ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಕ್ರೀಡಾ ಲೋಕದ ಸಾಧಕ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಶಹಾಬಾದ್
ಹಾಕಿ ಮಾಂತ್ರಿಕ ಎಂದೆ ಪ್ರಸಿದ್ದರಾದ ಮೇಜರ್ ಧ್ಯಾನ್ ಚಂದ್ ಕ್ರೀಡಾ ಕ್ಷೇತ್ರದ ಹೆಮ್ಮೆಯ ಸಾಧಕ ಎಂದು ದೈಹಿಕ ಶಿಕ್ಷಕ ಶಿವಕುಮಾರ್ ಸರಡಗಿ ಹೇಳಿದರು.‌

ತಾಲೂಕಿನ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ಕ್ರೀಡಾ ದಿನ’ ಉದ್ದೇಶಿಸಿ ಮಾತನಾಡಿದ ಅವರು, ಹಾಕಿ ಕ್ರೀಡೆಯಲ್ಲಿ ಭಾರತದ ಹೆಸರನ್ನು ಅಜರಾಮರಗೊಳಿಸಿದರು. ಸತತವಾಗಿ ಮೂರು ಒಲಂಪಿಕ್ಸ್’ನಲ್ಲಿ ಭಾರತದ ಹಾಕಿ ತಂಡ ಇವರ ನೇತೃತ್ವದಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು. ಇವರ ಆಟದಿಂದ ಪ್ರಭಾವಿತರಾದ ಅನೇಕರು ಅವರನ್ನು ಹಾಕಿ ಮಾಂತ್ರಿಕ ಎಂದು ಕರೆದರು.

ಅವರ ಸಾಧನೆಯಿಂದ ಭಾರತೀಯ ಹಾಕಿಗೆ ಜಗತ್ತಿನಾದ್ಯoತ ಗೌರವ ದೊರೆಯಿತು. ಧ್ಯಾನ್ ಚಂದ್ ಅವರ ಬದುಕು ಕೇವಲ ಪಾದಕಗಳು ಮತ್ತು ದಾಖಲೆಗೆ ಮಾತ್ರ ಸೀಮಿತವಾಗಿರಲಿಲ್ಲ. ಅವರಲ್ಲಿ ಅಪಾರ ಶಿಸ್ತು, ಸರಳತೆ ಮತ್ತು ದೇಶಭಕ್ತಿ ಇತ್ತು. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು, ಕ್ರೀಡೆಯನ್ನು ದೇಶ ಸೇವೆಯ ಒಂದು ಮಾರ್ಗವೆಂದು ಪರಿಗಣಿಸಿದ್ದರು ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಈಶ್ವರ ಬಾಳಿ, ವಿಭಾಗದ ಪ್ರಮುಖರಾದ ವಿದ್ಯಾಧರ ಖಂಡಳ, ಗಂಗಪ್ಪ ಕಟ್ಟಿಮನಿ, ವಿಜಯಲಕ್ಷ್ಮಿ ಬಮ್ಮನಳ್ಳಿ, ಕಾವೇರಿ ಮಡಿವಾಳ, ದೈಹಿಕ ಶಿಕ್ಷಕ ರೋಹಿತ ರಾವೂರಕರ್, ಶ್ಯಾಮರಾಯ ದೊಡ್ಡಮನಿ, ಶರಣು ಸಜ್ಜನ್, ಪಾರ್ವತಿ ದೊಡ್ಡಮನಿ ಸೇರಿದಂತೆ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *