ಉತ್ತಮ ಸಮಾಜ ನಿರ್ಮಾಣಕ್ಕೆ ಗುರು-ಹಿರಿಯರ ಮಾರ್ಗದರ್ಶನ ಅಗತ್ಯ: ಡಾ.ಸದಾನಂದ ಪೆರ್ಲ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಹಿರಿಯ ನಾಗರಿಕರ ಅನುಭವ ಮತ್ತು ಆದರ್ಶಗಳು ಭವಿಷ್ಯದ ಬಾಳಿಗೆ ದಾರಿ ದೀಪವಾಗುತ್ತದೆ‌. ಉತ್ತಮ ಸಮಾಜ ನಿರ್ಮಾಣಕ್ಕೆ ಗುರು ಹಿರಿಯರ ಮಾರ್ಗ ದರ್ಶನ ಅಗತ್ಯ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ಹೇಳಿದರು.

ನಗರದ ದನಗರ ಗಲ್ಲಿಯ ಕೋರಿ ಮಠದ ರೇವಣಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಶುಕ್ರವಾರ ಜರುಗಿದ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ವಿಶ್ವ ಹಿರಿಯ ನಾಗರಿಕರ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, 1988ರಲ್ಲಿ ಅಮೆರಿಕದ ಅಧ್ಯಕ್ಷರಾದ ರೊನಾಲ್ಡ್ ರೇಗನ್ ವಿಶ್ವಸಂಸ್ಥೆಯಲ್ಲಿ ಮಂಡಿಸಿದ ನಿರ್ಣಯದಂತೆ ಪ್ರತಿ ವರ್ಷ ಆಗಸ್ಟ್-21 ರಂದು ‘ವಿಶ್ವ ಹಿರಿಯ ನಾಗರಿಕರ ದಿನ’ವನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಹಿರಿಯ ನಾಗರಿಕರ ವೃದ್ಧಾಪ್ಯ ಸಂತೋಷದಾಯಕವಾಗಿ ಆರೋಗ್ಯ ಪೂರ್ಣ ಮತ್ತು ಆರ್ಥಿಕ ಸಬಲತೆ ಯಿಂದ ನೆಮ್ಮದಿ ಕಳೆಯುವಂತಾಗಲು ಎಲ್ಲರೂ ಕೈಜೋಡಿಸಬೇಕು. ಹಿರಿಯರ ಆದರ್ಶ ಹಾಗೂ ಅನುಭವದಲ್ಲಿ ಬದುಕನ್ನು ರೂಪಿಸಲು ಎಲ್ಲರೂ ಮುಂದಾಗ ಬೇಕಾಗಿದೆ ಎಂದರು.

ಪ್ರಸಕ್ತ ಕಾಲದಲ್ಲಿ ಹಿರಿಯರ ಆತ್ಮ ಗೌರವ ಕಾಪಾಡಿ ನೆಮ್ಮದಿಯ ಬದುಕು ನೀಡುವ ಬದಲು ಹೆತ್ತ ಮಕ್ಕಳೇ ವೃದ್ಧಾಶ್ರಮಕ್ಕೆ ತಳ್ಳುವ ಮತ್ತು ನಿಂದನೆಗಳಿಗೆ ಗುರಿ ಮಾಡುತ್ತಿರು ವುದು ಅಕ್ಷಮ್ಯ ಅಪರಾಧ ವಾಗಿದೆ. ಯುವ ಜನಾಂಗವು ಹಿರಿಯರ ಕೊಡುಗೆಯನ್ನು ಗೌರವಿಸಿ ಅವರಿಗೆ ಉತ್ತಮ ಜೀವನ ಕಲ್ಪಿಸಲು ಪ್ರತಿಜ್ಞೆ ಕೈಗೊಳ್ಳಬೇಕು ಎಂದರು.
ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿ, ಹಿರಿಯರು ನಮ್ಮ ಸಮಾಜದ ಆಸ್ತಿ. ಹಿರಿಯ ಜೀವಗಳು ಗೌರವಯುತವಾಗಿ ಜೀವನ ಮಾಡಲು ಕುಟುಂಬದಲ್ಲಿ ಸೌಲಭ್ಯ ಕಲ್ಪಿಸಿ ಅವರು ಬೋಧಿಸುವ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಲು ನಾವೆಲ್ಲಾ ಮುಂದಾಗಬೇಕು ಎಂದರು.

ಸಾನಿಧ್ಯ ವಹಿಸಿದ ಪ್ರವಚನಕಾರ ಅಗತೀರ್ಥದ ಬೀರಲಿಂಗೇಶ್ವರ ಸಿದ್ದಾಶ್ರಮದ ಪೂಜ್ಯಶ್ರೀ ಮಾಳಿಂಗರಾಯ ದೇವರು ಮಾತನಾಡಿ, ಹಿರಿಯರ ಜೀವನವು ಕಿರಿಯ ರಿಗೆ ಮಾದರಿಯಾಗಿ ಜೀವನದಲ್ಲಿ ಸಂಸ್ಕಾರ ರೂಪಿಸಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೋರಿ ಮಠದ ಆಡಳಿತ ಮಂಡಳಿಯ ಪ್ರಧಾನ ಕಾರ್ಯ ದರ್ಶಿ ರಜನಿಕಾಂತ ಮೇಳಕುಂದಿ, ಪ್ರಮುಖ ರಾದ ಶಿವಾಜಿ ಖಂಡೋಜಿ, ಉಮೇಶ್ ರಾಠೋಡ, ಶಾಮರಾವ್ ಎಸ್. ಹೊದಲೂರು, ರಾಜಶೇಖರ ಬಿರಾದಾರ, ಗುರುಲಿಂಗಪ್ಪ ಪೂಜಾರಿ, ಶಿವಯೋಗೆಪ್ಪಾ ಎಸ್. ಬಿರಾದಾರ, ಶಿವಶರಣಪ್ಪ ಕೋಲಿ, ಲಲಿತಾ ಕುಮಾರಿ ಕವಿತಾ,ಶೃತಿ ಕೆ, ಕುಲಕರ್ಣಿ ರಾಜೇಶ್ವರಿ ಬನಸೋಡೆ, ಅಶ್ವಿನಿ, ವಿಮಲಾ ಭೀಮಳ್ಳಿ, ರೇಖಾರಾಣಿ, ಬಾಬುರಾವ್ ಸುಜಾತ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *