ಸುದ್ದಿ ಸಂಗ್ರಹ ಬೆಂಗಳೂರು
ಕೆಪಿಎಸ್ಸಿ ನೇಮಕಾತಿ ಹಗರಣ ಕೇಸ್ನಲ್ಲಿ ಸಿಐಡಿ ವಿಚಾರಣೆ ಎದುರಿಸುತ್ತಿರುವ ಶಿವಶಂಕರಪ್ಪ ಸಾಹುಕಾರ್ ಹಗರಣ ಒಪ್ಪಿಕೊಳ್ಳಲು ನಕಾರ ವ್ಯಕ್ತಪಡಿಸಿದ್ದಾರೆ.
ಸಿಐಡಿ ವಿಚಾರಣೆ ಸಂದರ್ಭದಲ್ಲಿ, ನಾನು ಮಗಳ ವಿಚಾರದಲ್ಲಿ ತಪ್ಪು ಮಾಡಿದ್ದೆನೆಯೇ ಹೊರತು ಪರೀಕ್ಷೆಯಲ್ಲಿ ಅಲ್ಲ. ಮಗಳ ವಿಚಾರದಲ್ಲಿ ತಾಂತ್ರಿಕ ತಪ್ಪುಗಳಾಗಿರಬಹುದು. ಅದನ್ನು ಹೊರತುಪಡಿಸಿ ಯಾರೊಂದಿಗೂ ನಾನು ವ್ಯವಹಾರ ಮಾಡಿಲ್ಲ ಎಂದು ಹೇಳಿದ್ದಾರೆನ್ನಲಾಗಿದೆ.
ಗ್ಯಾನೇಂದ್ರ ಜೊತೆ ನನ್ನದು ಬರಿ ಆಡಳಿತ ವ್ಯವಹಾರ, ಅದನ್ನು ಬಿಟ್ಟು ಹಣಕಾಸಿನ ಮಾತುಕತೆಯಾಗಲಿ, ಪರೀಕ್ಷೆ ವಿಚಾರವಾಗಲಿ ಮಾತನಾಡಿಲ್ಲ. ಬಸವರಾಜ್ ಕನ್ನಾಳೆಯನ್ನು ನಾನು ಮುಖಾಮುಖಿ ಭೇಟಿಯಾಗಿಲ್ಲ. ನಾನು ಈ ಅವ್ಯವಹಾರದಲ್ಲಿ ಪರೋಕ್ಷವಾಗಿಯೂ ಕೈ ಹಾಕಿಲ್ಲ ಎಂದು ಸಿಐಡಿ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೇ ಸಾಕಷ್ಟು ವಿಚಾರದಲ್ಲಿ ನೋವು ಪಟ್ಟಿದ್ದೆನೆ ಎಂದು ಸಿಐಡಿ ಮುಂದೆ ಶಿವಶಂಕರಪ್ಪ ಗೋಳಾಡಿದ್ದಾರೆ.