ಜುಡೋ ಬಂಜಾರಾ ಫೌಂಡೇಶನ್ ರಾಜ್ಯ ಸಂಚಾಲಕರಾಗಿ ಅನಿಲ್ ಮಹಾರಾಜ್ ಆಯ್ಕೆ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ಜೂಡೋ ಬಂಜಾರಾ ಫೌಂಡೇಶನ್ ಸಂಘದ ವತಿಯಿಂದ ತರಿ ತಾಂಡಾದ ಅನಿಲ್ ಮಹಾರಾಜ್ ಅವರನ್ನು ಸಂಘದ ರಾಜ್ಯ ಸಂಚಾಲಕರಾಗಿ ಆಯ್ಕೆ ಮಾಡಲಾಯಿತು.

ತಮ್ಮನ್ನು ರಾಜ್ಯ ಸಂಚಾಲಕರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಜೂಡೋ ಬಂಜಾರಾ ಫೌಂಡೇಶನ್‌ನ ರಾಜ್ಯಾಧ್ಯಕ್ಷ ಡಾ. ಸುಭಾಶ್ಚಂದ್ರ ರಾಠೋಡ, ಜಿಲ್ಲಾಧ್ಯಕ್ಷ ರಾಜು ಪವಾರ್ ಮುಂಬೈ, ಮುಖಂಡರಾದ ಖೇಮಸಿಂಗ್ ಆಡೆ, ವಿನೋದ್ ಚವಾಣ್ ಕೃಷ್ಣಪ್ಪ ಕಲ್ದೇವರು ಅವರಿಗೆ ಧನ್ಯವಾದಗಳು ಅರ್ಪಿಸಿದರು.

ಈ ಸಂದರ್ಭದಲ್ಲಿ ಅನಿಲ್ ಮಹಾರಾಜ್ ಮಾತನಾಡಿ, ‘ನನ್ನ ಮೇಲೆ ಭರವಸೆ ಮತ್ತು ವಿಶ್ವಾಸವಿಟ್ಟು ನೀಡಿರುವ ಈ ಜವಾಬ್ದಾರಿಯನ್ನು ಅತ್ಯಂತ ಗೌರವದಿಂದ ಸ್ವೀಕರಿಸುತ್ತೆನೆ. ಬಂಜಾರಾ ಸಮಾಜದ ಏಕತೆ,
ಸರ್ವಾಂಗೀಣ ಅಭಿವೃದ್ಧಿ, ಹಕ್ಕುಗಳ ರಕ್ಷಣೆ ಹಾಗೂ ಸಮಾಜ ಸೇವೆಯಲ್ಲಿ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಶ್ರಮಿಸುತ್ತೆನೆ. ಸಂಘಟನೆಯ ಹಿರಿಯರ ಮಾರ್ಗದರ್ಶನ, ಆಶೀರ್ವಾದ ಮತ್ತು ಸಮಾಜದ ಸಹಕಾರ ಸದಾ ಇರಲಿ’ ಎಂದರು.

Leave a Reply

Your email address will not be published. Required fields are marked *