನ್ನ ಹುಟ್ಟು ಹಬ್ಬದ ಬದಲು ಸಪ್ಟೆಂಬರ್ 5 ಅನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿ ಎಂದು ಇಡಿ ವಿದ್ಯಾರ್ಥಿಗಳ ಸಮೂಹಕ್ಕೆ ಪ್ರೀತಿಯ ಕರೆ ನೀಡಿದರು, ಸಮಾಜದಲ್ಲಿ ಶಿಕ್ಷಕರ ಪಾತ್ರದ ಶ್ರೇಷ್ಠತೆ ಸರ್ವಪಲ್ಲಿ ಅವರು ಸಾರಿದರು ಎಂದರು.

ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು ಪೋಷಕರ ಸ್ಥಾನವನ್ನು ಪಡೆದುಕೊಳ್ಳುತ್ತಾರೆ, ಅವರಿಗೆ ಎಷ್ಟು ಗೌರವಿಸಿದರು ಕಡಿಮೆಯೇ, ಸಣ್ಣ ಮಗುವಿನಿಂದ ಹಿಡಿದು ಸಮಾಜದಲ್ಲಿ ಉನ್ನತ ವ್ಯಕ್ತಿಗಳನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದು ಶಿಕ್ಷಕ ವೃತ್ತಿಯನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಅರ್ಜುನ ಕಾಳೆಕರ, ಶರಣಗೌಡ ಚಾಮನೂರ, ಮಲ್ಲಿಕಾರ್ಜುನ ಸಾತಖೇಡ, ಗುಂಡುಗೌಡ ಚಾಮನೂರ, ಪ್ರಕಾಶ ರದ್ದೆವಾಡಿ, ರಾಜಶೇಖರ ಧೂಪದ್, ಕರಬಸಯ್ಯ ಮಠಪತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *