ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್‌: 170 ಕೋಟಿ ವೇತನ ಹಿಂಬಾಕಿ ಬಿಡುಗಡೆ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಬೆಂಗಳೂರು
ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ಕೊಟ್ಟಿದೆ. 170 ಕೋಟಿ ರೂ ವೇತನ ಹಿಂಬಾಕಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.

26 ತಿಂಗಳ ವೇತನ ಹಿಂಬಾಕಿಯ 1,271 ಕೋಟಿ ರೂ ಕೊಡಬೇಕಿತ್ತು. ಈ ಹಿಂದೆ ಸರ್ಕಾರ 450 ಕೋಟಿ ಬಿಡುಗಡೆ ಮಾಡಿತ್ತು. 821 ಕೋಟಿ ಹಿಂಬಾಕಿಯಲ್ಲಿ ಇಂದು ಮತ್ತೆ 170 ಕೋಟಿ ಬಿಡುಗಡೆ ಮಾಡಿದೆ.

ಉಳಿದ 651 ಕೋಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ಭರವಸೆ ಸಾರಿಗೆ ಸಚಿವರು ನೀಡಿದ್ದಾರೆ. ಸಾರಿಗೆ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕಲ್ಪಿಸಲಾಗುವುದು. ನಾಲ್ಕು ನಿಗಮಗಳಿಗೆ ಯೋಜನೆ ವಿಸ್ತರಣೆ ಆಗಲಿದೆ ಎಂದು ಉಚಿತ ವೈದ್ಯಕೀಯ ಸೇವೆ ನೀಡುವ ಭರವಸೆಯನ್ನು ಸಾರಿಗೆ ಸಚಿವರು ನೀಡಿದ್ದಾರೆ.

Leave a Reply

Your email address will not be published. Required fields are marked *